'ಅಕ್ವಾನ್' ಚಂಡಮಾರುತ: ಒಡಿಶಾದಲ್ಲಿ 1.2 ಲಕ್ಷ ಜನರನ್ನು ಸ್ಥಳಾಂತರ, 69 ರೈಲು ಸೇವೆ ರದ್ದು

ಚಂಡಮಾರುತ ಆಶ್ರಯ ತಾಣಗಳಲ್ಲಿ ಬೇಯಿಸಿದ ಆಹಾರ, ಒಣ ಆಹಾರ, ಅಗತ್ಯ ಔಷಧಗಳು, ಕುಡಿಯುವ ನೀರು, ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಮತ್ತು ಇತರ ಸೌಲಭ್ಯಗಳನ್ನು ಒದಗಿಸಲು ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಗಾರ್ಗ್ ತಿಳಿಸಿದ್ದಾರೆ.
A mahout walks his camel along the beach along a coast in the wake of Cyclone Akvan, in Puri, Odisha.
ಪುರಿಯಲ್ಲಿರುವ ಕಡಲ ತೀರonline desk
Updated on: 

ಭುವನೇಶ್ವರ್: ಶುಕ್ರವಾರ ಮಧ್ಯಾಹ್ನದ ವೇಳೆಗೆ ಗೋಪಾಲ್‌ಪುರ ಸಮೀಪ, ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಯನ್ನು ದಾಟುವ ನಿರೀಕ್ಷೆಯಿರುವ 'ಅಕ್ವಾನ್' (Akvan) ಎಂಬ ತೀವ್ರ ಚಂಡಮಾರುತದ ಹಿನ್ನೆಲೆಯಲ್ಲಿ, ಒಡಿಶಾ ಸರ್ಕಾರ ಸಿದ್ಧತೆಗಳನ್ನು ತೀವ್ರಗೊಳಿಸಿದೆ.

ಈ ಕ್ರಮದ ಭಾಗವಾಗಿ, ಅಪಾಯಕ್ಕೊಳಗಾಗಬಹುದಾದ ಪ್ರದೇಶಗಳಿಂದ 1.20 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು 300ಕ್ಕೂ ಹೆಚ್ಚು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ಗುರುವಾರ ಸಂಜೆ ನೀಡಿದ ಇತ್ತೀಚಿನ ಮಾಹಿತಿಯ ಪ್ರಕಾರ, 'ಅಕ್ವಾನ್' ಚಂಡಮಾರುತ, ಗಂಟೆಗೆ 13 ಕಿ.ಮೀ ವೇಗದಲ್ಲಿ ಉತ್ತರದ ಕಡೆಗೆ ಚಲಿಸುತ್ತಿದೆ. ಸಂಜೆ 5.30ರ ವೇಳೆಗೆ ಇದು ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ, ಅಕ್ಷಾಂಶ 16.1° ಉತ್ತರ ಮತ್ತು ರೇಖಾಂಶ 85.2° ಪೂರ್ವದ ಸಮೀಪ ಕೇಂದ್ರೀಕೃತವಾಗಿತ್ತು. ಇದು ಗೋಪಾಲ್‌ಪುರದಿಂದ ದಕ್ಷಿಣಕ್ಕೆ ಸುಮಾರು 350 ಕಿ.ಮೀ, ಪುರಿಯಿಂದ ದಕ್ಷಿಣಕ್ಕೆ 420 ಕಿ.ಮೀ, ಆಂಧ್ರಪ್ರದೇಶದ ನರಸಾಪುರದಿಂದ ಪೂರ್ವಕ್ಕೆ 380 ಕಿ.ಮೀ ಮತ್ತು ಕಳಿಂಗಪಟ್ಟಣದಿಂದ ದಕ್ಷಿಣ-ಆಗ್ನೇಯಕ್ಕೆ 270 ಕಿ.ಮೀ ದೂರದಲ್ಲಿತ್ತು.

ಈ ಚಂಡಮಾರುತ ಉತ್ತರ-ವಾಯುವ್ಯ ದಿಕ್ಕಿನತ್ತ ಚಲಿಸಿ, ನವೆಂಬರ್ 20ರ ಮಧ್ಯಾಹ್ನದ ವೇಳೆಗೆ ಗೋಪಾಲ್‌ಪುರ ಸಮೀಪ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ಈ ವೇಳೆ ಗಾಳಿಯ ವೇಗವು ಗಂಟೆಗೆ 90-100 ಕಿ.ಮೀ ಇರಲಿದ್ದು, ಬಿರುಗಾಳಿಯ ರಭಸವು ಗಂಟೆಗೆ 110 ಕಿ.ಮೀ ತಲುಪಬಹುದು ಎಂದು IMD ತಿಳಿಸಿದೆ.

ಒಡಿಶಾ ಸರ್ಕಾರ ಚಂಡಮಾರುತದಿಂದ ಬಾಧಿತವಾಗಬಹುದಾದ ಜಿಲ್ಲೆಗಳಲ್ಲಿ 9,299 ಆಶ್ರಯ ತಾಣಗಳನ್ನು (cyclone shelters) ಸಿದ್ಧಪಡಿಸಿದೆ. ಆರಂಭದಲ್ಲಿ ಈ ಚಂಡಮಾರುತವು ಆಂಧ್ರಪ್ರದೇಶ ಕರಾವಳಿಯನ್ನು ದಾಟಲಿದೆ ಎಂದು ಮುನ್ಸೂಚನೆ ನೀಡಲಾಗಿತ್ತು, ಆದರೆ ಕಳೆದ 24 ಗಂಟೆಗಳಲ್ಲಿ ಇದರ ಸಂಭಾವ್ಯ ಪಥವು ಒಡಿಶಾದ ಕಡೆಗೆ ಬದಲಾಗಿದೆ.

ಮುಖ್ಯ ಕಾರ್ಯದರ್ಶಿ ಅನು ಗಾರ್ಗ್ ಅವರು ಮಾಹಿತಿ ನೀಡಿದಂತೆ, ಗಂಜಾಂ ಜಿಲ್ಲೆಯಿಂದ 45,364 ಜನರನ್ನು ಮತ್ತು ಗಜಪತಿ ಜಿಲ್ಲೆಯಿಂದ 18,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸರ್ಕಾರವು ಒಡಿಶಾ ವಿಪತ್ತು ತ್ವರಿತ ಪ್ರತಿಕ್ರಿಯೆ ಪಡೆಯ (ODRAF) 60 ತಂಡಗಳನ್ನು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ (NDRF) 14 ತಂಡಗಳನ್ನು ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ 131 ತಂಡಗಳನ್ನು ನಿಯೋಜಿಸಿದೆ. ಅಲ್ಲದೆ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ತಮ್ಮ ಹೆಲಿಕಾಪ್ಟರ್‌ಗಳು, ನೌಕೆಗಳು ಮತ್ತು ಇತರ ಅಗತ್ಯ ಸಂಪನ್ಮೂಲಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಭಾರತೀಯ ಕರಾವಳಿ ಕಾವಲು ಪಡೆಗೆ (Indian Coast Guard) ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಚಂಡಮಾರುತ ಆಶ್ರಯ ತಾಣಗಳಲ್ಲಿ ಬೇಯಿಸಿದ ಆಹಾರ, ಒಣ ಆಹಾರ, ಅಗತ್ಯ ಔಷಧಗಳು, ಕುಡಿಯುವ ನೀರು, ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಮತ್ತು ಇತರ ಸೌಲಭ್ಯಗಳನ್ನು ಒದಗಿಸಲು ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಗಾರ್ಗ್ ತಿಳಿಸಿದ್ದಾರೆ.

A mahout walks his camel along the beach along a coast in the wake of Cyclone Akvan, in Puri, Odisha.
ಅಕ್ವಾನ್ ಚಂಡಮಾರುತ: ಆಂಧ್ರಪ್ರದೇಶದ 80 ಮೀನುಗಾರರು ಒಡಿಶಾದ ಗಂಜಾಂನಲ್ಲಿ ಸಿಲುಕಿ ಆತಂಕ; ನವೆಂಬರ್ 21ರವರೆಗೆ ಎಚ್ಚರಿಕೆ!

ಆಂಧ್ರಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು, ಉತ್ತರ ಆಂಧ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ರೈತರಿಗೆ ಕೃಷಿ ಚಟುವಟಿಕೆಗಳ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸಲು ಹಾಗೂ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ (ಮೀನುಗಾರಿಕೆಗೆ ಹೋಗದಂತೆ) ಸಲಹೆ ನೀಡಿದೆ.

IMD ಯ ಮಳೆ ಮುನ್ಸೂಚನೆ ಪ್ರಕಾರ, 'ರೆಡ್ ಅಲರ್ಟ್' ಎಂದರೆ 24 ಗಂಟೆಗಳಲ್ಲಿ 20.44 ಸೆಂ.ಮೀ ಗಿಂತ ಹೆಚ್ಚು ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಎಂದರ್ಥ. 'ಆರೆಂಜ್ ಅಲರ್ಟ್' ಎಂದರೆ 11.56 ಸೆಂ.ಮೀ ನಿಂದ 20.44 ಸೆಂ.ಮೀ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಮತ್ತು 'ಯೆಲ್ಲೋ ಅಲರ್ಟ್' ಎಂದರೆ 6.45 ಸೆಂ.ಮೀ ನಿಂದ 11.55 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆಯನ್ನು ಸೂಚಿಸುತ್ತದೆ.

ರೈಲುಗಳು ರದ್ದು!

ಸಮೀಪಿಸುತ್ತಿರುವ ಚಂಡಮಾರುತ ರೈಲು ಸೇವೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಪೂರ್ವ ಕರಾವಳಿ ರೈಲ್ವೆ (East Coast Railway) 41 ರೈಲುಗಳನ್ನು ರದ್ದುಗೊಳಿಸಿದ್ದು, 29 ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಿದೆ. ಇತ್ತ, ಆಗ್ನೇಯ ರೈಲ್ವೆಯು (South Eastern Railway) ಕನಿಷ್ಠ 28 ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಿದೆ; ಇವುಗಳಲ್ಲಿ ಹೆಚ್ಚಿನ ಶುಕ್ರವಾರದಂದು ಪುರಿಗೆ ತೆರಳುವ ಅಥವಾ ಪುರಿಯ ಮೂಲಕ ಹಾದುಹೋಗುವ ರೈಲುಗಳಾಗಿವೆ.

ರದ್ದುಗೊಂಡ ರೈಲುಗಳಲ್ಲಿ ಭುವನೇಶ್ವರ-ವಿಶಾಖಪಟ್ಟಣಂ, ಹೌರಾ-ಪುರಿ ಮತ್ತು ಟಾಟಾನಗರ-ಬ್ರಹ್ಮಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳು ಹಾಗೂ ಪುರಿ-ಯಶವಂತಪುರ ಗರೀಬ್ ರಥ್ ಎಕ್ಸ್‌ಪ್ರೆಸ್ ಸೇರಿವೆ. ಹೌರಾ-ಪುರಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ನ್ನು ಕೂಡ ಶುಕ್ರವಾರದ ಮಟ್ಟಿಗೆ ರದ್ದುಗೊಳಿಸಲಾಗಿದೆ.

ಗೋಪಾಲಪುರ, ಪುರಿ, ಸತಾಪದ ಮತ್ತು ಚಿಲಿಕಾ ಸೇರಿದಂತೆ ಕರಾವಳಿ ಪ್ರದೇಶಗಳಿಗೆ ಪ್ರವಾಸಿಗರು ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಒಡಿಶಾದ ಕರಾವಳಿ ಮತ್ತು ದಕ್ಷಿಣ ಭಾಗಗಳಲ್ಲಿ ಬುಧವಾರ ರಾತ್ರಿಯಿಂದಲೇ ಸಾಧಾರಣ ಮಳೆಯಾಗುತ್ತಿದೆ. ಚಂಡಮಾರುತವು ಇನ್ನಷ್ಟು ಹತ್ತಿರಕ್ಕೆ ಬಂದಂತೆ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭುವನೇಶ್ವರ ಹವಾಮಾನ ಕೇಂದ್ರದ ನಿರ್ದೇಶಕಿ ಮನೋರಮಾ ಮೊಹಂತಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X