Veg ಬರ್ಗರ್ ಬದಲು Non-Veg ಬರ್ಗರ್ ಡೆಲಿವರಿ ಮಾಡಿದ Swiggy: Burger Kingಗೆ ₹72,000 ದಂಡ!

ಸಸ್ಯಾಹಾರಿ ಬರ್ಗರ್ ಬದಲಿಗೆ ಮಾಂಸಾಹಾರಿ ಬರ್ಗರ್ ವಿತರಿಸಿದ ಪ್ರಕರಣದಲ್ಲಿ, ಬರ್ಗರ್ ಕಿಂಗ್ ಇಂಡಿಯಾ ಮತ್ತು ಸ್ವಿಗ್ಗಿ ಸಂಸ್ಥೆಗಳಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಒಟ್ಟು ₹72,000 ದಂಡ ಮತ್ತು ಪರಿಹಾರ ಪಾವತಿಸುವಂತೆ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:
Burger King and Swiggy Fined Rs 72,000 for Delivering Non-Veg Burger Instead of Veg in Gurugram
ಸಸ್ಯಾಹಾರಿ ಬರ್ಗರ್ ಬದಲು ಮಾಂಸಾಹಾರಿ ಡೆಲಿವರಿ ಮಾಡಿದ ಬರ್ಗರ್ ಕಿಂಗ್, ಸ್ವಿಗ್ಗಿAI Image
Updated on: 

ಗುರುಗ್ರಾಮ (ಹರಿಯಾಣ): ಸಸ್ಯಾಹಾರಿ ಬರ್ಗರ್ ಬದಲಿಗೆ ಮಾಂಸಾಹಾರಿ ಬರ್ಗರ್ ಡೆಲಿವರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬರ್ಗರ್ ಕಿಂಗ್ ಇಂಡಿಯಾ ಮತ್ತು ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿಗೆ ಗುರುಗ್ರಾಮ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಒಟ್ಟು ₹72,000 ದಂಡ ಮತ್ತು ಪರಿಹಾರ ಪಾವತಿಸುವಂತೆ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಏಪ್ರಿಲ್ 2, 2021 ರಂದು ಗುರುಗ್ರಾಮದ ಸೆಕ್ಟರ್ 46ರ ನಿವಾಸಿ ಭಗವಾನ್ ದಾಸ್ ಮಂಗ್ಲಾ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಪತ್ನಿಗಾಗಿ ಸ್ವಿಗ್ಗಿ ಆಪ್ ಮೂಲಕ ಬರ್ಗರ್ ಕಿಂಗ್‌ನಿಂದ ನಾಲ್ಕು ಸಸ್ಯಾಹಾರಿ ಬರ್ಗರ್‌ಗಳನ್ನು ಆರ್ಡರ್ ಮಾಡಿದ್ದರು. ಪತ್ನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಪ್ಯಾಕೆಟ್ ತೆರೆಯದೆ ಹಾಗೆಯೇ ಇಟ್ಟಿದ್ದರು. ನಂತರ ಮಕ್ಕಳು ಆ ಪ್ಯಾಕೆಟ್ ತೆರೆದು ಬರ್ಗರ್ ಸೇವಿಸಿದ್ದು, ರುಚಿಯಲ್ಲಿ ವ್ಯತ್ಯಾಸ ಕಂಡುಬಂದು ವಾಂತಿ ಮತ್ತು ವಾಕರಿಕೆಯಿಂದ ಅಸ್ವಸ್ಥಗೊಂಡಿದ್ದರು. ಇನ್ನು, ಸಂಜೆ ಮನೆಗೆ ಬಂದು ಪರಿಶೀಲಿಸಿದಾಗ ಅವು ಮಾಂಸಾಹಾರಿ ಬರ್ಗರ್‌ಗಳು ಎಂಬುದು ತಿಳಿದುಬಂದಿದೆ. ಶುದ್ಧ ಸಸ್ಯಾಹಾರಿ ಕುಟುಂಬದ ಧಾರ್ಮಿಕ ಭಾವನೆಗಳಿಗೆ ಇದರಿಂದ ತೀವ್ರ ಧಕ್ಕೆಯಾಗಿದ್ದು, ಮಾನಸಿಕ ಯಾತನೆ ಉಂಟಾಗಿದೆ ಎಂದು ಮಂಗ್ಲಾ ದೂರು ನೀಡಿದ್ದರು.

Burger King and Swiggy Fined Rs 72,000 for Delivering Non-Veg Burger Instead of Veg in Gurugram
1 ರೂಪಾಯಿ ಉಳಿಸಲು ಹೋಗಿ 3,09,900% ದಂಡ ಕಟ್ಟಿದ IRCTC: ಪ್ರತಿಯೊಂದು ರೂಪಾಯಿಯೂ ಮುಖ್ಯ ಎಂದು ಪಾಠ ಮಾಡಿದ ನ್ಯಾಯಾಲಯ

ತೀರ್ಥಯಾತ್ರೆಯ ಆಫರ್ ತಿರಸ್ಕಾರ

ದೂರು ದಾಖಲಾದ ಬಳಿಕ ಬರ್ಗರ್ ಕಿಂಗ್ ಪ್ರತಿನಿಧಿಯೊಬ್ಬರು ತಪ್ಪನ್ನು ಒಪ್ಪಿಕೊಂಡು, ನ್ಯಾಯಾಲಯದ ಹೊರಗೆ ರಾಜಿ ಮಾಡಿಕೊಳ್ಳಲು ₹25,000 ಪರಿಹಾರ ಮತ್ತು ಕುಟುಂಬದ ಆಯ್ಕೆಯ ಒಂದು ಅಥವಾ ಎರಡು ತೀರ್ಥಯಾತ್ರಾ ಸ್ಥಳಗಳಿಗೆ ಪ್ರವಾಸದ ವ್ಯವಸ್ಥೆ ಮಾಡುವುದಾಗಿ ಆಫರ್ ನೀಡಿದ್ದರು. ಆದರೆ, ಇದನ್ನು ತಿರಸ್ಕರಿಸಿದ ಮಂಗ್ಲಾ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಅದರಂತೆ, ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಸಂಜೀವ್ ಜಿಂದಾಲ್ ಹಾಗೂ ಸದಸ್ಯರಾದ ಜ್ಯೋತಿ ಸಿವಾಚ್ ಮತ್ತು ಖುಶ್ವಿಂದರ್ ಕೌರ್ ಅವರನ್ನೊಳಗೊಂಡ ಪೀಠವು, ಎರಡೂ ಕಂಪನಿಗಳ ಸೇವಾ ನ್ಯೂನತೆಯ ಕಾರಣದಿಂದ, ಮಾನಸಿಕ ಹಿಂಸೆ ಮತ್ತು ಯಾತನೆಗಾಗಿ ₹50,000 ಹಾಗೂ ಕಾನೂನು ವೆಚ್ಚಕ್ಕಾಗಿ ₹22,000 ಸೇರಿದಂತೆ ಒಟ್ಟು ₹72,000 ಪಾವತಿಸಲು ಆದೇಶಿಸಿದ್ದು, 45 ದಿನಗಳೊಳಗೆ ಈ ಮೊತ್ತ ಪಾವತಿಸದಿದ್ದರೆ ವಾರ್ಷಿಕ ಶೇ. 12ರ ಬಡ್ಡಿಯೊಂದಿಗೆ ನೀಡಬೇಕೆಂದು ನ್ಯಾಯಾಲಯ ಎಚ್ಚರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X