Biocon ಉತ್ತರಾಧಿಕಾರಿ ಘೋಷಣೆ: ತಕ್ಷಣವೇ ನಿವೃತ್ತಿ ಇಲ್ಲ, ಹಂತ ಹಂತ ಜವಾಬ್ದಾರಿ ವರ್ಗಾವಣೆ; ಕಿರಣ್ ಮಜುಂದಾರ್ ಶಾ..!

ಕಿರಣ್ ಮಜುಂದಾರ್-ಷಾ ಅವರು ತಾವು ಈಗಲೇ ನಿವೃತ್ತಿ ಪಡೆಯುವ ಯೋಜನೆ ಇಲ್ಲ ಎಂದು ಹೇಳಿದ್ದು, ಕ್ಲೇರ್ ಅವರು ಕ್ರಮೇಣವಾಗಿ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
Kiran Mazumdar-Shaw
ಕಿರಣ್ ಮಜುಂದಾರ್-ಶಾ
Updated on

ನವದೆಹಲಿ: ಭಾರತದ ಜೈವಿಕ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆಯಾದ ಬಯೋಕಾನ್'ಗೆ ಉತ್ತರಾಧಿಕಾರಿಯನ್ನು ಘೋಷಿಸಿರುವುದಾಗಿ ಅದರ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ತಿಳಿಸಿದ್ದಾರೆ.

ಅವರು ತಮ್ಮ ಸೋದರನ ಮಗಳು ಕ್ಲೇರ್ ಮಜುಂದಾರ್ ಅವರನ್ನು ಬಯೊಕಾನ್‌ನ ಮುಂದಿನ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಪ್ರಕಟಿಸಿದ್ದಾರೆ. ಆದರೆ, ಈ ಬದಲಾವಣೆ ತಕ್ಷಣ ಜಾರಿಗೆ ಬರದೆ, ಹಂತ ಹಂತವಾಗಿ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಿರಣ್ ಮಜುಂದಾರ್-ಷಾ ಅವರು ತಾವು ಈಗಲೇ ನಿವೃತ್ತಿ ಪಡೆಯುವ ಯೋಜನೆ ಇಲ್ಲ ಎಂದು ಹೇಳಿದ್ದು, ಕ್ಲೇರ್ ಅವರು ಕ್ರಮೇಣವಾಗಿ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಕಂಪನಿಯ ನಿರಂತರ ಬೆಳವಣಿಗೆ ಮತ್ತು ಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಈ ಉತ್ತರಾಧಿಕಾರ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

Kiran Mazumdar-Shaw
ನಾನು ಹೆಮ್ಮೆಯ ಕನ್ನಡತಿ, ಕನ್ನಡ ಅದ್ಭುತ ಭಾಷೆ: ಕಿರಣ್ ಮಜುಂದಾರ್ ಶಾ

ಕ್ಲೇರ್ ಮಜುಂದಾರ್ ಅವರು 37 ವರ್ಷದ ಜೈವಿಕ ವಿಜ್ಞಾನ ಕ್ಷೇತ್ರದ ಪರಿಣಿತೆಯಾಗಿದ್ದು, ಅಮೆರಿಕಾದ ಬೋಸ್ಟನ್‌ನಲ್ಲಿ ಸ್ಥಾಪಿಸಿದ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಬಿಕಾರಾ ಥೆರಪಿಸ್ಟ್ರಿಕ್ಸ್ ಮೂಲಕ ಗಮನ ಸೆಳೆದಿದ್ದಾರೆ. ಅವರ ನೇತೃತ್ವದಲ್ಲಿ ಈ ಸಂಸ್ಥೆ 2024ರಲ್ಲಿ ನಾಸ್ಡಾಕ್ ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿದೆ.

ಅವರು ರಿಲೇ ಥೆರಪಿಟಿಕ್ಸ್’ ಮತ್ತು ’ನೂರಾ ಹೆಲ್ತ್’ ಸಂಸ್ಥೆಗಳ ಮಂಡಳಿಯಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಎಂಐಟಿಯಲ್ಲಿ ಬಯೋಲಾಜಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಹಾಗೂ ಕ್ಯಾನ್ಸರ್ ಬಯೋಲಜಿಯಲ್ಲಿ ಪಿಎಚ್‌ಡಿ ಮಾಡಿದ್ದಾರೆ.

ಬಯೋಕಾನ್ ಸಂಸ್ಥೆಯನ್ನು 1978ರಲ್ಲಿ ಬೆಂಗಳೂರಿನಲ್ಲಿ ಕಿರಣ್ ಮಜುಂದಾರ್-ಷಾ ಅವರು ಸ್ಥಾಪಿಸಿದ್ದರು. ನಾಲ್ಕು ದಶಕಗಳಲ್ಲಿ ಇದನ್ನು ಭಾರತದ ಅತಿದೊಡ್ಡ ಬಯೋಟೆಕ್ ಕಂಪನಿಗಳಲ್ಲಿ ಒಂದಾಗಿ ಬೆಳೆಸಿದ್ದಾರೆ. ಅವರ ಪತಿ ಜಾನ್ ಷಾ 2022ರಲ್ಲಿ ನಿಧನರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com