Anurag Dobhal
ಅನುರಾಗ್ ದೋಭಾಲ್

ಕಾರು ಅಪಘಾತ: ಬಿಗ್ ಬಾಸ್ 17 ರ ಸ್ಪರ್ಧಿ 'ಅನುರಾಗ್ ದೋಭಾಲ್' ಸ್ಥಿತಿ ಗಂಭೀರ!

ದೋಭಾಲ್ ಸದ್ಯ ವೈದ್ಯಕೀಯ ನಿಗಾವಣೆಯಲ್ಲಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಸ್ಟ್ರೀಮ್ ಮಾಡುತ್ತಿದ್ದಾಗ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಗಾಯಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
Published on

ಮುಂಬೈ: ಕಾರು ಅಪಘಾತದಲ್ಲಿ ಗಾಯಗೊಂಡ ನಂತರ ಬಿಗ್ ಬಾಸ್ 17 ರ ಸ್ಪರ್ಧಿ ಮತ್ತು ಯೂಟ್ಯೂಬರ್ ಅನುರಾಗ್ ದೋಭಾಲ್ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದೆ ಎಂದು ಅವರ ಮ್ಯಾನೇಜರ್ ಹೇಳಿಕೆ ನಂತರ ಅಭಿಮಾನಿಗಳು ಕಳವಳಗೊಂಡಿದ್ದಾರೆ.

ದೋಭಾಲ್ ಸದ್ಯ ವೈದ್ಯಕೀಯ ನಿಗಾವಣೆಯಲ್ಲಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಸ್ಟ್ರೀಮ್ ಮಾಡುತ್ತಿದ್ದಾಗ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಗಾಯಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮ್ಯಾನೇಜರ್ ರೋಹಿತ್ ಪಾಂಡೆ ಇಂದು ಬೆಳಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ದೋಭಾಲ್ ಅವರ ಆರೋಗ್ಯದ ಪರಿಸ್ಥಿತಿ ಕುರಿತು ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಸ್ಥಿರವಾಗಿದ್ದ ದೋಭಾಲ್ ಅವರ ಸ್ಥಿತಿಯು ತದನಂತರ ಹದಗೆಟ್ಟಿದೆ ಎಂದು ಅವರು ಹೇಳಿದ್ದಾರೆ.

ಇಂದು ಬೆಳಗಿನ ಜಾವದವರೆಗೂ ಅನುರಾಗ್ ಭಾಯ್ ಅವರ ಸ್ಥಿತಿ ಸ್ಥಿರವಾಗಿತ್ತು. ಆದರೆ ಈಗ ಗಂಭೀರವಾಗಿದ್ದು, ತುಂಬಾ ಕೆಟ್ಟದಾಗಿದೆ. ಅಪಘಾತದಲ್ಲಿ ಅವರ ಶ್ವಾಸಕೋಶಗಳು ಭಾಗಶಃ ಹಾನಿಗೊಳಗಾಗಿದ್ದರಿಂದ ತೀವ್ರ ಸೋಂಕಿಗೆ ಕಾರಣವಾಗಿದೆ. ಹೀಗಾಗಿ ತೀವ್ರವಾದ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.

ದೋಭಾಲ್ ವೈದ್ಯಕೀಯ ನಿಗಾವಣೆಯಲ್ಲಿದ್ದು, ಅವರು ಚೇತರಿಸಿಕೊಳ್ಳಲು ಎಲ್ಲರೂ ದೇವರಲ್ಲಿ ಪ್ರಾರ್ಥಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಬಿಗ್ ಬಾಸ್ 17 ನಲ್ಲಿ ಕಾಣಿಸಿಕೊಂಡಿದ್ದ ಭಾರತದ ಅತ್ಯಂತ ಜನಪ್ರಿಯ ಮೋಟೋವ್‌ಲಾಗರ್‌ಗಳಲ್ಲಿ ಒಬ್ಬರಾದ ದೋಭಾಲ್, ಈ ತಿಂಗಳ ಆರಂಭದಲ್ಲಿ ಲೈವ್‌ಸ್ಟ್ರೀಮ್‌ನಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದರು.

Anurag Dobhal
Watch | ಕಾನ್ಪುರ ಲ್ಯಾಂಬೋರ್ಗಿನಿ ಅಪಘಾತ: ತಂಬಾಕು ದೊರೆ ಪುತ್ರ ಶಿವಂ ಮಿಶ್ರಾ ಬಂಧನ

ಅಂತರ್ಜಾತಿ ವಿವಾಹದ ನಂತರ ತಮ್ಮ ಕುಟುಂಬ ಸದಸ್ಯರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿರುವುದಾಗಿ ಅವರು ಹೇಳಿಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com