

ಪಾಟ್ನಾ: ಲಕ್ಷಾಂತರ ಜನ ಪ್ರಯಾಣಿಸುವ ರೈಲಿನಲ್ಲಿ ಸೀಟಿಗಾಗಿ ಪ್ರಯಾಣಿಕರ ನಡುವೆ ಜಗಳ ಸಾಮಾನ್ಯ.. ಅಂತೆಯೇ ಅಂತಹುದೇ ಮತ್ತೊಂದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಿಕ್ಕಿರಿದು ತುಂಬಿದ್ದ ರೈಲಿನಲ್ಲಿ ದಂಪತಿಗಳು ಇಬ್ಬರು ಹೇಗೋ ಸೀಟ್ ಹಿಡಿದು ಕುಳಿತಿದ್ದರು. ಇದೇ ಹಂತದಲ್ಲಿ ಸೀಟಿಗಾಗಿ ಬಂದ ಮಹಿಳೆಯೊಬ್ಬರು ಅದೇ ಸೀಟಿನಲ್ಲಿ ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ದಂಪತಿ ಅಲ್ಲಿ ಕುಳಿತುಕೊಂಡಿದ್ದರು. ಈ ವೇಳೆ ಮಹಿಳೆ ಸೀಟಿಗಾಗಿ ಗಲಾಟೆ ಆರಂಭಿಸಿದ್ದಾಳೆ.
ನೋಡನೋಡುತ್ತಲೇ ತನ್ನ ಕಾಲಿನಿಂದ ಚಪ್ಪಲಿ ತೆಗೆದು ಕೈಯಲ್ಲಿ ಹಿಡಿದು ತೋರಿಸುತ್ತಾ ಸೀಟು ಬಿಟ್ಟುಕೊಡುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಅಲ್ಲದೆ ಪೊಲೀಸ್ ದೂರು ನೀಡುವ ಎಚ್ಚರಿಕೆ ನೀಡಿದ್ದಾಳೆ. "ಎದ್ದೇಳು, ಇಲ್ಲದಿದ್ದರೆ ನಿನಗೆ ಈ ಚಪ್ಪಲಿಯಿಂದ ಹೊಡೆಯಲಾಗುವುದು! ನನ್ನ ಮಗ ಎಂಜಿನಿಯರ್, ಮತ್ತು ನನ್ನ ಮಗಳು ನಿನಗಿಂತ ಸುಂದರಿ; ನಾನು ನಿನ್ನಂತಹರನ್ನು ತುಂಬಾ ಜನರನ್ನು ನೋಡಿದ್ದೇನೆ ಎಂದು ಗದರುತ್ತಾಳೆ.
ಈ ವೇಳೆ ಆ ವ್ಯಕ್ತಿ ಚಪ್ಪಲಿ ತೋರಿಸಬೇಡಿ ಎಂದು ಗದರುತ್ತಾನೆ. ಈ ವೇಳೆ ಇವರಿಬ್ಬರ ಜಗಳ ತಾರಕ್ಕೇರುತ್ತಿದೆ ಎನ್ನುವಾಗಲೇ ವ್ಯಕ್ತಿಯ ಪತ್ನಿ ಮಧ್ಯೆ ಬರುತ್ತಾರೆ. ಈ ವೇಳೆ ಆಕ್ರೋಶಿತ ಮಹಿಳೆ ಆಕೆಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿ ತೋರಿಸಿ ಗದರುತ್ತಾಳೆ.
ಪುತ್ನಿಗೆ ಚಪ್ಪಲಿ ತೋರಿಸುತ್ತಲೇ ರೊಚ್ಚಿಗೆದ್ದ ವ್ಯಕ್ತಿ
ಇನ್ನು ಮಹಿಳೆ ತನ್ನ ಪತ್ನಿಗೆ ಚಪ್ಪಲಿ ತೋರಿಸುತ್ತಲೇ ಆಕ್ರೋಶಗೊಂಡ ಪತಿ ಏಕಾಏಕಿ ಆಕೆಯ ಮೇಲೆರಗುತ್ತಾನೆ. ನೋಡನೋಡುತ್ತಲೇ ಆಕೆಯನ್ನು ತೀವ್ರವಾಗಿ ಮನಸೋ ಇಚ್ಛೆ ಥಳಿಸುತ್ತಾನೆ. ಈ ಮಧ್ಯೆ ಸಹ ಪ್ರಯಾಣಿಕರು ಆತನನ್ನು ಹಿಡಿದು ಜಗಳ ತಪ್ಪಿಸುತ್ತಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದೆ.
ಅಂತೆಯೇ ಈ ವೈರಲ್ ಕ್ಲಿಪ್‌ಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೂರು ಅಥವಾ ಪೊಲೀಸ್ ಕ್ರಮದ ಬಗ್ಗೆ ಯಾವುದೇ ದೃಢೀಕೃತ ವರದಿಗಳು ಬಂದಿಲ್ಲ ಎನ್ನಲಾಗಿದೆ.
Advertisement