'ಡಿಎಂಕೆ,ಎಡಿಎಂಕೆಯಂತೆ ಅಲ್ಲ, ವಿಜಯ್ ತಮ್ಮ ಸ್ವಂತ ಹಣದಿಂದ ಮಹಿಳೆಯರಿಗೆ ತಿಂಗಳಿಗೆ 2,500 ರೂ.ನೀಡುತ್ತಾರೆ': ಯುವತಿಯ ಅಭಿಮಾನ ಕೇಳಿ-Video

‘ಮಧಿಪ್ಪುಮಿಗು ಮಗಳಿರ್ ತಿಟ್ಟಂ’ (ಗೌರವಾನ್ವಿತ ಮಹಿಳಾ ಯೋಜನೆ) ಎಂದು ಕರೆಯಲ್ಪಡುವ ಈ ಯೋಜನೆಯನ್ನು ವಿಜಯ್ ತಮ್ಮ ಪಕ್ಷದ ಸಾಮಾಜಿಕ ಕಲ್ಯಾಣ ನೀತಿಯ ಪ್ರಮುಖ ಭಾಗವಾಗಿ ಪರಿಚಯಿಸಿದ್ದಾರೆ.
Fan of TVK Vijay
ಟಿವಿಕೆ ವಿಜಯ್ ಅಭಿಮಾನಿ
Updated on

ದಳಪತಿ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ(TVK) ಪಕ್ಷವು 2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಕಲ್ಯಾಣ ಘೋಷಣಾಪತ್ರದಲ್ಲಿ ಮಹಿಳೆಯರಿಗೆ ತಿಂಗಳಿಗೆ 2,500 ನೀಡುವ ಭರವಸೆಯನ್ನು ಘೋಷಿಸಿತ್ತು. ಅದರಂತೆ ಈ ಬಾರಿಯ ಚುನಾವಣೆಯಲ್ಲಿ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ವಿಜಯ್ ಮುಖ್ಯಮಂತ್ರಿಯಾಗುವ ಹಾದಿಯಲ್ಲಿದ್ದಾರೆ.

ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಪ್ರಕಟಿಸಿದ ಈ ಯೋಜನೆಯಡಿ, 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ (ಸರ್ಕಾರಿ ನೌಕರರನ್ನು ಹೊರತುಪಡಿಸಿ) ಪ್ರತಿ ತಿಂಗಳು 2,500 ರೂಪಾಯಿ ನೀಡಲಾಗುತ್ತದೆ. ಜೊತೆಗೆ ವರ್ಷಕ್ಕೆ ಆರು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳು ಹಾಗೂ ಮದುವೆಯಾಗುವ ಹೆಣ್ಣುಮಕ್ಕಳಿಗೆ 8 ಗ್ರಾಂ ಚಿನ್ನ ನೀಡುವುದಾಗಿ ಘೋಷಿಸಲಾಗಿದೆ.

‘ಮಧಿಪ್ಪುಮಿಗು ಮಗಳಿರ್ ತಿಟ್ಟಂ’ (ಗೌರವಾನ್ವಿತ ಮಹಿಳಾ ಯೋಜನೆ) ಎಂದು ಕರೆಯಲ್ಪಡುವ ಈ ಯೋಜನೆಯನ್ನು ವಿಜಯ್ ತಮ್ಮ ಪಕ್ಷದ ಸಾಮಾಜಿಕ ಕಲ್ಯಾಣ ನೀತಿಯ ಪ್ರಮುಖ ಭಾಗವಾಗಿ ಪರಿಚಯಿಸಿದ್ದಾರೆ.

Fan of TVK Vijay
ಎಡಪಕ್ಷಗಳ ಬೆಂಬಲ ಸಿಕ್ಕರೂ ಟಿವಿಕೆಗೆ ಸಿಕ್ಕಿಲ್ಲ ಸರ್ಕಾರ ರಚನೆ ಭಾಗ್ಯ, ಮ್ಯಾಜಿಕ್ ಸಂಖ್ಯೆಗೆ 2 ಸ್ಥಾನ ಕೊರತೆ; ಇಂದು ಇಲ್ಲ ವಿಜಯ್ ಪ್ರಮಾಣ ವಚನ-Video

ಆರಂಭದಲ್ಲಿ ಈ ಹಣವನ್ನು ವಿಜಯ್ ವೈಯಕ್ತಿಕವಾಗಿ ನೀಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದರೂ, ನಂತರ ಪ್ರಕಟವಾದ ಸಂಪೂರ್ಣ ಘೋಷಣಾಪತ್ರದ ಪ್ರಕಾರ, ರಾಜ್ಯ ಬಜೆಟ್‌ನಲ್ಲಿನ 30 ಶೇಕಡಾ ಭ್ರಷ್ಟಾಚಾರ ಕಡಿತಗೊಳಿಸುವ ಮೂಲಕ ಈ ಯೋಜನೆಗಳಿಗೆ ಹಣ ಒದಗಿಸಲಾಗುತ್ತದೆ ಎಂದು ವಿವರಿಸಲಾಗಿದೆ.

ಟಿವಿಕೆ ಪಕ್ಷದ ವಿಶಾಲ ಘೋಷಣಾಪತ್ರದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲ, ಹಾಗೂ ಐದು ಲಕ್ಷ ಸರ್ಕಾರಿ ಉದ್ಯೋಗಗಳ ಭರವಸೆಯೂ ಸೇರಿವೆ.

ರಾಜ್ಯದ ಮತದಾರರಲ್ಲಿ 51 ಶೇಕಡಕ್ಕೂ ಹೆಚ್ಚು ಮಹಿಳೆಯರಿರುವ ಹಿನ್ನೆಲೆಯಲ್ಲಿ, ಮಹಿಳೆಯರನ್ನು ಟಿವಿಕೆಯ ಚುನಾವಣಾ ತಂತ್ರದ ಪ್ರಮುಖ ಕೇಂದ್ರಬಿಂದುವಾಗಿ ಪರಿಗಣಿಸಿತ್ತು.

ವಿಜಯ್ ಅವರು ಇಷ್ಟೆಲ್ಲಾ ಗ್ಯಾರಂಟಿಗಳನ್ನು ಹೇಗೆ ಜಾರಿಗೆ ತರುತ್ತಾರೆ, ಎಲ್ಲಿಂದ ಹಣ ಹೊಂದಿಸುತ್ತಾರೆ ಎಂಬ ಮಾತುಗಳು, ಟೀಕೆಗಳು ಕೇಳಿಬರುತ್ತಲೇ ಇವೆ, ಇದಕ್ಕೆ ವಿಜಯ್ ಅವರ ಪಕ್ಕಾ ಅಭಿಮಾನಿಯಾಗಿರುವ ಕಾಲೇಜು ಹುಡುಗಿಯೊಬ್ಬಳು ಮಾಧ್ಯಮ ಜೊತೆಗೆ ಆಡಿರುವ ಮಾತು ಭಾರೀ ವೈರಲ್ ಆಗಿದೆ. ವಿಜಯ್ ಅವರು ಡಿಎಂಕೆ, ಎಡಿಎಂಕೆಯಂತೆ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ, ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ, ಅವರು ತಮಿಳು ನಾಡಿನ ತೆರಿಗೆದಾರರ ಹಣ ಕೊಡುವುದಲ್ಲ, ಅವರ ವೈಯಕ್ತಿಕ ಹಣದಿಂದ ಮಹಿಳೆಯರಿಗೆ 2,500 ರೂಪಾಯಿ ನೀಡುತ್ತಾರೆ ಎಂದು ಹೇಳಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com