ಬಸ್‌ನಲ್ಲಿ ತನ್ನದೇ ಪಕ್ಷದ ಸಂಸದೆಯ ಕೆನ್ನೆಗೆ ಹೊಡೆದ ಕಾಂಗ್ರೆಸ್ ಸಂಸದ: ವಿಡಿಯೋ ವೈರಲ್; ಖರ್ಗೆ, ರಾಹುಲ್ ಗಾಂಧಿಗೆ ದೂರು!

ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ವಿರೋಧ ಪಕ್ಷಗಳು ನಡೆಸಿದ ಪ್ರತಿಭಟನಾ ರ‍್ಯಾಲಿಯ ವೇಳೆ ನಿಲ್ಲಿಸಿದ್ದ ಬಸ್ಸಿನೊಳಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
Congress MP Shyamkumar Barve seen slapping party's woman MP in video
ಪ್ರತಿಭಾ ಧನೋರ್ಕರ್ - ಶ್ಯಾಮ್‌ಕುಮಾರ್ ಬರ್ವೆ
Updated on: 

ಮುಂಬೈ: ಕಾಂಗ್ರೆಸ್‌ನ ರಾಮ್‌ಟೆಕ್ ಸಂಸದ ಶ್ಯಾಮ್‌ಕುಮಾರ್ ಬರ್ವೆ ಅವರು, ತಮ್ಮ ಪಕ್ಷದ ಚಂದ್ರಪುರ ಸಂಸದೆ ಪ್ರತಿಭಾ ಧನೋರ್ಕರ್ ಅವರಿಗೆ ಮೆಲ್ಲನೆ ಕೆನ್ನೆಗೆ ಹೊಡೆದಿರುವ ವಿಡಿಯೋವೊಂದು ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಘಟನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸಂಸದೆ ಪ್ರತಿಭಾ ಧನೋರ್ಕರ್, “ಅದು ಕೇವಲ ತಮಾಷೆಯಷ್ಟೇ. ಶ್ಯಾಮ್‌ಕುಮಾರ್ ಬರ್ವೆ ನನಗೆ ಅಣ್ಣನಿದ್ದಂತೆ” ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ನವೆಂಬರ್ 1 ರಂದು ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ವಿರೋಧ ಪಕ್ಷಗಳು ನಡೆಸಿದ ಪ್ರತಿಭಟನಾ ರ‍್ಯಾಲಿಯ ವೇಳೆ ನಿಲ್ಲಿಸಿದ್ದ ಬಸ್ಸಿನೊಳಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

Congress MP Shyamkumar Barve seen slapping party's woman MP in video
'ದೇವಸ್ಥಾನಗಳಲ್ಲಿ ಅತ್ಯಾಚಾರ' ಹೇಳಿಕೆ: ನೇಹಾ ಬೋರಾ ವಿರುದ್ಧ ಪೊಲೀಸರಿಗೆ ದೂರು; ರಾಹುಲ್ ಗಾಂಧಿ ವಿರುದ್ಧ BJP ಟೀಕೆ

ಸಂಸದೆ ವರ್ಷಾ ಗಾಯಕ್ವಾಡ್ ಅವರೊಂದಿಗೆ ಪ್ರತಿಭಾ ಧನೋರ್ಕರ್ ಕುಳಿತು ನಗುತ್ತಾ ಮಾತನಾಡುತ್ತಿದ್ದಾಗ, ಪಕ್ಕದಲ್ಲೇ ನಿಂತಿದ್ದ ಸಂಸದ ಶ್ಯಾಮ್‌ಕುಮಾರ್ ಬರ್ವೆ ಅವರು, ಪ್ರತಿಭಾ ಅವರ ಕೆನ್ನೆಗೆ ಮೆಲ್ಲನೆ ಹೊಡೆದಿದ್ದಾರೆ.

ಖರ್ಗೆ, ರಾಹುಲ್ ಗಾಂಧಿಗೆ ದೂರು

ಸಂಸದೆ ಪ್ರತಿಭಾ ಅವರು ಇದನ್ನು ತಮಾಷೆ ಎಂದು ತಳ್ಳಿಹಾಕಿದ್ದರೂ, ಈ ಘಟನೆಯ ವಿಡಿಯೋದ ಆಧಾರದ ಮೇಲೆ ಕಾಂಗ್ರೆಸ್‌ನ ಕೆಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ.

ಪಕ್ಷದ ಶಿಸ್ತು ಮತ್ತು ಮಹಿಳಾ ನಾಯಕರ ಗೌರವದ ಹಿತದೃಷ್ಟಿಯಿಂದ ಈ ಕುರಿತು ಶಿಸ್ತು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕೋರಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X