ವಿಚಿತ್ರ ಹೇರ್ ಸ್ಟೈಲ್ ಮಾಡಿದ ವಿದ್ಯಾರ್ಥಿಗಳ ತಲೆ ಬೋಳಿಸಿ: ತಮಿಳುನಾಡು ಸಚಿವೆ ವಿವಾದಾತ್ಮಕ ಹೇಳಿಕೆ

ವಿಚಿತ್ರ ಹೇರ್ ಸ್ಟೈಲ್ ಮಾಡಿದ ಶಾಲಾ ವಿದ್ಯಾರ್ಥಿಗಳ ತಲೆ ಬೋಳಿಸಿ ಎಂದು ತಮಿಳುನಾಡು ಸಚಿವೆ ಜಗದೀಶ್ವರಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ವಿರುಧುನಗರ ಜಿಲ್ಲೆಯ ಕರಿಯಾಪಟ್ಟಿ ಬಳಿಯ ಆಯನ್ ರೆಡ್ಡಿಪಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ...
Jagadeeswari
ಸಚಿವೆ ಜಗದೀಶ್ವರಿ
Updated on: 

ವಿರುದುನಗರ: ವಿಚಿತ್ರ ಹೇರ್ ಸ್ಟೈಲ್ ಮಾಡಿದ ಶಾಲಾ ವಿದ್ಯಾರ್ಥಿಗಳ ತಲೆ ಬೋಳಿಸಿ ಎಂದು ತಮಿಳುನಾಡು ಸಚಿವೆ ಜಗದೀಶ್ವರಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ವಿರುಧುನಗರ ಜಿಲ್ಲೆಯ ಕರಿಯಾಪಟ್ಟಿ ಬಳಿಯ ಆಯನ್ ರೆಡ್ಡಿಪಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗಡಿ ಗೋಡೆಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಜಗದೀಶ್ವರಿ, ವಿದ್ಯಾರ್ಥಿಗಳ ಕೇಶವಿನ್ಯಾಸದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಶಾಲಾ ಮಕ್ಕಳ ಕೇಶವಿನ್ಯಾಸ ಅವರನ್ನು 'ದರೋಡೆಕೋರರು' ಎಂದು ಕಾಣುವಂತೆ ಮಾಡುತ್ತದೆ. ಸೂಕ್ತವಲ್ಲದ ಕೇಶವಿನ್ಯಾಸದೊಂದಿಗೆ ಬಂದ ವಿದ್ಯಾರ್ಥಿಗಳ ತಲೆಯನ್ನು ಸಂಪೂರ್ಣವಾಗಿ ಬೋಳಿಸಿ, ಅದರಲ್ಲಿ ಯಾವುದೇ ತಪ್ಪಿಲ್ಲ. ಅವರನ್ನು ನನ್ನ ಸ್ವಂತ ಮಕ್ಕಳೆಂದು ಪರಿಗಣಿಸಿ ನಾನು ಇದನ್ನು ಹೇಳುತ್ತಿದ್ದೇನೆ ಎಂದರು.

Jagadeeswari
'ತಮಿಳುನಾಡಿಗೆ ರಾಷ್ಟ್ರಧ್ವಜಕ್ಕೆ ಸಮಾನವಾಗಿ ಪ್ರತ್ಯೇಕ ಧ್ವಜ ಬೇಕು'; TVK ಸಚಿವರ ಆಗ್ರಹಕ್ಕೆ ಬಿಜೆಪಿ ಕಿಡಿ

ಅಂತಹ ಕೇಶವಿನ್ಯಾಸವನ್ನು ಅನುಮತಿಸುವಲ್ಲಿ ಪೋಷಕರ ಪಾತ್ರವನ್ನು ಜಗದೀಶ್ವರಿ ಪ್ರಶ್ನಿಸಿದ್ದಾರೆ. ಅಶಿಸ್ತು ಹೆಚ್ಚಾಗಿ ಮನೆಯಿಂದಲೇ ಪ್ರಾರಂಭವಾಗುತ್ತದೆ. ಇಂತಹ ಪ್ರವೃತ್ತಿಗೆ ಅವಕಾಶ ನೀಡುವ ಮೂಲಕ ಅವರೇ ತಪ್ಪುಗಳನ್ನು ಸೃಷ್ಟಿಸುತ್ತಿದ್ದಾರೆ ಎಂಬುದನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X