CEC ಜ್ಞಾನೇಶ್ ಕುಮಾರ್ ಪದಚ್ಯುತಿ ಕೋರಿ ಸಂಸತ್ತಿನ ಎರಡೂ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ಪ್ರತಿಪಕ್ಷಗಳು

ಲೋಕಸಭೆಯಲ್ಲಿ 130 ಸಂಸದರು ಮತ್ತು ರಾಜ್ಯಸಭೆಯಲ್ಲಿ 63 ಸಂಸದರು ನೋಟಿಸ್‌ಗೆ ಸಹಿ ಹಾಕಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
Chief Election Commissioner Gyanesh Kumar.
ಜ್ಞಾನೇಶ್ ಕುಮಾರ್
Updated on

ನವದೆಹಲಿ: ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಿಗೊಳಿಸುವಂತೆ ಕೋರಿ ವಿರೋಧ ಪಕ್ಷಗಳ ಸಂಸದರು ಶುಕ್ರವಾರ ಸಂಸತ್ತಿನ ಎರಡೂ ಸದನಗಳಲ್ಲಿ ನೋಟಿಸ್ ಸಲ್ಲಿಸಿದ್ದಾರೆ.

ಲೋಕಸಭೆಯಲ್ಲಿ 130 ಸಂಸದರು ಮತ್ತು ರಾಜ್ಯಸಭೆಯಲ್ಲಿ 63 ಸಂಸದರು ನೋಟಿಸ್‌ಗೆ ಸಹಿ ಹಾಕಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಇಂಡಿಯಾ ಬಣದ ಎಲ್ಲಾ ಪಕ್ಷಗಳ ಸದಸ್ಯರು ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಆಮ್ ಆದ್ಮಿ ಪಕ್ಷ(ಎಎಪಿ) ಪ್ರತಿಪಕ್ಷಗಳ ಮೈತ್ರಿಕೂಟದ ಭಾಗವಾಗಿಲ್ಲದಿದ್ದರೂ ಕೂಡ ಈ ಕ್ರಮವನ್ನು ಬೆಂಬಲಿಸಿದೆ.

ಇದೇ ಮೊದಲ ಬಾರಿಗೆ ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಗೊಳಿಸುವಂತೆ ಕೋರಿ ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್‌ ಸಲ್ಲಿಸಲಾಗಿದೆ.

Chief Election Commissioner Gyanesh Kumar.
CEC ಜ್ಞಾನೇಶ್ ಕುಮಾರ್ ಪದಚ್ಯುತಿಗೆ ನಿರ್ಣಯ: 200ಕ್ಕೂ ಹೆಚ್ಚು ಸಂಸದರಿಂದ ನೋಟಿಸ್‌ಗೆ ಸಹಿ

ನಿಯಮಗಳ ಪ್ರಕಾರ, ಲೋಕಸಭೆಯಲ್ಲಿ ಸಿಇಸಿಯನ್ನು ಪದಚ್ಯುತಗೊಳಿಸುವಂತೆ ಕೋರಿ ಸಲ್ಲಿಸುವ ನೋಟಿಸ್‌ಗೆ ಕನಿಷ್ಠ 100 ಸಂಸದರು ಸಹಿ ಹಾಕಬೇಕು ಮತ್ತು ರಾಜ್ಯಸಭೆಯಲ್ಲಿ 50 ಸದಸ್ಯರ ಸಹಿ ಅಗತ್ಯವಿದೆ.

ಉನ್ನತ ಮೂಲವೊಂದರ ಪ್ರಕಾರ, ನೋಟಿಸ್‌ನಲ್ಲಿ ಸಿಇಸಿ ವಿರುದ್ಧ ಏಳು ಆರೋಪಗಳನ್ನು ಪಟ್ಟಿ ಮಾಡಲಾಗಿದೆ. ಅವುಗಳಲ್ಲಿ "ಪಕ್ಷಪಾತಿ ಮತ್ತು ತಾರತಮ್ಯದ ನಡವಳಿಕೆ" ಯಿಂದ ಹಿಡಿದು "ಚುನಾವಣಾ ವಂಚನೆಯ ತನಿಖೆಗೆ ಉದ್ದೇಶಪೂರ್ವಕ ಅಡಚಣೆ" ಮತ್ತು "ಸಾಮೂಹಿಕ ಮತದಾನದ ಹಕ್ಕು ನಿರಾಕರಣೆ" ವರೆಗಿನ ಆರೋಪಗಳಿವೆ.

ಸಿಇಸಿಯನ್ನು ಪದಚ್ಯುತಗೊಳಿಸುವ ಪ್ರಕ್ರಿಯೆಯು ಭಾರತದ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ನ್ಯಾಯಾಧೀಶರನ್ನು ಪದಚ್ಯುತಗೊಳಿಸುವ ಪ್ರಕ್ರಿಯೆಯಂತೆಯೇ ಇರುತ್ತದೆ. ಈ ಪ್ರಸ್ತಾವನೆಯನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಮಂಡಿಸಬಹುದು ಮತ್ತು ವಿಶೇಷ ಬಹುಮತದಿಂದ ಅಂಗೀಕರಿಸಬೇಕು. ಪದಚ್ಯುತಿಗೆ ಸದನದ ಒಟ್ಟು ಸದಸ್ಯತ್ವದ ಬಹುಮತ ಮತ್ತು ಹಾಜರಿರುವ ಹಾಗೂ ಮತದಾನ ಮಾಡುವ ಸದಸ್ಯರ ಮೂರನೇ ಎರಡರಷ್ಟು ಬಹುಮತ ಅಗತ್ಯ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com