'ಮಿತವ್ಯಯ'ಕ್ಕಾಗಿ ಮೋದಿ ಸಲಹೆಯನ್ನು ದೇಶದ ಜನ ಸ್ವಾಗತಿಸಬೇಕು; ಮಾಜಿ ಪ್ರಧಾನಿ HD Devegowda

ಬಿಕ್ಕಟ್ಟಿನಿಂದಾಗಿ ವಿದೇಶಿ ವಿನಿಮಯವನ್ನು ಉಳಿಸುವ ಅಗತ್ಯವನ್ನು ಒತ್ತಿ ಹೇಳಿದ ಮೋದಿ, ಚಿನ್ನದ ಖರೀದಿ ಮತ್ತು ವಿದೇಶಿ ಪ್ರಯಾಣವನ್ನು ಒಂದು ವರ್ಷದವರೆಗೆ ಮುಂದೂಡಬೇಕೆಂದು ಕರೆ ನೀಡಿದರು.
Narendra Modi-Devegowda
ನರೇಂದ್ರ ಮೋದಿ- ಹೆಚ್ ಡಿ ದೇವೇಗೌಡ online desk
Updated on

ಬೆಂಗಳೂರು: ಪಶ್ಚಿಮ ಏಷ್ಯಾ ಸಂಘರ್ಷದ ಪರಿಣಾಮದ ನಡುವೆ ಇಂಧನ ಉಳಿತಾಯ ಮತ್ತು ವಿದೇಶಿ ವಿನಿಮಯ ಸಂರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಮನವಿಯನ್ನು ಸ್ವಾಗತಿಸಬೇಕು ಎಂದು ಜೆಡಿ(ಎಸ್) ಸರ್ವೋಚ್ಛ ನಾಯಕ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.

ಸಂಘರ್ಷದಿಂದ ಉಂಟಾದ ಜಾಗತಿಕ ಬಿಕ್ಕಟ್ಟಿನ ನಡುವೆ ಇಂಧನ ಹಾಗೂ ಭಾರತ ಆಮದು ಮಾಡಿಕೊಳ್ಳುತ್ತಿರುವ ಇನ್ನಿತರ ವಸ್ತುಗಳ ಬಳಕೆಯಲ್ಲಿ ಎಚ್ಚರಿಕೆ ವಹಿಸುವಂತೆ ಮೋದಿ ಸಲಹೆ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ಹೇಳಿದ್ದಾರೆ.

"ನಿನ್ನೆ ತೆಲಂಗಾಣದಲ್ಲಿ ಪ್ರಧಾನಿ ಕೆಲವು ಸಲಹೆಗಳನ್ನು ನೀಡಿದರು. ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧದ ಪ್ರತಿಕೂಲ ಪರಿಣಾಮದಿಂದಾಗಿ, ಇಂಧನ ಸಾಗಿಸುವ ಹಡಗುಗಳ ಚಲನೆಯಲ್ಲಿ ಅಡಚಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ಬಳಕೆಯಲ್ಲಿ ಎಚ್ಚರಿಕೆ ವಹಿಸುವಂತೆ ಮೋದಿ ಸಲಹೆ ನೀಡಿದ್ದಾರೆ" ಎಂದು ದೇವೇಗೌಡ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರ ಮನವಿ ಭಾರತದ ಸುಮಾರು 150 ಕೋಟಿ ಜನರಿಗೆ ಉದ್ದೇಶಿಸಲಾಗಿದೆ, ಈ ಮನವಿ ಬೇರೆ ಯಾವುದೇ ಕಾರಣಕ್ಕಾಗಿ ಅಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಘರ್ಷದ ಪರಿಣಾಮದಿಂದಾಗಿ ಬಂದಿದೆ. ನಾವು ಅದನ್ನು ಸ್ವಾಗತಿಸಬೇಕು" ಎಂದು ಅವರು ಹೇಳಿದರು.

ಪಶ್ಚಿಮ ಏಷ್ಯಾ ಸಂಘರ್ಷದ ಪ್ರತಿಕೂಲ ಪರಿಣಾಮಗಳಿಂದ ಜನರನ್ನು ರಕ್ಷಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಒತ್ತಿ ಹೇಳಿದ ಮೋದಿ, ಭಾನುವಾರ ಹೈದರಾಬಾದ್‌ನಲ್ಲಿ ಆರ್ಥಿಕತೆಯನ್ನು ಬಲಪಡಿಸಲು ಇಂಧನದ ವಿವೇಚನಾಯುಕ್ತ ಬಳಕೆ, ಚಿನ್ನದ ಖರೀದಿಯನ್ನು ಮುಂದೂಡುವುದು ಮತ್ತು ವಿದೇಶಿ ಪ್ರಯಾಣವನ್ನು ಕಡಿಮೆ ಮಾಡುವುದು ಸೇರಿದಂತೆ ಇತರ ಕ್ರಮಗಳಿಗೆ ಕರೆ ನೀಡಿದರು.

ತೆಲಂಗಾಣ ಬಿಜೆಪಿ ಆಯೋಜಿಸಿದ್ದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವುದು, ನಗರಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ಬಳಸುವುದು, ಕಾರ್‌ಪೂಲಿಂಗ್, ಎಲೆಕ್ಟ್ರಿಕ್ ವಾಹನಗಳ (ಇವಿ) ಬಳಕೆಯನ್ನು ಹೆಚ್ಚಿಸುವುದು, ಪಾರ್ಸೆಲ್ ಸಾಗಣೆಗೆ ರೈಲ್ವೆ ಸೇವೆಗಳನ್ನು ಬಳಸುವುದು ಮತ್ತು ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ನಡುವೆ ವಿದೇಶಿ ವಿನಿಮಯವನ್ನು ಸಂರಕ್ಷಿಸಲು ಮನೆಯಿಂದ ಕೆಲಸ ಮಾಡುವ ಸಲಹೆಗಳನ್ನು ಸೂಚಿಸಿದ್ದಾರೆ.

Narendra Modi-Devegowda
Explainer: ಮಿತವ್ಯಯಕ್ಕೆ ಮೋದಿ ಕರೆ; ಕಷ್ಟದ ದಿನಗಳೋ? Forex ಉಳಿಕೆಯ ಮರ್ಮವೋ..? 72 ಬಿಲಿಯನ್ ಡಾಲರ್ ಹಿಂದಿನ ರಹಸ್ಯ..

ಬಿಕ್ಕಟ್ಟಿನಿಂದಾಗಿ ವಿದೇಶಿ ವಿನಿಮಯವನ್ನು ಉಳಿಸುವ ಅಗತ್ಯವನ್ನು ಒತ್ತಿ ಹೇಳಿದ ಮೋದಿ, ಚಿನ್ನದ ಖರೀದಿ ಮತ್ತು ವಿದೇಶಿ ಪ್ರಯಾಣವನ್ನು ಒಂದು ವರ್ಷದವರೆಗೆ ಮುಂದೂಡಬೇಕೆಂದು ಕರೆ ನೀಡಿದರು. ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಪ್ರಧಾನಿಯವರ ಮನವಿಯು ದೇಶದ ಹಿತಾಸಕ್ತಿಗಾಗಿ ಮತ್ತು ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ವಿದೇಶಿ ವಿನಿಮಯ ಮೀಸಲುಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ. "ಕಳೆದ ಎರಡು ವರ್ಷಗಳಿಂದ ಪ್ರಧಾನ ಮಂತ್ರಿಯವರು ಖಾದ್ಯ ತೈಲದ ಬಳಕೆಯನ್ನು ಕಡಿಮೆ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ ಏಕೆಂದರೆ ನಾವು ಅದರಲ್ಲಿ ಸ್ವಾವಲಂಬಿಗಳಾಗಿಲ್ಲ. ನಾವು ಖಾದ್ಯ ತೈಲದ ಶೇಕಡಾ 70 ರಷ್ಟು ಹೊರಗಿನಿಂದ ಆಮದು ಮಾಡಿಕೊಳ್ಳುತ್ತೇವೆ. ಅದನ್ನು ಕಡಿಮೆ ಮಾಡುವುದರಿಂದ ನಮಗೆ ವಿದೇಶಿ ವಿನಿಮಯವನ್ನು ಉಳಿಸಲು ಸಹಾಯವಾಗುತ್ತದೆ ಮತ್ತು ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಪೆಟ್ರೋಲಿಯಂ ಉತ್ಪನ್ನಗಳು ಮತ್ತು ರಸಗೊಬ್ಬರಗಳಲ್ಲಿ ದೇಶ ಸ್ವಾವಲಂಬಿಯಾಗಿಲ್ಲ ಎಂದು ಅವರು ಹೇಳಿದರು. ಅವುಗಳ ವಿವೇಚನಾಯುಕ್ತ ಬಳಕೆಯು ವಿದೇಶಿ ವಿನಿಮಯ ಮೀಸಲುಗಳನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com