

ಚಂಡೀಗಢ: ಚತ್ತೀಸ್ ಗಢದಲ್ಲಿ ದೊಡ್ಡ ಮಟ್ಟದ ಘರ್ ವಾಪ್ಸಿ ನಡೆದಿದ್ದು ಓರ್ವ ಪಾಸ್ಟರ್ ಸಹಿತ 200 ಮಂದಿ ತಮ್ಮ ಮೂಲ ಹಿಂದೂ ಧರ್ಮಕ್ಕೆ ಮರಳಿದ್ದಾರೆ.
ಛತ್ತೀಸ್‌ಗಢದ ಕವರ್ಧಾ ಜಿಲ್ಲೆಯ ಅರಣ್ಯ ಗ್ರಾಮಗಳಲ್ಲಿ ಧರ್ಮಾಂತರ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದರೆಂದು ಆರೋಪಿಸಲ್ಪಟ್ಟ ಒಬ್ಬ ಪಾಸ್ಟರ್ ಸೇರಿದಂತೆ ಸುಮಾರು 200 ಜನರು ತಮ್ಮ “ಮೂಲ ಧರ್ಮಕ್ಕೆ” ಮರಳಿದ್ದಾರೆ ಎಂದು ಬಿಜೆಪಿ ಶಾಸಕಿ ಭಾವನ ಭ್ಹೋರಾ (Bhawna Bohra) ತಿಳಿಸಿದ್ದಾರೆ.
ಚತ್ತೀಸ್ ಗಢದ ರಾಜ್ಯದ ಪಂಡರಿಯಾ ವಿಧಾನಸಭಾ ಕ್ಷೇತ್ರದ ಬುಚಿಪಾರಾ ಗ್ರಾಮದಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮದ ವೇಳೆ ಈ “ಘರ್ ವಾಪಸಿ” ಕಾರ್ಯಕ್ರಮ ನಡೆಯಿತು ಎಂದು ಅವರು ಹೇಳಿದರು.
ಬೋಹ್ರಾ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಚಿರ್ಹಾ, ಪಿಪರ್ಹಾ, ಕುಲ್ಹಿಡೋಂಗ್ರಿ, ಜಮುನ್‌ಪಾನಿ, ನಾಗದ್ಬಾರಾ ಮತ್ತು ನವಾಪಾರಾ ಗ್ರಾಮಗಳ ಆದಿವಾಸಿ ಕುಟುಂಬಗಳು ಭಾಗವಹಿಸಿದ್ದವು.
ಈ ಕಾರ್ಯಕ್ರಮವು “ಸಾಂಸ್ಕೃತಿಕ ಗೌರವ ಸಮಾವೇಶ ಮತ್ತು ಸನ್ಮಾನ ಸಮಾರಂಭ”ದ ಅಂಗವಾಗಿ ನಡೆದಿದ್ದು, ಅರಣ್ಯ ಪ್ರದೇಶಗಳಲ್ಲಿನ ಸಾಂಸ್ಕೃತಿಕ ಗುರುತು, ಆದಿವಾಸಿ ಸಂಪ್ರದಾಯಗಳು ಮತ್ತು ಸಾಮಾಜಿಕ ಏಕತೆ ಕುರಿತ ಜಾಗೃತಿ ಅಭಿಯಾನವನ್ನು ಕೇಂದ್ರೀಕರಿಸಿತ್ತು.
ಅಂದಹಾಗೆ “ಘರ್ ವಾಪಸಿ” ಎಂಬ ಪದವನ್ನು ಸಾಮಾನ್ಯವಾಗಿ ಹಿಂದೂ ಸಂಘಟನೆಗಳು, ಇತರ ಧರ್ಮಗಳಿಗೆ ಮತಾಂತರಗೊಂಡವರನ್ನು ಹಿಂದೂ ಧರ್ಮಕ್ಕೆ ಮರಳಿ ಕರೆತರುವ ಅಭಿಯಾನಗಳಿಗೆ ಬಳಸುತ್ತವೆ.
Advertisement