'ಮೋದಿ ಸರ್ಕಾರ ಪ್ರಜಾಪ್ರಭುತ್ವ, ಸಾಂಸ್ಥಿಕ ವ್ಯವಸ್ಥೆಗೆ ಭಾರಿ ಹಾನಿಯುಂಟುಮಾಡಿದೆ': ಸೋನಿಯಾ ಗಾಂಧಿ

ನವೆಂಬರ್ 10ರಂದು ಬಿಡುಗಡೆಯಾಗಲಿರುವ ತಮ್ಮ ಆತ್ಮಕಥನ Belonging: A Journey of Love ಕೃತಿಯ ಬಿಡುಗಡೆಗೆ ಮುನ್ನ ರಾಷ್ಟ್ರೀಯ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Sonia Gandhi
ಸೋನಿಯಾ ಗಾಂಧಿ
Updated on: 

ನವದೆಹಲಿ: ಕಳೆದ 12 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತದ ಪ್ರಜಾಪ್ರಭುತ್ವ, ಸಾಂವಿಧಾನಿಕ ಸಂಸ್ಥೆಗಳು ಹಾಗೂ ದೇಶದ ಸಾಮಾಜಿಕ ಸಾಮರಸ್ಯಕ್ಕೆ 'ಭಾರಿ ಹಾನಿ' ಉಂಟುಮಾಡಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಈ ಸರ್ಕಾರ ಅಧಿಕಾರದಿಂದ ಕೆಳಗಿಳಿದ ಬಳಿಕವೂ ವ್ಯವಸ್ಥೆಗಳನ್ನು ಮೊದಲಿನ ಸ್ಥಿತಿಗೆ ತರಲು ಸಾಕಷ್ಟು ಸಮಯ ಮತ್ತು ಪ್ರಯತ್ನ ಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ನವೆಂಬರ್ 10ರಂದು ಬಿಡುಗಡೆಯಾಗಲಿರುವ ತಮ್ಮ ಆತ್ಮಕಥನ Belonging: A Journey of Love ಕೃತಿಯ ಬಿಡುಗಡೆಗೆ ಮುನ್ನ ರಾಷ್ಟ್ರೀಯ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Sonia Gandhi
'ಬಾಯಿ ಸುಟ್ಟುಕೊಂಡಿದ್ದೆ': ರಾಜೀವ್ ಗಾಂಧಿ ಜೊತೆ ತಂದೂರಿ ಚಿಕನ್ ಸವಿದಿದ್ದನ್ನು ನೆನಪಿಸಿಕೊಂಡ ಸೋನಿಯಾ!

ದೇಶಕ್ಕೆ ಆಗಿರುವ ಹಾನಿಯನ್ನು ಜನರು ಈಗ ಹೆಚ್ಚು ಹೆಚ್ಚು ಗುರುತಿಸುತ್ತಿದ್ದು, ಅವರಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಸರಿಯಾದ ಆಡಳಿತ ಎಂದು ಬಣ್ಣಿಸಿರುವ ವ್ಯವಸ್ಥೆಗೆ ಮರಳುವುದನ್ನು ಭಾರತೀಯರು ಸ್ವಾಗತಿಸಲಿದ್ದಾರೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಕಳೆದ 12 ವರ್ಷಗಳಲ್ಲಿ ನಮ್ಮ ದೇಶದ ಸಾಮಾಜಿಕ ಸಾಮರಸ್ಯ, ಪ್ರಜಾಪ್ರಭುತ್ವ ಮತ್ತು ಸಂಸ್ಥೆಗಳಿಗೆ ಭಾರಿ ಹಾನಿಯಾಗಿದೆ. ಈ ಸರ್ಕಾರ ಅಧಿಕಾರದಿಂದ ನಿರ್ಗಮಿಸಿದ ಬಳಿಕವೂ ನಮ್ಮ ವ್ಯವಸ್ಥೆಗಳನ್ನು ಮತ್ತೆ ಆರೋಗ್ಯಕರ ಸ್ಥಿತಿಗೆ ತರಲು ಸಮಯ ಬೇಕಾಗುತ್ತದೆ. ರಾಜಕೀಯ ಪಕ್ಷಗಳು ಇದಕ್ಕಾಗಿ ಸಾಕಷ್ಟು ಶ್ರಮಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

Sonia Gandhi
ರಾಜೀವ್ ಪ್ರಧಾನಿಯಾಗುವುದು ನನಗೆ ಇಷ್ಟವಿರಲಿಲ್ಲ; ನನ್ನ ಆತ್ಮಕತೆ ಬಿಡುಗಡೆಯಾದಾಗ ಕೋಲಾಹಲ ಖಚಿತ: ಸೋನಿಯಾ ಗಾಂಧಿ

ಕಾಂಗ್ರೆಸ್ ಪಕ್ಷದ ಕುಸಿತ, ಅದರ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ ಸಾಧ್ಯತೆಗಳ ಕುರಿತು ಕೇಳಿದ ಪ್ರಶ್ನೆಗೆ ಸೋನಿಯಾ ಗಾಂಧಿ, ನಾನು ಅಷ್ಟೊಂದು ನಿರಾಶಾವಾದಿಯಲ್ಲ. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಿಗೆ ಸಮಾನ ಅವಕಾಶದ ವೇದಿಕೆ ಲಭ್ಯವಾಗಿಲ್ಲ ಎಂಬುದನ್ನು ಗಮನಿಸಬೇಕು.

ಎಲ್ಲಾ ಸಂಸ್ಥೆಗಳ ಮೇಲೂ, ಅದರಲ್ಲೂ ವಿಶೇಷವಾಗಿ ಚುನಾವಣಾ ಆಯೋಗದ ಮೇಲೆ ಅವರು ಹೊಂದಿರುವ ಸಂಪೂರ್ಣ ಹಿಡಿತ, ಮುಖ್ಯವಾಹಿನಿ ಮಾಧ್ಯಮಗಳ ಮೇಲಿನ ನಿಯಂತ್ರಣ, ಹಣಬಲ ಮತ್ತು ಧರ್ಮದ ದುರ್ಬಳಕೆ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ, ಇವೆಲ್ಲದರ ಮಧ್ಯೆ ನಮ್ಮ ಪಕ್ಷ ಹೋರಾಟ ನಡೆಸುತ್ತಿದ್ದು, ಪ್ರಗತಿ ಸಾಧಿಸುತ್ತಿದೆ. ವಾಸ್ತವವಾಗಿ, ಈ ದಾಳಿಯನ್ನು ತಾಳಿಕೊಂಡು ನಿಲ್ಲುವ ಸ್ಥೈರ್ಯ ತೋರಿದ ಏಕೈಕ ಪಕ್ಷ ನಮ್ಮದು" ಎಂದರು.

ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಎಲ್ಲ ರೀತಿಯ ಕಿರುಕುಳವನ್ನು ಎದುರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಆದರೂ ಪ್ರತಿಯೊಂದು ಹಳ್ಳಿ ಮತ್ತು ಜಿಲ್ಲೆಯಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳಿಗಾಗಿ ಹೋರಾಡುತ್ತಿದ್ದಾರೆ ಎಂದರು.

ಇತ್ತೀಚಿನ ತಿಂಗಳುಗಳಲ್ಲಿ ಹಲವು ಚುನಾವಣೆಗಳಲ್ಲಿ ಅಕ್ರಮ ನಡೆದಿದೆ ಎಂಬುದು ಸ್ಪಷ್ಟವಾಗಿ ಸಾಬೀತಾಗಿದೆ. ಜನರು ಈಗ ಈ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಕಾಂಗ್ರೆಸ್ ಸಮಾನ ಮನಸ್ಕ ಪಕ್ಷಗಳೊಂದಿಗೆ ಕೆಲಸ ಮಾಡುತ್ತಿದ್ದು, ನಮ್ಮ ಭವಿಷ್ಯದ ಅವಕಾಶಗಳು ದಿನದಿಂದ ದಿನಕ್ಕೆ ಉತ್ತಮಗೊಳ್ಳುತ್ತಿವೆ ಎಂದು ಹೇಳಿದರು.

ಹಾರ್ಪರ್‌ಕಾಲಿನ್ಸ್ ಇಂಡಿಯಾ ಪ್ರಕಟಿಸಿರುವ Belonging: A Journey of Love ವೈಯಕ್ತಿಕ ಆತ್ಮಕಥನವಾಗಿದೆ. ರಾಜಕೀಯವು ಈ ಕೃತಿಯಲ್ಲಿ ಹಿನ್ನೆಲೆಯಾಗಿ ಅಥವಾ ಒಂದು ರೀತಿಯ ಚೌಕಟ್ಟಾಗಿ ಕಾಣಿಸಿಕೊಳ್ಳುತ್ತದೆ ಎಂದು ಪುಸ್ತಕದಲ್ಲಿ ಸೋನಿಯಾ ಗಾಂಧಿ ವಿವರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಏಳಿಗೆ ಮತ್ತು ಅದರಿಂದ ಕಾಂಗ್ರೆಸ್ ಕಲಿಯಬೇಕಾದ ಪಾಠಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೋನಿಯಾ ಗಾಂಧಿ, "ಅವರು ಸಂಪೂರ್ಣ ಭಿನ್ನವಾದ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದಿರುವುದು ನಿಜ. ಆದರೆ ಕಾಂಗ್ರೆಸ್ ಪಕ್ಷದಲ್ಲಿಯೂ ಜನರು ರಾಜಕೀಯದಲ್ಲಿ ಯಶಸ್ಸು ಸಾಧಿಸಲು ಹಲವು ಮಾರ್ಗಗಳಿವೆ. ಉದಾಹರಣೆಗೆ ಡಾ. ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗಮನಿಸಬಹುದು. ಆರ್‌ಎಸ್‌ಎಸ್‌ನಿಂದ ನಾವು ಕಲಿಯಬೇಕಾದದ್ದು ಹೆಚ್ಚೇನೂ ಇದೆ ಎಂದು ನನಗೆ ಅನಿಸುವುದಿಲ್ಲ" ಎಂದಿದ್ದಾರೆ.

2004ರಲ್ಲಿ ತಾವು ಪ್ರಧಾನಿಯಾಗಲು ಒಪ್ಪಿಕೊಂಡಿದ್ದರೆ ಯುಪಿಎ ಸರ್ಕಾರದ ನೀತಿಗಳು ಮತ್ತು ಕಾಂಗ್ರೆಸ್‌ನ ಕಾರ್ಯತಂತ್ರ ಹೇಗೆ ಭಿನ್ನವಾಗಿರುತ್ತಿತ್ತು ಎಂದು ಎಂದಾದರೂ ಯೋಚಿಸಿದ್ದೀರಾ ಎಂಬ ಪ್ರಶ್ನೆಗೆ, "ಇಲ್ಲ, ಖಂಡಿತ ಇಲ್ಲ. ಅಂತಹ ಆಲೋಚನೆ ನನ್ನ ಮನಸ್ಸಿನಲ್ಲಿ ಎಂದಿಗೂ ಬಂದಿಲ್ಲ. ನಮ್ಮ ಅನುಭವ ಬಹುತೇಕ ಸಕಾರಾತ್ಮಕವಾಗಿತ್ತು. ನಾವು ತಂಡವಾಗಿ ಕೆಲಸ ಮಾಡಿದ್ದೆವು. ನಮ್ಮ ಜವಾಬ್ದಾರಿಗಳು ಸ್ಪಷ್ಟವಾಗಿ ವಿಭಜನೆಯಾಗಿದ್ದವು. ಮನಮೋಹನ್ ಸಿಂಗ್ ಸರ್ಕಾರದ ನೇತೃತ್ವ ವಹಿಸಿದ್ದರೆ, ನಾನು ಪಕ್ಷದ ನೇತೃತ್ವ ವಹಿಸಿದ್ದೆ ಎಂದು ಉತ್ತರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X