ತಮಿಳುನಾಡಿನಲ್ಲಿ 'ಜನ ನಾಯಕ' ಆಗಿ ಹೊರಹೊಮ್ಮಿದ ವಿಜಯ್‌ಗೆ ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಸುರಿಮಳೆ! ಹೇಳಿದ್ದೇನು?

ಮೊದಲ ಬಾರಿ ರಾಜಕೀಯ ಅಖಾಡಕ್ಕೆ ಇಳಿದು ಭರ್ಜರಿ ಜಯಭೇರಿ ಬಾರಿಸಿ ತಮಿಳುನಾಡಿನ ಗದ್ದುಗೆ ಏರುತ್ತಿರುವ ದಳಪತಿ ವಿಜಯ್ ಅವರಿಗೆ ಚಲನಚಿತ್ರೋದ್ಯಮದ ಹಲವು ನಟ, ನಟಿಯರು ಅಭಿನಂದಿಸಿದ್ದಾರೆ.
As  actor Vijay Emerges 'Jana Nayagan' In Tamil Nadu Polls, Vikram And Vijay Deverakonda Congratulate TVK Chief
ವಿಜಯ್‌
Updated on

ತಮಿಳುನಾಡು ವಿಧಾನಸಭೆಯ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಅಚ್ಚರಿಯ ರೀತಿಯಲ್ಲಿ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ ಮೊದಲ ಪ್ರಯತ್ನದಲ್ಲೇ 110ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಮೊದಲ ಬಾರಿ ರಾಜಕೀಯ ಅಖಾಡಕ್ಕೆ ಇಳಿದು ಭರ್ಜರಿ ಜಯಭೇರಿ ಬಾರಿಸಿ ತಮಿಳುನಾಡಿನ ಗದ್ದುಗೆ ಏರುತ್ತಿರುವ ದಳಪತಿ ವಿಜಯ್ ಅವರಿಗೆ ಚಲನಚಿತ್ರೋದ್ಯಮದ ಹಲವು ನಟ, ನಟಿಯರು ಅಭಿನಂದಿಸಿದ್ದಾರೆ.

ಹಲವು ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವಿಜಯ್ ಅವರ ಚುನಾವಣಾ ಗೆಲುವನ್ನು ಶ್ಲಾಘಿಸಿದ್ದಾರೆ ಮತ್ತು ಅವರ ರಾಜಕೀಯ ಪಯಣಕ್ಕೆ ಶುಭ ಹಾರೈಸಿದ್ದಾರೆ.

ಖ್ಯಾತ ನಟ ವಿಜಯ್ ದೇವರಕೊಂಡ, ನಾನಿ, ರವಿತೇಜ, ಚಿಯಾನ್ ವಿಕ್ರಮ್, ಕಾಜಲ್ ಅಗರ್ವಾಲ್ ಸೇರಿದಂತೆ ಹಲವು ನಟ, ನಟಿಯರು ವಿಜಯ್ ಅವರಿಗೆ ಶುಭ ಕೋರಿದ್ದಾರೆ.

As  actor Vijay Emerges 'Jana Nayagan' In Tamil Nadu Polls, Vikram And Vijay Deverakonda Congratulate TVK Chief
ಕಾರು ಚಾಲಕನ ಪುತ್ರನಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬಂದ ವಿಜಯ್‌; ಡ್ರೈವರ್ ಮಗ ಈಗ MLA! ಹೃದಯಸ್ಪರ್ಶಿ Video ನೋಡಿ

ಸೆಲೆಬ್ರಿಟಿಗಳು ಹೇಳಿದ್ದೇನು?

ಚುನಾವಣೆ ವೇಳೆ ಚಿಯಾನ್ ವಿಕ್ರಮ್ ಅವರು ಟಿವಿಕೆ ಡ್ರೆಸ್ ಕೋಡ್ ಧರಿಸಿ ಬಂದು ಮತದಾನ ಮಾಡಿದ್ದರು. ಈಗ ದಳಪತಿ ವಿಜಯ್ ವಿನ್ ಆಗಿದ್ದು, ಅವರ ಜೊತೆಗಿರುವ ಫೋಟೋವನ್ನು ವಿಕ್ರಮ್ ಹಂಚಿಕೊಂಡಿದ್ದಾರೆ. ‘ಅಭಿನಂದನೆಗಳು ಗೆಳಯ ವಿಜಯ್. ನೀನು ಇಂದು ಇತಿಹಾಸ ಸೃಷ್ಟಿಸಿದೆ’ ಎಂದು ಚಿಯಾನ್ ವಿಕ್ರಮ್ ಅವರು ಪೋಸ್ಟ್ ಮಾಡಿದ್ದಾರೆ.

‘ವಿಜಯ್ ಸರ್ ನಿಮಗೆ ಅಭಿನಂದನೆಗಳು. ತಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿದ ತಮಿಳುನಾಡು ಜನರಿಗೆ ಒಳ್ಳೆಯದೇ ಆಗುತ್ತದೆ ಎಂಬ ಭರವಸೆ ಇದೆ’ ಎಂದು ನಾನು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

‘ವಿಜಯ್ ಅವರಿಗೆ ಅಭಿನಂದನೆ. ಈ ಗೆಲುವು ಭಾರಿ ದೊಡ್ಡದು. ಇದು ಐತಿಹಾಸಿಕ ವಿಜಯ’ ಎಂದು ಜಿವಿ ಪ್ರಕಾಶ್ ಕಮಾರ್ ಅವರು ಟ್ವೀಟ್ ಮಾಡಿದ್ದಾರೆ. ‘ಈ ರೀತಿ ಆಗುತ್ತದೆ ಎಂದು ನಾನು ನಿಜವಾಗಿಯೂ ನಂಬಿದ್ದೆ. ಈ ದೊಡ್ಡ ಗೆಲುವಿಗಾಗಿ ವಿಜಯ್ ಅವರಿಗೆ ಅಭಿನಂದನೆಗಳು. ನಿಮ್ಮ ಈ ಹೊಸ ಅಧ್ಯಾಯಕ್ಕೆ ಒಳ್ಳೆಯದಾಗಲಿ. ಯಾವಾಗಲೂ ಮುಂದಾಳು ಆಗಿರಿ’ ಎಂದು ನಟ ರವಿ ತೇಜ ಅವರು ಪೋಸ್ಟ್ ಮಾಡಿದ್ದಾರೆ.

‘ತಮಿಳುನಾಡು ರಾಜಕೀಯದಲ್ಲಿ ಈ ಹೊಸ ಮುಖ ಮತ್ತು ಹೊಸ ಅಧ್ಯಾಯ ನೋಡಲು ಉತ್ಸುಕನಾಗಿದ್ದೇನೆ. ಜನರಿಗೆ ಮತ್ತು ಹೊಸ ಮುಖ್ಯಮಂತ್ರಿಗೆ ಒಳ್ಳೆಯದಾಗಲಿ’ ಎಂದು ವಿಜಯ್ ದೇವರಕೊಂಡ ಅವರು ಶುಭ ಹಾರೈಸಿದ್ದಾರೆ.

‘ತಮಿಳುನಾಡಿನ ಜನರು ಅತ್ಯಂತ ಹೆಮ್ಮೆಯಿಂದ, ಸ್ಪಷ್ಟವಾಗಿ ಮತ್ತು ಗಟ್ಟಿಯಾಗಿ ತಮ್ಮ ತೀರ್ಪನ್ನು ನೀಡಿದ್ದಾರೆ. ಇದು ಕೇವಲ ಗೆಲುವಲ್ಲ, ಇದು ಲಕ್ಷಾಂತರ ಜನರೊಂದಿಗಿನ ಆಳವಾದ ಮತ್ತು ಶಕ್ತಿಯುತವಾದ ಒಡನಾಟದ ಸಂಭ್ರಮವಾಗಿದೆ. ನೀವು ಈ ಪ್ರೇರಣಾದಾಯಕ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ನಿಮಗೆ ಅಪಾರ ಶಕ್ತಿ ಮತ್ತು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಅನೇಕ ಜನರು ನಿರೀಕ್ಷಿಸುತ್ತಿರುವ ಬದಲಾವಣೆಯನ್ನು ನೀವು ತರುವಂತಾಗಲಿ’ ಎಂದು ನಟಿ ಕಾಜಲ್ ಅಗರ್​ವಾಲ್ ಅವರು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com