ಭಾರತದ ಅಪಾಚೆ ಹೆಲಿಕಾಫ್ಟರ್‌, M777 ಹೊವಿಟ್ಜರ್‌ಗಳಿಗೆ $482.2 ಮಿಲಿಯನ್ ಮೊತ್ತದ ಅಮೆರಿಕದ ಬೆಂಬಲದ ಪ್ಯಾಕೇಜ್!

ಅಧಿಸೂಚನೆಯ ಪ್ರಕಾರ, ಭಾರತವು ತನ್ನM777A2 ಅಲ್ಟ್ರಾ-ಲೈಟ್‌ ಹೊವಿಟ್ಜರ್‌ಗಳಿಗೆ ದೀರ್ಘಾವಧಿಯ ಸುಸ್ಥಿರ ಬೆಂಬಲವನ್ನು ಕೋರಿದೆ. ಅವುಗಳನ್ನು ವಿಶೇಷವಾಗಿ ಪರ್ವತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.
Apache helicopters
ಅಪಾಚೆ ಹೆಲಿಕಾಫ್ಟರ್‌
Updated on

ನವದೆಹಲಿ: ಭಾರತದ AH-64E ಅಪಾಚೆ ಹೆಲಿಕಾಪ್ಟರ್‌ಗಳು ಮತ್ತು M777A2 ಅಲ್ಟ್ರಾ-ಲೈಟ್‌ ಹೊವಿಟ್ಜರ್‌ಗಳಿಗೆ ಸುಸ್ಥಿರ ಬೆಂಬಲದ ಸೇವೆಗಳು ಮತ್ತು ಸಂಬಂಧಿತ ಉಪಕರಣಗಳಿಗೆ ಅಂದಾಜು 482.2 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಪ್ರಸ್ತಾವಿತ ಪ್ಯಾಕೇಜ್ ಅಧಿಸೂಚನೆಯನ್ನು ಅಮೆರಿಕ ಪ್ರಕಟಿಸಿದೆ.

ಅಮೆರಿಕದ ವಿದೇಶಿ ಮಿಲಿಟರಿ ಮಾರಾಟ ಕಾರ್ಯಕ್ರಮವನ್ನು ನಿರ್ವಹಿಸುವ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ ಜೂನ್‌ 17 ರಂದು ಫೆಡರಲ್‌ ರಿಜಿಸ್ಟರ್‌ನಲ್ಲಿ ಶಸ್ತ್ರಾಸ್ತ್ರ ಮಾರಾಟ ಅಧಿಸೂಚನೆಯನ್ನು ಹೊರಡಿಸಿತು.ಮೇ 18 ರಂದು, ವಿದೇಶಾಂಗ ಇಲಾಖೆಯು ಭಾರತಕ್ಕೆ ಅಪಾಚೆ ಹೆಲಿಕಾಪ್ಟರ್‌ಗಳು ಮತ್ತು M777A2 ಅಲ್ಟ್ರಾ-ಲೈಟ್‌ ಹೊವಿಟ್ಜರ್‌ಗಳ ಸೇವೆಗಳ ಸಂಭಾವ್ಯ ಮಾರಾಟದ ಬಗ್ಗೆ ಯುಎಸ್‌ ಕಾಂಗ್ರೆಸ್‌‍ಗೆ ಮಾಹಿತಿ ನೀಡಿತು.

ಅಧಿಸೂಚನೆಯ ಪ್ರಕಾರ, ಭಾರತವು ತನ್ನM777A2 ಅಲ್ಟ್ರಾ-ಲೈಟ್‌ ಹೊವಿಟ್ಜರ್‌ಗಳಿಗೆ ದೀರ್ಘಾವಧಿಯ ಸುಸ್ಥಿರ ಬೆಂಬಲವನ್ನು ಕೋರಿದೆ. ಅವುಗಳನ್ನು ವಿಶೇಷವಾಗಿ ಪರ್ವತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

ಇದಲ್ಲದೇ ಪೂರಕ ವಸ್ತುಗಳು; ಬಿಡಿಭಾಗಗಳು, ದುರಸ್ತಿ ಮತ್ತು ಹಿಂತಿರುಗಿಸುವಿಕೆ; ತರಬೇತಿ; ತಾಂತ್ರಿಕ ನೆರವು; ಕ್ಷೇತ್ರ ಸೇವಾ ಪ್ರತಿನಿಧಿ; ಡಿಪೋ ಸಾಮರ್ಥ್ಯ; ಮತ್ತು ಲಾಜಿಸ್ಟಿಕ್‌ ಮತ್ತು ಪ್ರೋಗ್ರಾಂ ಬೆಂಬಲದ ಇತರ ಸಂಬಂಧಿತ ಅಂಶಗಳು ಸೇರಿವೆ. ಇದರ ಅಂದಾಜು ಮೊತ್ತ 230 ಮಿಲಿಯನ್ ಡಾಲರ್ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಭಾರತವು AH-64E ಅಪಾಚೆ ಹೆಲಿಕಾಪ್ಟರ್ ಗಳು, ಎಂಜಿನಿಯರಿಂಗ್‌ ತಾಂತ್ರಿಕ ಮತ್ತು ಲಾಜಿಸ್ಟಿಕ್‌ ಬೆಂಬಲ ಸೇವೆಗಳು, ತಾಂತ್ರಿಕ ದತ್ತಾಂಶ ಮತ್ತು ಪ್ರಕಟಣೆಗಳು, ಸಿಬ್ಬಂದಿ ತರಬೇತಿ ಮತ್ತು ಮತ್ತಿತರ ಬೆಂಬಲವನ್ನು ಕೋರಿದೆ ಎಂದು ಅಮೆರಿಕದ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ ಪ್ರತ್ಯೇಕ ಅಧಿಸೂಚನೆಯಲ್ಲಿ ತಿಳಿಸಿದೆ.

Apache helicopters
ಲೇಹ್‌ನಲ್ಲಿ ಚೀತಾ ಹೆಲಿಕಾಪ್ಟರ್ ಅಪಘಾತ: ಪವಾಡಸದೃಶ್ಯ ಬದುಕುಳಿದ ಮೇಜರ್ ಜನರಲ್; ಸೆಲ್ಫಿ ವೈರಲ್!

ಅಪಾಚೆ ಬೆಂಬಲ ಪ್ಯಾಕೇಜ್‌ನ ಅಂದಾಜು ವೆಚ್ಚ 198.2 ಮಿಲಿಯನ್‌ ಆಗಿದೆ. ಭಾರತೀಯ ಸೇನೆಯು ವಿಶ್ವದ ಅತ್ಯಂತ ಮುಂದುವರಿದ ದಾಳಿಯ ಹೆಲಿಕಾಪ್ಟರ್‌ಗಳಲ್ಲಿ ಒಂದಾದ AH-64E ಅಪಾಚೆಯನ್ನು ನಿಖರವಾದ ದಾಳಿ ಮತ್ತು ವಿಶೇಷವಾಗಿ ಪರ್ವತ ಪ್ರದೇಶಗಳಲ್ಲಿ ತನ್ನ ಫಿರಂಗಿ ಸಾಮರ್ಥ್ಯಗಳನ್ನು ಹೆಚ್ಚಿಸಲು ಬಳಸುತ್ತದೆ. ಅಪಾಚೆ ಪ್ಯಾಕೇಜ್‌ನ ಪ್ರಮುಖ ಗುತ್ತಿಗೆದಾರರು ಬೋಯಿಂಗ್ ಮತ್ತು ಲಾಕ್‌ಹೀಡ್ ಮಾರ್ಟಿನ್ ಆಗಿದ್ದರೆ, BAE ಸಿಸ್ಟಮ್ಸ್ M777 ಸುಸ್ಥಿರತೆ ಕಾರ್ಯಕ್ರಮಕ್ಕೆ ಪ್ರಮುಖ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com