ನನ್ನನ್ನು 'ಅವಳು' ಅಂತ ಕರೆಯಬೇಡಿ,': ತನ್ನ ಲಿಂಗ ಗುರುತಿನ ಬಗ್ಗೆ ಸ್ಪಷ್ಟನೆ ನೀಡಿದ ನೇಹಾ ಬೋರಾ! Video

ತಾನು ಪುರುಷ ಅಥವಾ ಸ್ತ್ರೀ ಎಂಬ ಚೌಕಟ್ಟಿಗೆ ಒಳಪಡುವುದಿಲ್ಲ. ಬದಲಾಗಿ ತಾನೂಬ್ಬ ನಾನ್ -ಬೈನರಿ ವ್ಯಕ್ತಿ ಎಂದು ಸ್ಪಷ್ಪಪಡಿಸಿದ್ದಾರೆ.
Neha Bora
ನೇಹಾ ಬೋರಾ
Updated on: 

ನವದೆಹಲಿ: ಸಾಮಾಜಿಕ ಹೋರಾಟಗಾರ್ತಿ ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಯೇಷನ್ (AISA) ಅಧ್ಯಕ್ಷೆ ನೇಹಾ ಬೋರಾ ತನ್ನ ವೈಯಕ್ತಿಕ ಲಿಂಗ ಗುರುತಿನ ಬಗ್ಗೆ ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ವಿರೋಧ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇತ್ತೀಚಿಗೆ ನಡೆದ ಪ್ರತಿಭಟನೆ ವೇಳೆ ತಮ್ಮ ನೇರ ನುಡಿಗಳಿಂದ ನೇಹಾ ಬೋರಾ ಯುವ ಜನರ ಗಮನ ಸೆಳೆಯುವ ಮೂಲಕ ಮುನ್ನೆಲೆಗೆ ಬಂದಿದ್ದರು.

ಸಂದರ್ಶನವೊಂದರಲ್ಲಿ ಮಾತನಾಡಿರುವ ನೇಹಾ ಬೋರಾ, ತಾನು ಪುರುಷ ಅಥವಾ ಸ್ತ್ರೀ ಎಂಬ ಚೌಕಟ್ಟಿಗೆ ಒಳಪಡುವುದಿಲ್ಲ. ಬದಲಾಗಿ ತಾನೂಬ್ಬ ನಾನ್ -ಬೈನರಿ ವ್ಯಕ್ತಿ ಎಂದು ಸ್ಪಷ್ಪಪಡಿಸಿದ್ದಾರೆ. ಅನೇಕ ಮಾಧ್ಯಮಗಳನ್ನು ನನ್ನನ್ನು ಅವಳು ಎಂದು ಸಂಬೋಧಿಸುತ್ತವೆ. ಆದರೆ ನಾನು ಸ್ತ್ರೀಯೂ ಅಲ್ಲ, ಪುರುಷನೂ ಅಲ್ಲ, ನನ್ನನ್ನು ಕೇವಲ ಒಬ್ಬ ವ್ಯಕ್ತಿಯಾಗಿ ನೋಡಬೇಕು ಎಂದು ಅವರು ತಿಳಿಸಿದ್ದಾರೆ.

ಮಾಧ್ಯಮಗಳಲ್ಲಿ ಕೆಲವೊಮ್ಮೆ ನನ್ನನ್ನು ಅವಳು ಎಂದರೆ, ಮತ್ತೊಮ್ಮೆ ಅವರು ಎಂದು ಕರೆಯುತ್ತಾರೆ. ನಾನು ಸಹಜವಾಗಿ ಇದನ್ನು ಸ್ವೀಕರಿಸಿದ್ದೇನೆ. ನಾನ್ -ಬೈನರಿ ವ್ಯಕ್ತಿಗಳನ್ನು ಹೇಗೆ ಕರೆಯಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ಜನರಿಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಈಗ ಹಲವು ಮಾಧ್ಯಮಗಳು ನನ್ನನ್ನು ಒಬ್ಬ ವ್ಯಕ್ತಿ ಎಂದು ಗುರುತಿಸಲು ಶುರುಮಾಡಿವೆ ಎಂದು ಅವರು ಹೇಳಿದ್ದಾರೆ.

Neha Bora
'ದೇವಸ್ಥಾನಗಳಲ್ಲಿ ಅತ್ಯಾಚಾರ' ಹೇಳಿಕೆ: ನೇಹಾ ಬೋರಾ ವಿರುದ್ಧ ಪೊಲೀಸರಿಗೆ ದೂರು; ರಾಹುಲ್ ಗಾಂಧಿ ವಿರುದ್ಧ BJP ಟೀಕೆ

ಏನಿದು ನಾನ್-ಬೈನರಿ? ಸಾಮಾನ್ಯವಾಗಿ ನಾನ್-ಬೈನರಿ ವ್ಯಕ್ತಿಗಳು ಟ್ರಾನ್ಸ್ ಜೆಂಡರ್ ಗಳಿಗಿಂತ ಭಿನ್ನವಾಗಿರುತ್ತಾರೆ. ಇವರನ್ನು ಕೇವಲ ಪುರುಷ ಅಥವಾ ಸ್ತ್ರೀ ಎಂದು ಗುರುತಿಸಲು ಸಾಧ್ಯವಿಲ್ಲ. ಕೆಲವರು ತಮ್ಮಲ್ಲಿ ಪುರುಷ ಮತ್ತು ಸ್ತ್ರೀ ಎರಡು ಗುಣಗಳಿವೆ ಎಂದು ಭಾವಿಸಿದರೆ, ಇನ್ನು ಕೆಲವರು ಯಾವುದೇ ಲಿಂಗದ ಹಣೆಪಟ್ಟಿ ಇಲ್ಲದೆ ಕೇವಲ ಮನುಷ್ಯ ಅಥವಾ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ನೇಹಾ ಬೋರಾ ಕೂಡಾ ಇದೇ ವರ್ಗಕ್ಕೆ ಸೇರಿದ್ದು, ತನ್ನನ್ನು ಯಾವುದೇ ಲಿಂಗದ ಚೌಕಟ್ಟಿನಲ್ಲಿ ಬಂಧಿಸಬಾರದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X