ಕುಸಿದುಬಿದ್ದ ಮಾಜಿ ಉಪರಾಷ್ಟ್ರಪತಿ ಧನಕರ್; ಆಸ್ಪತ್ರೆಗೆ ದಾಖಲು

ಆದಾಗ್ಯೂ, ಅವರ ಆರೋಗ್ಯದ ಬಗ್ಗೆ ಆತಂಕವಿದ್ದಿದ್ದರಿಂದ, ನಂತರ ಅವರನ್ನು ಆಂಬ್ಯುಲೆನ್ಸ್ ಮೂಲಕ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
Jagadeep Dhankar
ಜಗದೀಪ್ ಧನ್ ಕರ್ online desk
Updated on: 

ನವದೆಹಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಬುಧವಾರ ಬೆಳಗಿನ ನಡಿಗೆಯ ವೇಳೆ ಕುಸಿದು ಬಿದ್ದಿದ್ದು, ಅವರನ್ನು ದೆಹಲಿಯ ಏಮ್ಸ್ (AIIMS) ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಧನಕರ್ ಅವರು ಕೆಲಕಾಲ ಪ್ರಜ್ಞೆ ತಪ್ಪಿದ್ದರು ಎಂದು ವರದಿಯಾಗಿದೆ. ಅವರೊಂದಿಗೆ ಇದ್ದ ಭದ್ರತಾ ಸಿಬ್ಬಂದಿ ಅವರನ್ನು ಪೊಲೀಸ್ ಕಂಟ್ರೋಲ್ ರೂಮ್ (PCR) ವಾಹನದಲ್ಲಿ ಮನೆಗೆ ಕರೆದೊಯ್ದರು. ಬಳಿಕ, ಐಎಲ್‌ಬಿಎಸ್ (ILBS) ವೈದ್ಯಕೀಯ ತಂಡ ಮತ್ತು ಏಮ್ಸ್‌ನ ವೈದ್ಯ ಸಂದೀಪ್ ಸೇಠ್ ಅವರು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು.

Jagadeep Dhankar
ಚಳಿಗಾಲದಲ್ಲಿ ಆರೋಗ್ಯ ಹಾಳು ಮಾಡುವ 7 ಅಭ್ಯಾಸಗಳಿವು! ನಿರ್ಲಕ್ಷಿಸಿದರೆ ಅಪಾಯ ಖಚಿತ!

ಆದಾಗ್ಯೂ, ಅವರ ಆರೋಗ್ಯದ ಬಗ್ಗೆ ಆತಂಕವಿದ್ದಿದ್ದರಿಂದ, ನಂತರ ಅವರನ್ನು ಆಂಬ್ಯುಲೆನ್ಸ್ ಮೂಲಕ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

75 ವರ್ಷ ವಯಸ್ಸಿನ ಧನಕರ್ ಅವರನ್ನು ಆಸ್ಪತ್ರೆಯ 'ಕಾರ್ಡಿಯೋ-ನ್ಯೂರೋ ಸೆಂಟರ್'ಗೆ (ಹೃದಯ ಮತ್ತು ನರರೋಗ ವಿಭಾಗ) ದಾಖಲಿಸಲಾಗಿದ್ದು, ಅಲ್ಲಿ ಕಾರ್ಡಿಯಾಲಜಿ ವಿಭಾಗದ ವೈದ್ಯರು ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಚಿಕಿತ್ಸೆ ನೀಡುತ್ತಿದ್ದಾರೆ.

ಅವರ ಆರೋಗ್ಯ ಸ್ಥಿತಿಯ ಕುರಿತು ತಕ್ಷಣಕ್ಕೆ ಯಾವುದೇ ಮಾಹಿತಿ ಲಭ್ಯವಿಲ್ಲ. ಏಮ್ಸ್ ಆಡಳಿತ ಮಂಡಳಿಯು ಈವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಧನಕರ್ ಆಗಸ್ಟ್ 2022 ರಿಂದ ಜುಲೈ 2025 ರವರೆಗೆ ಭಾರತದ 14ನೇ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು; ನಂತರ ಅವರು ಆ ಹುದ್ದೆಗೆ ರಾಜೀನಾಮೆ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X