ಸಿಹಿ ರಸಗುಲ್ಲಾ ಎಂದು ನಂಬಿ ಬಾಯಿಗಿಟ್ಟ ಯುವಕ; ಕ್ಷಣಾರ್ಧದಲ್ಲೇ ಸ್ಫೋಟಗೊಂಡ ಹಂದಿ ಕೊಲ್ಲುವ ಬಾಂಬ್, 35 ವರ್ಷದ ವ್ಯಕ್ತಿ ಬಲಿ!

ಕಾಡುಹಂದಿ ಬೇಟೆಗಾಗಿ ತಯಾರಿಸಲಾಗಿದ್ದ ನಾಡಬಾಂಬ್ ಅನ್ನು 'ರಸಗುಲ್ಲಾ' ಎಂದು ನಂಬಿಸಿ ನೀಡಿದ್ದರಿಂದ, ಅದನ್ನು ತಿಂದ 35 ವರ್ಷದ ವ್ಯಕ್ತಿಯೊಬ್ಬರು ಬಾಯಲ್ಲೇ ಸಿಡಿಮದ್ದು ಸ್ಫೋಟಗೊಂಡು ಮೃತಪಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Man Dies After Eating Homemade Bomb Given Mistaken for Rasgulla in Madhya Pradesh
ಸಿಹಿ ತಿಂಡಿ ಎಂದು ಕೊಟ್ಟಿದ್ದು ನಾಡಬಾಂಬ್AI Image
Updated on: 

ದಿಂಡೋರಿ (ಮಧ್ಯಪ್ರದೇಶ): ಸಂಜೆಯ ತಂಪಾದ ವಾತಾವರಣದಲ್ಲಿ, ಮನೆಯ ಅಂಗಳದಲ್ಲಿ ಬೆಂಕಿ ಕಾಯಿಸುತ್ತಾ ಆತ್ಮೀಯರೊಂದಿಗೆ ಹರಟೆ ಹೊಡೆಯುತ್ತಿರುವಾಗ, ಯಾರಾದರೂ ಪ್ರೀತಿಯಿಂದ ಸಿಹಿಯಾದ ರಸಗುಲ್ಲಾ ನೀಡಿದರೆ ಯಾರಿಗೆ ತಾನೇ ತಿನ್ನಬೇಕೆನಿಸುವುದಿಲ್ಲ? ಆದರೆ, ಸಿಹಿ ಎಂದು ನಂಬಿ ಬಾಯಿಗಿಟ್ಟ ಆ ಒಂದು ತುತ್ತು ಕ್ಷಣಾರ್ಧದಲ್ಲೇ ಭೀಕರ ಸ್ಫೋಟಗೊಂಡು ಪ್ರಾಣವನ್ನೇ ಕಸಿದುಕೊಳ್ಳುತ್ತದೆ ಎಂದು ಯಾರಾದರೂ ಊಹಿಸಲು ಸಾಧ್ಯವೇ? ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಹೌದು, ದಿಂಡೋರಿ ಜಿಲ್ಲೆಯಲ್ಲಿ ಕಾಡುಹಂದಿ ಬೇಟೆಗಾಗಿ ತಯಾರಿಸಲಾಗಿದ್ದ ದೇಶೀಯ ಸಿಡಿಮದ್ದನ್ನು 'ರಸಗುಲ್ಲಾ' ಎಂದು ನಂಬಿ ಬಾಯಿಗೆ ಹಾಕಿಕೊಂಡ 35 ವರ್ಷದ ರಾಜೇಂದ್ರ ಬರೋಟಿಯಾ ಎಂಬ ವ್ಯಕ್ತಿ ಸ್ಫೋಟದಿಂದಾಗಿ ದಾರುಣವಾಗಿ ಮೃತಪಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ನವೆಂಬರ್ 10ರಂದು ದಿಂಡೋರಿ ಜಿಲ್ಲೆಯ ಪಡರಿಯಾ ಛಾಂಟಾ ಗ್ರಾಮದಲ್ಲಿ ಮೃತ ರಾಜೇಂದ್ರ ಬಾರೌತಿಯಾ (35) ಅವರು ರಾತ್ರಿ ಮನೆಯ ಮುಂದೆ ಬೆಂಕಿ ಕಾಯಿಸುತ್ತಾ ಕುಳಿತಿದ್ದರು. ಈ ವೇಳೆ ಅದೇ ಗ್ರಾಮದ ರಾಮಭಗತ್ ಬಾರೌತಿಯಾ ಎಂಬಾತ 'ರಸಗುಲ್ಲಾ' ಸಿಹಿತಿಂಡಿ ಎಂದು ಹೇಳಿ ಆಹಾರದ ರೂಪದಲ್ಲಿದ್ದ ಸ್ಫೋಟಕವನ್ನು ನೀಡಿದ್ದಾನೆ. ಅದನ್ನು ನಿಜವಾದ ರಸಗುಲ್ಲಾ ಎಂದು ನಂಬಿದ ರಾಜೇಂದ್ರ ಬಾಯಿಗೆ ಹಾಕಿಕೊಂಡು ಕಚ್ಚಿದ ತಕ್ಷಣ ಸಿಡಿಮದ್ದು ಸ್ಫೋಟಗೊಂಡಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ದಿಂಡೋರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮುಂದುವರೆದು, ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 105 ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸ್ಫೋಟಕ ನೀಡಿದ ರಾಮಭಗತ್ ಹಾಗೂ ಆತನಿಗೆ ಬಾಂಬ್ ಮಾರಾಟ ಮಾಡಿದ ಮತ್ತೊಬ್ಬ ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Man Dies After Eating Homemade Bomb Given Mistaken for Rasgulla in Madhya Pradesh
ಪಾಕ್ ಬ್ಯೂಟಿ ಕ್ರೀಮ್‌ಗಳಲ್ಲಿ ಹೆಚ್ಚಿನ 'ಮರ್ಕ್ಯೂರಿ ವಿಷಾಂಶ' ಪತ್ತೆ! ಪ್ರಯೋಗಾಲಯ ವರದಿಯಲ್ಲಿ ಬಹಿರಂಗ

ಏನಿದು ಸ್ಫೋಟಕ?

ಸ್ಥಳೀಯವಾಗಿ 'ಸೂವರ್ ಮಾರ್ ಬಾಂಬ್' (ಹಂದಿ ಕೊಲ್ಲುವ ಬಾಂಬ್) ಎಂದು ಕರೆಯಲಾಗುವ ಈ ನಾಡಬಾಂಬ್ ಅನ್ನು ಹಿಟ್ಟು ಮತ್ತು ಸಿಡಿಮದ್ದು ಬಳಸಿ ತಯಾರಿಸಲಾಗುತ್ತದೆ. ಕಾಡುಹಂದಿಗಳು ಇದನ್ನು ಆಹಾರವೆಂದು ಕಚ್ಚಿದಾಗ ಸ್ಫೋಟಗೊಳ್ಳುವಂತೆ ಇದನ್ನು ವಿನ್ಯಾಸಗೊಳಿಸಲಾಗಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X