ತಮಿಳುನಾಡು ರಾಜಕೀಯದಲ್ಲಿ ಬಿಗ್ ಟ್ವಿಸ್ಟ್: ವಿಜಯ್‌ಗೆ ಕಾಂಗ್ರೆಸ್‌ ಬೆಂಬಲ? ಕೆ.ಸಿ. ವೇಣುಗೋಪಾಲ್ ಹೇಳಿದ್ದೇನು?

ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ತಮಿಳುನಾಡಿನಲ್ಲಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ.
After Actor Vijay's 'GOAT' Tamil Nadu Debut, Outreach By Congress: Sources
ನಟ ವಿಜಯ್‌
Updated on

ನವದೆಹಲಿ: ತಮಿಳುನಾಡು ವಿಧಾನಸಭೆಯ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಅಚ್ಚರಿಯ ರೀತಿಯಲ್ಲಿ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ 110ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಭರ್ಜರಿಯಾಗಿ ಮುನ್ನುಗುತ್ತಿದೆ.

ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ತಮಿಳುನಾಡಿನಲ್ಲಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಆದರೆ ಸ್ಪಷ್ಟ ಬಹುಮತ ಪಡೆದಿಲ್ಲ. ಹೀಗಾಗಿ ಟಿವಿಕೆಗೆ ಯಾರು ಬೆಂಬಲ ನೀಡುತ್ತಾರೆ ಎನ್ನುವುದೇ ಸದ್ಯದ ಕುತೂಹಲ.

ತಮಿಳುನಾಡಿನಲ್ಲಿ ನಟ ವಿಜಯ್ ಅವರ ಟಿವಿಕೆ ಜೊತೆ ಮೈತ್ರಿಗಾಗಿ ಕಾಂಗ್ರೆಸ್ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

After Actor Vijay's 'GOAT' Tamil Nadu Debut, Outreach By Congress: Sources
Video: ತಮಿಳುನಾಡಿನಲ್ಲಿ TVK ಭರ್ಜರಿ ಗೆಲುವು; ವಿಜಯ್ ಸಂಪುಟದಲ್ಲಿ ಗೆಳತಿ, ನಟಿ ತ್ರಿಶಾ DCM?

ಇತ್ತೀಚಿನ ಫಲಿತಾಂಶದ ಪ್ರಕಾರ, ಟಿವಿಕೆ 110, ಡಿಎಂಕೆ 71, ಎಐಎಡಿಎಂಕೆ 51 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಒಟ್ಟು 234 ಸ್ಥಾನಗಳ ಪೈಕಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ಹೀಗಾಗಿ ಕಾಂಗ್ರೆಸ್, ಟಿವಿಕೆ ಜೊತೆ ಮೈತ್ರಿಗೆ ಮುಂದಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರು, ತಮಿಳುನಾಡಿನ ಫಲಿತಾಂಶ "ಆಶ್ಚರ್ಯಕರವಾಗಿ" ಎಂದು ಹೇಳಿದ್ದಾರೆ.

"ನಾವು ತಡಮಾಡದೆ ತಮಿಳುನಾಡಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಮತ್ತು ನಾವು ಅದನ್ನು ಮಾಡುತ್ತೇವೆ. ನಾವು ವಿಜಯ್ ಅವರನ್ನು ಪ್ರಶಂಸಿಸಬೇಕು" ಎಂದು ವೇಣುಗೋಪಾಲ್ ಅವರು ತಿಳಿಸಿದ್ದಾರೆ.

ಚುನಾವಣೆ ಪ್ರಾರಂಭವಾಗುವ ಮೊದಲೇ ಎರಡೂ ಪಕ್ಷಗಳು ಒಂದಾಗಬೇಕಿತ್ತೇ ಎಂಬ ಪ್ರಶ್ನೆಗೆ, "ನಾವು ಅದನ್ನು ನಂತರ ವಿಶ್ಲೇಷಿಸುತ್ತೇವೆ" ಎಂದು ವೇಣುಗೋಪಾಲ್ ಹೇಳಿದ್ದಾರೆ.

After Actor Vijay's 'GOAT' Tamil Nadu Debut, Outreach By Congress: Sources
Tamilnadu: ಆತಂತ್ರ ಫಲಿತಾಂಶ ಸಾಧ್ಯತೆ,TVK ಜೊತೆ ಮೈತ್ರಿಗೆ ಕಾಂಗ್ರೆಸ್ ಗೆ ವಿಜಯ್ ತಂದೆ ಆಹ್ವಾನ!

ತಮಿಳುನಾಡು ಚುನಾವಣೆಯ ಫಲಿತಾಂಶ ವಿಜಯ್ ಅವರ ಹೊಸ ಪಕ್ಷ 'GOATED'(ಗ್ರೇಟೆಸ್ಟ್ ಆಫ್ ಆಲ್ ಟೈಮ್) ಪ್ರದರ್ಶನವು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. 2024ರ ತಮಿಳು ಚಿತ್ರ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ನಲ್ಲಿಯೂ ಅವರು ನಟಿಸಿದ್ದಾರೆ, ಇದನ್ನು GOAT ಎಂದೂ ಕರೆಯುತ್ತಾರೆ.

ಮೈತ್ರಿ ಲೆಕ್ಕಾಚಾರ ಹೇಗಿದೆ?

ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷ ಉತ್ತಮ ಲೀಡ್​ ಪಡೆದುಕೊಂಡಿದೆ. 110 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಟಿವಿಕೆ ಪಕ್ಷಕ್ಕೆ ಸರ್ಕಾರ ರಚನೆ ಮಾಡಲು 118 ಸೀಟ್​ಗಳು ಬೇಕಾಗಿದೆ. ಒಂದು ವೇಳೆ ಟಿವಿಕೆ ಪಕ್ಷ ಮ್ಯಾಜಿಕ್​​ ನಂಬರ್​​ ತಲುಪಲು ಸಾಧ್ಯವಾಗದೇ ಇದ್ದಲ್ಲಿ ಅನಿವಾರ್ಯವಾಗಿ ಮೈತ್ರಿ ಮಾಡಿಕೊಳ್ಳಲೇ ಬೇಕಿದೆ. ಆದರೆ ಟಿವಿಕೆಗೆ ಕಾಂಗ್ರೆಸ್‌ ಬೆಂಬಲ ನೀಡುತ್ತಾ ಎಂಬ ಪ್ರಶ್ನೆ ಎದ್ದಿದೆ.

ಚುನಾವಣೆಗೂ ಮುನ್ನ ಕಾಂಗ್ರೆಸ್, ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದರೂ, ಫಲಿತಾಂಶದ ಟ್ರೆಂಡ್‌ಗಳು ಟಿವಿಕೆ ಪರವಾಗಿ ಇರುವುದರಿಂದ ಡಿಎಂಕೆ ಮೈತ್ರಿಯಿಂದ ಹೊರಬಂದು ಟಿವಿಕೆಗೆ ಬೆಂಬಲ ನೀಡುವ ಬಗ್ಗೆ ಪಕ್ಷದ ಒಳಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com