36 ಗಂಟೆಯಲ್ಲಿ 8 ಎನ್ಕೌಂಟರ್; 12 ಆರೋಪಿಗಳ ಹೆಡೆಮುರಿ ಕಟ್ಟಿದ ಉತ್ತರ ಪ್ರದೇಶ ಪೊಲೀಸರು!

ಉತ್ತರ ಪ್ರದೇಶದ ಮುಜಫರ್‌ನಗರ ಜಿಲ್ಲೆಯಲ್ಲಿ ಕಳೆದ 36 ಗಂಟೆಗಳಲ್ಲಿ 8 ಪೊಲೀಸ್ ಎನ್ಕೌಂಟರ್ ನಡೆದಿದ್ದು, ಒಟ್ಟು 10 ಮಂದಿ ಗಾಯಗೊಂಡಿದ್ದಾರೆ.
UP police conducts 8 encounters within 36 hours
ಉತ್ತರ ಪ್ರದೇಶ ಪೊಲೀಸರ ಎನ್ಕೌಂಟರ್
Updated on

ಲಖನೌ: ಉತ್ತರ ಪ್ರದೇಶದಲ್ಲಿ ಕಳೆದ 36 ಗಂಟೆಗಳೊಳಗೆ ಪೊಲೀಸರು ಬರೊಬ್ಬರಿ 8 ಎನ್ಕೌಂಟರ್ ಮಾಡಿದ್ದು, 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದ ಮುಜಫರ್‌ನಗರ ಜಿಲ್ಲೆಯಲ್ಲಿ ಕಳೆದ 36 ಗಂಟೆಗಳಲ್ಲಿ 8 ಪೊಲೀಸ್ ಎನ್ಕೌಂಟರ್ ನಡೆದಿದ್ದು, ಒಟ್ಟು 10 ಮಂದಿ ಗಾಯಗೊಂಡಿದ್ದಾರೆ.

ಅಂತೆಯೇ ಪೊಲೀಸರು ವಿವಿಧ ಪ್ರಕರಣಗಳಲ್ಲಿ ವಾಂಟೆಡ್ ಆಗಿದ್ದ 12 ಮಂದಿಯನ್ನು ಬಂಧಿಸಿದ್ದಾರೆ ಎಂದು ಪಿಟಿಐ ಗುರುವಾರ ವರದಿ ಮಾಡಿದೆ.

UP police conducts 8 encounters within 36 hours
ಭಯಭೀತರಾಗಿದ್ದ ಪ್ರಯಾಣಿಕರು: ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದೀನಿ ಚಪ್ಪಾಳೆ ತಟ್ಟಿ; ಪೈಲಟ್, ಮಾಜಿ ಕೇಂದ್ರ ಸಚಿವ ಪೈಲಟ್ ರೂಡಿ, Video!

ದರೋಡೆ, ದರೋಡೆ ಯತ್ನ, ಮೊಬೈಲ್ ಕಳವು ಮತ್ತು ಪಶು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರೆಂದು ಆರೋಪಿಸಲಾದ 12 ಮಂದಿಯನ್ನು ಈ ಎನ್‌ಕೌಂಟರ್‌ಗಳ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಾದ ಆರೋಪಿಗಳಲ್ಲಿ 10 ಮಂದಿಗೆ ಗುಂಡೇಟಿನ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿರಿಯ ಪೊಲೀಸ್ ಅಧೀಕ್ಷಕ ಸಂಜಯ್ ಕುಮಾಪ್ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಮುಜಫರ್‌ನಗರ ಜಿಲ್ಲೆಯ ಬುಧಾನಾ, ಮನ್ಸೂರ್ಪುರ್, ಸಿಟಿ, ನ್ಯೂ ಮಂಡಿ ಮತ್ತು ಶಾಹಪುರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ಎನ್‌ಕೌಂಟರ್‌ಗಳು ನಡೆದಿವೆ. ಬಂಧಿತರನ್ನು ಶಾರುಖ್ ಶೇಖಿ, ಮನೀಶ್, ಶಿವಂ, ಸಲ್ಮಾನ್, ಖುಷ್ನಸೀಬ್, ಅಮರ್, ಗುಡ್ಡು, ಅಭಿಷೇಕ್, ಅರ್ಶಾದ್ ಮತ್ತು ಮೊಮಿನ್ ಸೇರಿದಂತೆ ಇತರರು ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com