ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನವನ್ನು ಎದುರಿಸಲು ಭಾರತವೇ ಸಂಕಷ್ಟಕ್ಕೆ ಸಿಲುಕಿತು ಎಂದ ಹಿಮಾಚಲ ಸಚಿವ: ಜಗತ್ ಸಿಂಗ್ ನೇಗಿ ವಿರುದ್ದ ಬಿಜೆಪಿ ಆಕ್ರೋಶ

ಹಿಮಾಚಲ ಪ್ರದೇಶದ ವಿಧಾನಸಭೆಯ ಅಧಿವೇಶನದಲ್ಲಿ ಕಂದಾಯ ಸಚಿವ ಜಗತ್ ಸಿಂಗ್ ನೇಗಿ ಅವರು 'ಆಪರೇಷನ್ ಸಿಂಧೂರ್' ಮತ್ತು ರಫೇಲ್ ಯುದ್ಧ ವಿಮಾನಗಳ ಸಾಮರ್ಥ್ಯದ ಕುರಿತು ನೀಡಿದ ಹೇಳಿಕೆಯು ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:
Row Over Himachal Minister Jagat Singh Negi's Remarks on Rafale Jets and Operation Sindoor
ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನವನ್ನು ಎದುರಿಸಲು ಭಾರತವೇ ಸಂಕಷ್ಟಕ್ಕೆ ಸಿಲುಕಿತು ಎಂದ ಹಿಮಾಚಲ ಸಚಿವ ಜಗತ್ ಸಿಂಗ್ ನೇಗಿOnline Desk
Updated on: 

ಧರ್ಮಶಾಲಾ (ಹಿಮಾಚಲ ಪ್ರದೇಶ): ರಫೇಲ್ ಯುದ್ಧವಿಮಾನ ಖರೀದಿ ಮತ್ತು ಆಪರೇಷನ್ ಸಿಂಧೂರ್ ಕುರಿತಾದ ಹಿಮಾಚಲ ಪ್ರದೇಶದ ಸಚಿವ ಜಗತ್ ಸಿಂಗ್ ನೇಗಿ ಅವರ ಹೇಳಿಕೆಗಳು ಈಗ ದೊಡ್ಡ ರಾಜಕೀಯ ವಿವಾದಕ್ಕೆ ನಾಂದಿ ಹಾಡಿವೆ. ಸೇನೆಯ ಶೌರ್ಯ ಮತ್ತು ರಕ್ಷಣಾ ಸಿದ್ಧತೆಗಳ ಬಗ್ಗೆ ಪ್ರಶ್ನೆ ಎತ್ತಿರುವ ಈ ಹೇಳಿಕೆಗಳ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಚಿವರ ಕ್ಷಮೆಯಾಚನೆಗೆ ಪಟ್ಟು ಹಿಡಿದಿದೆ. ಅಷ್ಟಕ್ಕೂ ಈ ವಿವಾದದ ಹಿಂದಿನ ಅಸಲಿ ಕಾರಣವೇನು? ಆ ಕುರಿತ ವರದಿ ಇಲ್ಲಿದೆ:

ಸಚಿವ ಜಗತ್ ಸಿಂಗ್ ನೇಗಿ ಹೇಳಿದ್ದೇನು?

ವಿಧಾನಸಭೆಯಲ್ಲಿ ಭ್ರಷ್ಟಾಚಾರದ ಕುರಿತ ನಿಲುವಳಿ ಸೂಚನೆ ಚರ್ಚೆಯ ವೇಳೆ ಮಾತನಾಡಿದ ನೇಗಿ, ದೇಶಕ್ಕೆ ಅತ್ಯಂತ ದೊಡ್ಡ ಅಪಾಯ ಭ್ರಷ್ಟಾಚಾರದಿಂದಿದೆ ಎಂದು ಹೇಳುತ್ತಾ ರಫೇಲ್ ಯುದ್ಧ ವಿಮಾನಗಳ ಒಪ್ಪಂದವನ್ನು ಪ್ರಸ್ತಾಪಿಸಿದರು. ಮೂಲತಃ ₹700 ಕೋಟಿಗೆ ಖರೀದಿಸಲು ಉದ್ದೇಶಿಸಲಾಗಿದ್ದ 36 ರಫೇಲ್ ವಿಮಾನಗಳನ್ನು ₹2,300 ಕೋಟಿ ನೀಡಿ ಖರೀದಿಸಲಾಗಿದೆ; ಅವುಗಳನ್ನು ಚಿನ್ನ ಅಥವಾ ಬೆಳ್ಳಿಯಿಂದ ಮಾಡಲಾಗಿದೆಯೇ ಎಂದು ಅವರು ವ್ಯಂಗ್ಯವಾಗಿ ಪ್ರಶ್ನಿಸಿದರು. ಜೊತೆಗೆ, "ಆ ವಿಮಾನಗಳು ನಿಷ್ಪ್ರಯೋಜಕವೆಂದು ಸಾಬೀತಾದವು. ಇದರ ಪರಿಣಾಮವಾಗಿ ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನವನ್ನು ಎದುರಿಸಲು ಭಾರತಕ್ಕೆ ಕಠಿಣ ಸಮಯ ಎದುರಾಯಿತು (ಭಾರತ್ ಕೆ ಛಕ್ಕೆ ಛೂಟ್ ಗಯೇ)" ಎಂದು ನೇಗಿ ಹೇಳಿದ್ದರು.

ಬಿಜೆಪಿಯ ತೀವ್ರ ಆಕ್ರೋಶ

ಸಚಿವರ ಈ ಹೇಳಿಕೆಯು ಭಾರತೀಯ ಸಶಸ್ತ್ರ ಪಡೆಗಳಿಗೆ ಮಾಡಿದ ಅವಮಾನ ಮತ್ತು ಪಾಕಿಸ್ತಾನದ ಭಾಷೆಯಂತಿದೆ ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಸೇರಿದಂತೆ ಬಿಜೆಪಿ ಶಾಸಕರು ತೀವ್ರವಾಗಿ ಖಂಡಿಸಿದರು. ಸದನದಲ್ಲಿ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದ ಬಿಜೆಪಿ, ಸಚಿವರು ಬೇಷರತ್ ಕ್ಷಮೆಯಾಚಿಸಬೇಕು ಮತ್ತು ಈ ಹೇಳಿಕೆಯನ್ನು ಸದನದ ಕಡತದಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿತು. ಆದರೆ, ಬಿಜೆಪಿಯ ಪ್ರತಿಭಟನೆ ಮತ್ತು ಕ್ಷಮೆಯಾಚನೆಯ ಬೇಡಿಕೆಗೆ ಮಣಿಯದ ಜಗತ್ ಸಿಂಗ್ ನೇಗಿ, ರಫೇಲ್ ಕಾರ್ಯಕ್ಷಮತೆ ಕುರಿತ ತಮ್ಮ ಹೇಳಿಕೆಗೆ ಬದ್ಧವಾಗಿರುವುದಾಗಿ ತಿಳಿಸಿ ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ.

Row Over Himachal Minister Jagat Singh Negi's Remarks on Rafale Jets and Operation Sindoor
ಭೂಗತಪಾತಕಿ ದಾವೋದ್ ಇಬ್ರಾಹಿಂ ಆಡಿ ಬೆಳೆದಿದ್ದ ಮುಂಬೈ ನಿವಾಸ ಧ್ವಂಸ!

ಏತನ್ಮಧ್ಯೆ, ವಿರೋಧ ಪಕ್ಷಗಳ ತೀವ್ರ ಒತ್ತಡದ ನಂತರ, ವಿಧಾನಸಭಾಧ್ಯಕ್ಷ ಕುಲದೀಪ್ ಸಿಂಗ್ ಪಠಾನಿಯಾ ಅವರು ಸೇನೆ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ನೇಗಿ ಅವರ ವಿವಾದಾತ್ಮಕ ಹೇಳಿಕೆಗಳನ್ನು ಸದನದ ಕಡತದಿಂದ ತೆಗೆದುಹಾಕಲು ಆದೇಶಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X