ಶುರುವಾಯಿತು ಮದುವೆ ಸೀಸನ್: ಮುಂದಿನ 25 ದಿನಗಳಲ್ಲಿ 52 ಲಕ್ಷ ಮದುವೆ! ಭಾರತದಲ್ಲಿ 7.5 ಲಕ್ಷ ಕೋಟಿ ರೂಪಾಯಿ ವಹಿವಾಟಿನ ನಿರೀಕ್ಷೆ ವ್ಯಕ್ತಪಡಿಸಿದ CAIT

ಮುಂದಿನ 25 ದಿನಗಳ ವಿವಾಹ ಋತುವಿನಲ್ಲಿ ದೇಶಾದ್ಯಂತ ಸುಮಾರು 52 ಲಕ್ಷ ಮದುವೆಗಳು ನಡೆಯಲಿದ್ದು, ಇದರಿಂದ ಬರೋಬ್ಬರಿ ₹7.5 ಲಕ್ಷ ಕೋಟಿ ವಹಿವಾಟು ನಡೆಯುವ ನಿರೀಕ್ಷೆಯಿದೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟ ಅಂದಾಜಿಸಿದೆ. ಆ ಕುರಿತ ವರದಿ ಇಲ್ಲಿದೆ:
Wedding Season Begins in India: Lakhs of Weddings in Just 25 Days, Crores of Rupees in Business Expected
25 ದಿನಗಳ ಮದುವೆ ಸೀಸನ್ ನಿಂದ ಮಾರುಕಟ್ಟೆಗೆ ಭರ್ಜರಿ ಲಾಭ, ಆಭರಣ ಬಟ್ಟೆ ಅಡುಗೆ ವ್ಯಾಪಾರಕ್ಕೆ ಬೇಡಿಕೆAI Image
Updated on: 

ನವದೆಹಲಿ: ಭಾರತದಲ್ಲಿ ಮದುವೆ ಸೀಸನ್ ಶುರುವಾದ ಬೆನ್ನಲ್ಲೇ ವ್ಯಾಪಾರ ವಲಯದಲ್ಲಿ ಭಾರಿ ಸಂಚಲನ ಮೂಡಿದೆ. ಅದರಲ್ಲೂ, ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (CAIT) ಸಮೀಕ್ಷೆಯ ಪ್ರಕಾರ, ನವೆಂಬರ್ 21 ರಿಂದ ಡಿಸೆಂಬರ್ 15, 2026 ರವರೆಗಿನ 25 ದಿನಗಳ ಮದುವೆ ಸೀಸನ್‌ನಲ್ಲಿ ಭಾರತದಾದ್ಯಂತ ಸುಮಾರು 52 ಲಕ್ಷ ವಿವಾಹಗಳು ನಡೆಯಲಿದ್ದು, ಬರೋಬ್ಬರಿ ₹7.5 ಲಕ್ಷ ಕೋಟಿ ವಹಿವಾಟು ನಡೆಯುವ ನಿರೀಕ್ಷೆಯಿದೆ. ಅಂದರೆ ಪ್ರತಿದಿನ ಸರಾಸರಿ 2 ಲಕ್ಷಕ್ಕೂ ಹೆಚ್ಚು ಮದುವೆಗಳು ಜರುಗಲಿವೆ. ಇದರಿಂದ ಆಭರಣ, ಬಟ್ಟೆ, ಅಡುಗೆ ಮತ್ತು ಇತರ ಸೇವೆಗಳ ಖರೀದಿಯಿಂದ ಮಾರುಕಟ್ಟೆ ಹೇಗೆ ಕಳೆಗಟ್ಟಲಿದೆ ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ:

ದಿನಕ್ಕೆ 2 ಲಕ್ಷಕ್ಕೂ ಹೆಚ್ಚು ಮದುವೆ!

ದೇಶದ 25 ರಾಜ್ಯಗಳ 300ಕ್ಕೂ ಹೆಚ್ಚು ಪ್ರಮುಖ ವ್ಯಾಪಾರಿಗಳು ಮತ್ತು 550 ವ್ಯಾಪಾರ ಸಂಘಗಳ ಸಮೀಕ್ಷೆಯ ಆಧಾರದ ಮೇಲೆ ಸಿಎಐಟಿ ವರದಿ ಸಿದ್ದಪಡಿಸಿದೆ. ಅದರಂತೆ, ಈ 25 ದಿನಗಳ ಅವಧಿಯಲ್ಲಿ ಪ್ರತಿದಿನ ಸರಾಸರಿ 2 ಲಕ್ಷಕ್ಕೂ ಅಧಿಕ ವಿವಾಹಗಳು ನಡೆಯಲಿದ್ದು, ಒಟ್ಟು ವಹಿವಾಟಿನಲ್ಲಿ ಸರಕು ಮತ್ತು ಚಿಲ್ಲರೆ ಖರೀದಿಗೆ ₹4.05 ಲಕ್ಷ ಕೋಟಿ ಹಾಗೂ ವಿವಿಧ ಸೇವೆಗಳಿಗೆ ₹3.45 ಲಕ್ಷ ಕೋಟಿ ವೆಚ್ಚವಾಗುತ್ತದೆ. ಅದರಲ್ಲೂ, ಮದುವೆ ಸಮಾರಂಭಗಳ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸುಮಾರು 1.25 ಕೋಟಿ ತಾತ್ಕಾಲಿಕ ಮತ್ತು ಋತುಮಾನದ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎನ್ನಲಾಗಿದೆ.

ಮುಂದುವರೆದು, ಆಭರಣ ಮತ್ತು ಬೆಲೆಬಾಳುವ ಲೋಹಗಳ ಖರೀದಿಯಿಂದಲೇ ಅಂದಾಜು ₹1.2 ಲಕ್ಷ ಕೋಟಿ, ಉಡುಪು ಮತ್ತು ವಸ್ತ್ರೋದ್ಯಮದಿಂದ ₹90,000 ಕೋಟಿ, ಕ್ಯಾಟರಿಂಗ್ (ಆಹಾರ) ಸೇವೆಗಳಿಂದ ₹75,000 ಕೋಟಿ ಹಾಗೂ ಹೋಟೆಲ್ ಮತ್ತು ಕಲ್ಯಾಣ ಮಂಟಪಗಳಿಂದ ₹60,000 ಕೋಟಿ ವಹಿವಾಟು ನಡೆಯುವ ಅಂದಾಜಿದೆ.

Wedding Season Begins in India: Lakhs of Weddings in Just 25 Days, Crores of Rupees in Business Expected
ಚಿನ್ನದ ದರದಲ್ಲಿ ಭಾರಿ ಕುಸಿತ: ಒಂದೇ ದಿನ 5,120 ರೂ ಇಳಿಕೆ! ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ಈಗ ಎಷ್ಟಿದೆ ಗೊತ್ತಾ?

ಅದರಲ್ಲೂ, ರಾಷ್ಟ್ರ ದೇಶದ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶವೊಂದರಲ್ಲೇ ಸುಮಾರು 5 ಲಕ್ಷ ಮದುವೆಗಳು ನಡೆಯಲಿದ್ದು, ಅಂದಾಜು ₹2.5 ಲಕ್ಷ ಕೋಟಿ ವಹಿವಾಟು ನಿರೀಕ್ಷಿಸಲಾಗಿದೆ. ಅದರಲ್ಲೂ, ದೇಶದ ಮದುವೆ ಮಾರುಕಟ್ಟೆ ಪ್ರತಿ ವರ್ಷ ವೇಗವಾಗಿ ಬೆಳೆಯುತ್ತಿದ್ದು, 2022ರಲ್ಲಿ ₹3.75 ಲಕ್ಷ ಕೋಟಿ, 2023ರಲ್ಲಿ ₹4.74 ಲಕ್ಷ ಕೋಟಿ, 2024ರಲ್ಲಿ ₹5.90 ಲಕ್ಷ ಕೋಟಿ ಹಾಗೂ 2025ರಲ್ಲಿ ₹6.50 ಲಕ್ಷ ಕೋಟಿಯಷ್ಟಿದ್ದ ವಹಿವಾಟು, ಈ ಬಾರಿ ₹7.5 ಲಕ್ಷ ಕೋಟಿಯ ಗಡಿ ತಲುಪುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X