ಕರ್ನಾಟಕದ ಬೆನ್ನಲ್ಲೇ ತಮಿಳುನಾಡಿನಲ್ಲೂ ಪ್ರತ್ಯೇಕ ಧ್ವಜ ಕೂಗು: ವಿಜಯ್ ಸರ್ಕಾರದ ಮುಂದೆ ಮಹತ್ವದ ಪ್ರಸ್ತಾಪವಿಟ್ಟ ಸಚಿವ ಆಧವ್ ಅರ್ಜುನ

ಕರ್ನಾಟಕದಲ್ಲಿ ಸರ್ಕಾರಿ ಕಟ್ಟಡಗಳ ಮೇಲೆ ಕನ್ನಡ ಧ್ವಜ ಹಾರಿಸುವ ಕಾನೂನು ಚೌಕಟ್ಟಿನ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ತಮಿಳುನಾಡಿನಲ್ಲೂ ಪ್ರತ್ಯೇಕ ಸಾಂಸ್ಕೃತಿಕ ಅಸ್ಮಿತೆಯ ಧ್ವಜದ ಬೇಡಿಕೆ ಮುನ್ನೆಲೆಗೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ:
After Karnataka, Demand For Separate State Flag Sparks Political Row In Tamil Nadu
ಕರ್ನಾಟಕದ ಬೆನ್ನಲ್ಲೇ ತಮಿಳುನಾಡಿನಲ್ಲೂ ಪ್ರತ್ಯೇಕ ಧ್ವಜ ಕೂಗುOnline Desk
Updated on: 

ಚೆನ್ನೈ (ತಮಿಳುನಾಡು): ಕರ್ನಾಟಕದಲ್ಲಿ ಸರ್ಕಾರಿ ಕಟ್ಟಡಗಳ ಮೇಲೆ ಕನ್ನಡ ಧ್ವಜ ಹಾರಿಸುವ ಕಾನೂನು ಚೌಕಟ್ಟಿನ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ತಮಿಳುನಾಡಿನಲ್ಲೂ ಪ್ರತ್ಯೇಕ ಸಾಂಸ್ಕೃತಿಕ ಅಸ್ಮಿತೆಯ ಧ್ವಜದ ಬೇಡಿಕೆ ಮುನ್ನೆಲೆಗೆ ಬಂದಿದೆ. ಹೌದು ಟಿವಿಕೆ ಪಕ್ಷದ ನಾಯಕ ತಮಿಳುನಾಡು ಸಚಿವ ಆಧವ್ ಅರ್ಜುನ ಅವರು ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ಎಂಬ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಇದು ತಮಿಳುನಾಡು ರಾಜಕಾರಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಸಚಿವ ಆಧವ್ ಅರ್ಜುನ ಅವರ ಪ್ರಸ್ತಾಪವೇನು?

ದೇಶದ ಹಲವು ರಾಜ್ಯಗಳು ತಮ್ಮದೇ ಆದ ಪ್ರತ್ಯೇಕ ಧ್ವಜವನ್ನು ಹೊಂದಿವೆ. ಆದರೆ ತಮಿಳುನಾಡಿಗೆ ಪ್ರತ್ಯೇಕ ಧ್ವಜವಿಲ್ಲ, ಹೀಗಾಗಿ ರಾಜ್ಯಕ್ಕೆ ಹೊಸ ಧ್ವಜ ಪರಿಚಯಿಸಲಾಗುವುದು ಎಂದ ಸಚಿವ ಆಧವ್ ಅರ್ಜುನ, ತಮಿಳು ಭಾಷೆ ಹಾಗೂ ತಮಿಳರ ಹೆಮ್ಮೆಯನ್ನು ಸಾರುವ ಸಲುವಾಗಿ, ರಾಷ್ಟ್ರಧ್ವಜಕ್ಕೆ ಸಮಾನವಾದ ಸ್ಥಾನಮಾನ ಹೊಂದಿರುವ ಧ್ವಜವನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಇದರೊಂದಿಗೆ, ಈ ಧ್ವಜಕ್ಕೆ ಕಾನೂನು ಚೌಕಟ್ಟು ತರಬೇಕು ಮತ್ತು ಪ್ರತಿವರ್ಷ ನವೆಂಬರ್ 1 (ರಾಜ್ಯಗಳ ಮರುಸಂಘಟನೆ ದಿನ) ಹಾಗೂ ಜುಲೈ 18 ರಂದು (ತಮಿಳುನಾಡು ದಿನ) ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಈ ಧ್ವಜವನ್ನು ಹಾರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮುಂದುವರೆದು, ಈ ಪ್ರಸ್ತಾಪದ ಬೆನ್ನಲ್ಲೇ ತಮಿಳುನಾಡು ಸಚಿವ ರಾಜ್‌ಮೋಹನ್ ಅವರು ಪ್ರತಿಕ್ರಿಯಿಸಿದ್ದು, "ಕರ್ನಾಟಕ ಮತ್ತು ಆಂಧ್ರಪ್ರದೇಶ ಮಾದರಿಯಲ್ಲೇ ತಮಿಳುನಾಡಿಗೂ ಪ್ರತ್ಯೇಕ ಧ್ವಜ ತರುವ ಕುರಿತು ರಾಜ್ಯ ಸರ್ಕಾರವು ಮುಂಬರುವ ದಿನಗಳಲ್ಲಿ ಪರಿಶೀಲಿಸಲಿದೆ" ಎಂದು ತಿಳಿಸಿದ್ದಾರೆ. ಆದರೆ, ಸಚಿವರ ಈ ಹೇಳಿಕೆಯನ್ನು ತಮಿಳುನಾಡು ಬಿಜೆಪಿ ನಾಯಕ ವಿನೋಜ್ ಪಿ. ಸೆಲ್ವಂ ಕಟುವಾಗಿ ಖಂಡಿಸಿದ್ದು, "ಇಂತಹ ಬೇಡಿಕೆಗಳು ಜನರ ಮನಸ್ಸಿನಲ್ಲಿ ಪ್ರತ್ಯೇಕತಾವಾದಿ ಮನಸ್ಥಿತಿಯನ್ನು ಹುಟ್ಟುಹಾಕುತ್ತವೆ. ಭಾರತದ ತ್ರಿವರ್ಣ ಧ್ವಜದ ಅಡಿಯಲ್ಲಿ ತಮಿಳು ಅಸ್ಮಿತೆ ಎಂದಿಗೂ ಚಿಕ್ಕದಾಗುವುದಿಲ್ಲ. ಧ್ವಜ ವಿನ್ಯಾಸ ಮಾಡುವುದಕ್ಕಿಂತ ತಮಿಳು ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಶಿಕ್ಷಣ ನೀಡುವುದು ಮುಖ್ಯ" ಎಂದು ತಿರುಗೇಟು ನೀಡಿದ್ದಾರೆ.

After Karnataka, Demand For Separate State Flag Sparks Political Row In Tamil Nadu
ತಮಿಳುನಾಡು ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಐದು ವರ್ಷ ವಯೋಮಿತಿ ಸಡಿಲಿಕೆ ಘೋಷಿಸಿದ CM ವಿಜಯ್

50 ವರ್ಷಗಳ ಹಳೆಯ ಇತಿಹಾಸ

ತಮಿಳುನಾಡಿಗೆ ಪ್ರತ್ಯೇಕ ಧ್ವಜ ಬೇಕೆಂಬ ಬೇಡಿಕೆ ಇಂದಿನದಲ್ಲ. 1970 ರಲ್ಲೇ ಅಂದಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ತಮಿಳುನಾಡಿಗೆ ಪ್ರತ್ಯೇಕ ಧ್ವಜದ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದರು. ಆದರೆ ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X