ಕೊನೆಗೂ ವಿಜಯ್​ಗೆ ಸಿಕ್ತು ಮ್ಯಾಜಿಕ್​ ನಂಬರ್: CPI, VCKಯಿಂದಲೂ ಬೆಂಬಲ; ಶೀಘ್ರ CM ಆಗಿ ದಳಪತಿ ಪ್ರಮಾಣ!

ಸರ್ಕಾರ ರಚನೆಗೆ ನಟ-ರಾಜಕಾರಣಿ ವಿಜಯ್ ನೇತೃತ್ವದ ಟಿವಿಕೆಗೆ ಸಿಪಿಐ ಶುಕ್ರವಾರ ಬೇಷರತ್ ಬೆಂಬಲ ಘೋಷಿಸಿದೆ. ಇದರ ಬೆನ್ನಲ್ಲೇ ವಿಸಿಕೆ ಸಹ ಟಿವಿಕೆಗೆ ಬೆಂಬಲ ಘೋಷಿಸಿ ರಾಜ್ಯಪಾಲರಿಗೆ ಪತ್ರ ಬರೆದಿದೆ.
Actor Vijay
ದಳಪತಿ ವಿಜಯ್
Updated on

ಚೆನ್ನೈ: ತಮಿಳುನಾಡಿನಲ್ಲಿ ಬಹುಮತದ ಕೊರತೆ ಎದುರಿಸುತ್ತಿರುವ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮುಖ್ಯಸ್ಥ ವಿಜಯ್ ಅವರಿಗೆ ಕೊನೆಗೂ ಮ್ಯಾಜಿಕ್ ನಂಬರ್ ಸಿಕ್ಕಿದ್ದು, ಕಾಂಗ್ರೆಸ್ ನಂತರ ಸಿಪಿಐ ಮತ್ತು ವಿಸಿಕೆ ಸಹ ಬೆಂಬಲ ಘೋಷಿಸಿವೆ. ಹೀಗಾಗಿ ದಳಪತಿ ವಿಜಯ್ ಅವರು ಶೀಘ್ರದಲ್ಲೇ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸರ್ಕಾರ ರಚನೆಗೆ ನಟ-ರಾಜಕಾರಣಿ ವಿಜಯ್ ನೇತೃತ್ವದ ಟಿವಿಕೆಗೆ ಸಿಪಿಐ ಶುಕ್ರವಾರ ಬೇಷರತ್ ಬೆಂಬಲ ಘೋಷಿಸಿದೆ. ಇದರ ಬೆನ್ನಲ್ಲೇ ವಿಸಿಕೆ ಸಹ ಟಿವಿಕೆಗೆ ಬೆಂಬಲ ಘೋಷಿಸಿ ರಾಜ್ಯಪಾಲರಿಗೆ ಪತ್ರ ಬರೆದಿದೆ.

ಇಂದು ಸುದೀರ್ಘ ಚರ್ಚೆಯ ನಂತರ, ಎಡಪಕ್ಷವು(ಸಿಪಿಐ) ಟಿವಿಕೆ ಬೆಂಬಲ ನೀಡಲು ನಿರ್ಧರಿಸಿತು ಮತ್ತು ಅದರ ಪ್ರಕಾರ, ಸರ್ಕಾರ ರಚನೆಗೆ "ಬೇಷರತ್ತಾದ ಬೆಂಬಲ ಬೆಂಬಲ ಪತ್ರವನ್ನು ನೀಡಿದೆ" ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಪತ್ರವನ್ನು ತಮಿಳುನಾಡು ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರಿಗೆ ಕಳುಹಿಸಲಾಗಿದೆ.

Actor Vijay
DMK, AIADMK ಮೈತ್ರಿ ಮಾಡಿಕೊಂಡರೆ ಟಿವಿಕೆ ಶಾಸಕರು ಸಾಮೂಹಿಕ ರಾಜೀನಾಮೆ ಬೆದರಿಕೆ ನಿಜವೇ? ವಿಜಯ್ ಪಕ್ಷ ಹೇಳಿದ್ದೇನು?

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸಿಪಿಐ ಇಬ್ಬರು ಶಾಸಕರನ್ನು ಹೊಂದಿದೆ.

ಏಪ್ರಿಲ್ 23 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆ, ಸರ್ಕಾರ ರಚಿಸಲು ಡಿಎಂಕೆ ಮಿತ್ರಪಕ್ಷಗಳಾದ ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ ಅವರ ಬೆಂಬಲವನ್ನು ಕೋರಿತ್ತು.

ದಳಪತಿ ವಿಜಯ್​ ನೇತೃತ್ವದ ಟಿವಿಕೆಗೆ ಈಗಾಗಲೇ ಕಾಂಗ್ರೆಸ್ ಕಂಡೀಷನಲ್​ ಬೆಂಬಲ ನೀಡಿದೆ. ಇದೀಗ ಸಿಪಿಐ, ಸಿಪಿಎಂ ಹಾಗೂ ವಿಸಿಕೆ ಕೂಡ ಬೆಂಬಲ ಘೋಷಿಸಿದ್ದು, ವಿಜಯ್​ ಸುಲಭವಾಗಿ ಮ್ಯಾಜಿಕ್​ ನಂಬರ್ ದಾಟಿದಂತಾಗಿದೆ.

ಟಿವಿಕೆ ಒಟ್ಟು 107, ಸಿಪಿಐ, 2 ಸಿಪಿಎಂ, 2 ವಿಸಿಕೆ, 2 ಕಾಂಗ್ರೆಸ್ 5 ಐದು ಸೇರಿ 118 ಆಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com