ಮುಂಬೈನಲ್ಲಿ CNG ದರ ಮತ್ತೆ ಏರಿಕೆ; ಇದೇ ವರ್ಷದಲ್ಲಿ 8ನೇ ಬಾರಿ ಹೆಚ್ಚಳ!

ಮುಂಬೈ ಮಹಾನಗರ ಪ್ರದೇಶ (MMR) ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಎನ್‌ಜಿ ದರವು ಪ್ರತಿ ಕೆಜಿಗೆ 91.50 ರೂಪಾಯಿಗೆ ಏರಿಕೆಯಾಗಿದೆ.
Mumbai CNG price hiked again, 8th rise in 2026
ಸಾಂದರ್ಭಿಕ ಚಿತ್ರ
Updated on: 

ಮುಂಬೈ: ಪುಣೆಯ ನಂತರ, ಇದೀಗ ದೇಶದ ವಾಣಿಜ್ಯ ನಗರಿ ಮುಂಬೈ ಮತ್ತು ಮುಂಬೈ ಮಹಾನಗರ ಪ್ರದೇಶದಲ್ಲಿ(MMR) ಸಿಎನ್‌ಜಿ(CNG) ಮತ್ತಷ್ಟು ದುಬಾರಿಯಾಗಿದೆ.

ಮುಂಬೈನಲ್ಲಿ ಸಿಎನ್‌ಜಿ ಚಾಲಿತ ವಾಹನಗಳನ್ನು ಬಳಸುವವರು ಇನ್ನು ಮುಂದೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಶನಿವಾರ ಮಹಾನಗರ ಗ್ಯಾಸ್ ಲಿಮಿಟೆಡ್(MGL) ಸಿಎನ್‌ಜಿ ದರವನ್ನು ಪ್ರತಿ ಕೆಜಿಗೆ 1.50 ರೂಪಾಯಿ ಹೆಚ್ಚಿಸಿದೆ.

ಈ ಹೊಸ ದರಗಳು ಇಂದಿನಿಂದ, ಅಂದರೆ ಭಾನುವಾರ, ನವೆಂಬರ್ 15 ರಿಂದ ಜಾರಿಗೆ ಬರಲಿವೆ.

Mumbai CNG price hiked again, 8th rise in 2026
'ಶೀಘ್ರದಲ್ಲೇ, ಬಾಹ್ಯಾಕಾಶದಿಂದಲೇ ನೇರವಾಗಿ ನಿಮ್ಮ ಮನೆಗೆ ವಿದ್ಯುತ್': ಆಂಧ್ರ CM ಚಂದ್ರಬಾಬು ನಾಯ್ಡು ಭರವಸೆ

ಮುಂಬೈ ಮಹಾನಗರ ಪ್ರದೇಶ (MMR) ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಎನ್‌ಜಿ ದರವು ಪ್ರತಿ ಕೆಜಿಗೆ 91.50 ರೂಪಾಯಿಗೆ ಏರಿಕೆಯಾಗಿದೆ.

ಈ ವರ್ಷದ ಜನವರಿಯಲ್ಲಿ, ಸಿಎನ್‌ಜಿ ದರವು ಪ್ರತಿ ಕೆಜಿಗೆ 80.50 ರೂಪಾಯಿ ಇತ್ತು. ಈ ಹೆಚ್ಚಳದೊಂದಿಗೆ, ಒಟ್ಟು ಏರಿಕೆಯು ಪ್ರತಿ ಕೆಜಿಗೆ 11 ರೂಪಾಯಿ ಆಗಿದ್ದು, ಕಳೆದ 11 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಸಿಎನ್‌ಜಿ ಬೆಲೆಯನ್ನು 8 ಬಾರಿ ಹೆಚ್ಚಿಸಲಾಗಿದೆ. ಇದರೊಂದಿಗೆ ಸುಮಾರು ಶೇ. 14 ರಷ್ಟು ದುಬಾರಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X