ಭಾರತದ ಏಳಿಗೆ ತಡೆಯಲು ವಿರೋಧಿಗಳಿಂದ ಸುಳ್ಳು ನಿರೂಪಣೆ ಸೃಷ್ಟಿ: RSS ಮುಖ್ಯಸ್ಥ ಮೋಹನ್ ಭಾಗವತ್

ವೇಗವಾಗಿ ಬೆಳೆಯುತ್ತಿರುವ ಭಾರತದ ಶಕ್ತಿ ಮತ್ತು ಏಳಿಗೆಯನ್ನು ದುರ್ಬಲಗೊಳಿಸಲು ದೇಶದ ಒಳಗೆ ಮತ್ತು ಹೊರಗೆ ಸುಳ್ಳು ನಿರೂಪಣೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
Mohan Bhagwat
ಮೋಹನ್ ಭಾಗವತ್
Updated on

ನವದೆಹಲಿ: ವೇಗವಾಗಿ ಬೆಳೆಯುತ್ತಿರುವ ಭಾರತದ ಶಕ್ತಿ ಮತ್ತು ಏಳಿಗೆಯನ್ನು ದುರ್ಬಲಗೊಳಿಸಲು ದೇಶದ ಒಳಗೆ ಮತ್ತು ಹೊರಗೆ ಸುಳ್ಳು ನಿರೂಪಣೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಮಹಾರಾಣ ಪ್ರತಾಪ್ ಜಯಂತಿಯ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ಭಾಗವತ್, ಇಂದು ಕೆಲವರು ಭಾರತ ಏಳಿಗೆ ಕಾಣದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಉದ್ದೇಶಕ್ಕಾಗಿ ಸುಳ್ಳು ನಿರೂಪಣೆಗಳನ್ನು ರಚಿಸಲಾಗುತ್ತಿದೆ. ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಜನರನ್ನು ದಾರಿ ತಪ್ಪಿಸಲು ವಿವಿಧ ತಂತ್ರಗಳನ್ನು ಬಳಸಲಾಗುತ್ತಿದೆ ಎಂದು ಹೇಳಿದರು.

ಸುಳ್ಳು ನಿರೂಪಣೆಗಳು ಮಾಡುತ್ತಿರುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರು ಅಧಿಕಾರ, ಹಣ ಮತ್ತು ಸಂಘಟನಾ ಸಾಮರ್ಥ್ಯದಂತಹ ಗಮನಾರ್ಹ ಶಕ್ತಿಯನ್ನು ಹೊಂದಿದ್ದಾರೆ. ಇದರ ಹೊರತಾಗಿಯೂ, ಜನರು ತಮ್ಮ ಮೌಲ್ಯಗಳ ಮೇಲೆ ದೃಢವಾಗಿ ನಿಲ್ಲಬೇಕು. ಭಾರತದ ಪ್ರಗತಿಯು ತನ್ನದೇ ಆದ ಕಲ್ಯಾಣಕ್ಕಾಗಿ ಮಾತ್ರವಲ್ಲದೆ ಇಡೀ ಪ್ರಪಂಚದ ಕಲ್ಯಾಣಕ್ಕಾಗಿ ಅತ್ಯಗತ್ಯ ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಒತ್ತಿ ಹೇಳಿದರು. ಜಗತ್ತು ಬಲವಾದ ಭಾರತವನ್ನು ಹೊಂದುವುದು ಅತ್ಯಂತ ಮುಖ್ಯ ಎಂದರು.

ಹಲ್ದಿಘಾಟಿ ಮತ್ತು ಮಹಾರಾಣಾ ಪ್ರತಾಪ್ ಅವರ ಐತಿಹಾಸಿಕ ಯುದ್ಧದ ಪರಂಪರೆಯನ್ನು ನೆನಪಿಸಿಕೊಂಡ ಮೋಹನ್ ಭಾಗವತ್, ನಮ್ಮ ಇತಿಹಾಸ ಗುಲಾಮಗಿರಿಯದ್ದಲ್ಲ ಎಂದು ಹೇಳಿದರು. ಇದು ನಮ್ಮನ್ನು ಗುಲಾಮರನ್ನಾಗಿ ಮಾಡಲು ಪ್ರಯತ್ನಿಸಿದವರ ವಿರುದ್ಧದ ಹೋರಾಟದ ಇತಿಹಾಸ. ಮಹಾರಾಣಾ ಪ್ರತಾಪ್ ಅವರ ಹೋರಾಟವು ಧರ್ಮ, ಸಂಸ್ಕೃತಿ ಮತ್ತು ಸ್ವಾಭಿಮಾನವನ್ನು ರಕ್ಷಿಸುವುದಾಗಿತ್ತು. ಮಹಾರಾಣಾ ಪ್ರತಾಪ್ ಯಾವುದೇ ವೈಯಕ್ತಿಕ ಲಾಭಕ್ಕಾಗಿ ಹೋರಾಡಲಿಲ್ಲ. ಸಮಾಜ, ಸಂಸ್ಕೃತಿ ಮತ್ತು ತನ್ನ ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ಅವರು ದಬ್ಬಾಳಿಕೆಯ ವಿರುದ್ಧ ಹೋರಾಡಿದ್ದರು ಎಂದರು.

ಇಂದಿನ ಸವಾಲುಗಳನ್ನು ಎದುರಿಸಲು, ಪ್ರತಿಕೂಲ ಸಂದರ್ಭಗಳಲ್ಲಿಯೂ ದೃಢವಾಗಿ ನಿಲ್ಲುವುದನ್ನು ಐತಿಹಾಸಿಕ ವೀರರಿಂದ ನಾವು ಕಲಿಯಬೇಕು ಎಂದು ಅವರು ಹೇಳಿದರು. ಭಾರತದ ನಿಜವಾದ ಶಕ್ತಿ ಕೇವಲ ಸಂಖ್ಯೆಯಲ್ಲಿ ಅಥವಾ ಭೌತಿಕ ಸಂಪನ್ಮೂಲಗಳಲ್ಲಿ ಅಲ್ಲ, ಆದರೆ ಅದರ ಸಾಂಸ್ಕೃತಿಕ ಮೌಲ್ಯಗಳಲ್ಲಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com