Gokul | ಗ್ರಾಹಕರಿಗೆ ಮತ್ತೆ ಬರೆ: ಹಾಲಿನ ದರ 4 ರಿಂದ 6 ರೂ ಏರಿಕೆ, ಇಲ್ಲಿದೆ ವಿವರ!

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಗೋಕುಲ್) ಹಾಲಿನ ದರದಲ್ಲಿ 4 ರಿಂದ 6 ರೂ ಏರಿಕೆ ಮಾಡಿದ್ದು, ಎಮ್ಮೆ ಹಾಲಿನ ಮಾರಾಟ ದರವನ್ನು ಲೀಟರ್‌ಗೆ ₹6 ಹಾಗೂ ಹಸುವಿನ ಹಾಲಿನ ದರವನ್ನು ₹4 ಹೆಚ್ಚಿಸಲು ನಿರ್ಧರಿಸಿದೆ.
Gokul hikes milk price
ಗೋಕುಲ್ ಹಾಲಿನ ದರ ಏರಿಕೆ
Updated on: 

ಕೊಲ್ಲಾಪುರ: ಈಗಾಗಲೇ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ಹೈರಾಣಾಗಿರುವ ಗ್ರಾಹಕರಿಗೆ ಮತ್ತೆ ದರ ಏರಿಕೆ ಶಾಕ್ ನೀಡಿದ್ದು, ಹಾಲಿನ ದರದಲ್ಲಿ 4 ರಿಂದ 6 ರೂ ಏರಿಕೆಯಾಗಿದೆ.

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಗೋಕೂಲ್) ಹಾಲಿನ ದರದಲ್ಲಿ 4 ರಿಂದ 6 ರೂ ಏರಿಕೆ ಮಾಡಿದ್ದು, ಎಮ್ಮೆ ಹಾಲಿನ ಮಾರಾಟ ದರವನ್ನು ಲೀಟರ್‌ಗೆ ₹6 ಹಾಗೂ ಹಸುವಿನ ಹಾಲಿನ ದರವನ್ನು ₹4 ಹೆಚ್ಚಿಸಲು ನಿರ್ಧರಿಸಿದೆ.

ನವೆಂಬರ್ 21ರಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ ಎಂದು ಒಕ್ಕೂಟದ ಅಧ್ಯಕ್ಷ ರಾಜೇಶ್ ಪಾಟೀಲ್ ಶನಿವಾರ ತಿಳಿಸಿದ್ದಾರೆ.

ಬರ ಪರಿಸ್ಥಿತಿ ಹಾಗೂ ಹಾಲು ಉತ್ಪಾದಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಒಕ್ಕೂಟದ 25 ನಿರ್ದೇಶಕರು ಸರ್ವಾನುಮತದಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

Gokul hikes milk price
ನಿತೀಶ್ ಸೇತು ಬಳಿ RJD ಪುಂಡಾಟಿಕೆ; ಬಿಹಾರ ಸಿಎಂ, ಪ್ರಧಾನಿ ಬ್ಯಾನರ್ ಹರಿದು ಗದ್ದಲ: ಅಸಹಾಯಕರಾಗಿ ನೋಡುತ್ತಾ ನಿಂತ ಪೊಲೀಸರು

ಹಾಲು ಉತ್ಪಾದಕರಿಗೂ ಖರೀದಿ ದರ ಹೆಚ್ಚಳ

ಹಾಲು ಮಾರಾಟದ ದರ ಹೆಚ್ಚಿಸುವುದರ ಜೊತೆಗೆ ರೈತರಿಂದ ಖರೀದಿಸುವ ಹಾಲಿನ ದರವನ್ನೂ ಹೆಚ್ಚಿಸಲು ಒಕ್ಕೂಟ ನಿರ್ಧರಿಸಿದೆ. ಅದರಂತೆ ಎಮ್ಮೆ ಹಾಲಿನ ಖರೀದಿ ದರವನ್ನು ಲೀಟರ್‌ಗೆ ₹3 ಹಾಗೂ ಹಸುವಿನ ಹಾಲಿನ ಖರೀದಿ ದರವನ್ನು ₹2 ಹೆಚ್ಚಿಸಲಾಗಿದೆ.

ಈ ದರ ಏರಿಕೆ ಐತಿಹಾಸಿಕ ನಿರ್ಧಾರವಾಗಿದೆ ಎಂದು ರಾಜೇಶ್ ಪಾಟೀಲ್ ಹೇಳಿದ್ದಾರೆ. ನವೆಂಬರ್ 21ರಿಂದ ಜಾರಿಗೆ ಬಂದಿರುವ ಹೊಸ ದರಗಳು ಮಾರ್ಚ್‌ವರೆಗೆ, ಅಂದರೆ ಸುಮಾರು 131 ದಿನಗಳ ಕಾಲ ಅನ್ವಯವಾಗಲಿವೆ. ಪರಿಸ್ಥಿತಿಯನ್ನು ಪ್ರತಿ ತಿಂಗಳು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದಾದ್ಯಂತ, ವಿಶೇಷವಾಗಿ ಕೊಲ್ಲಾಪುರ ಜಿಲ್ಲೆಯಲ್ಲಿ ಹಾಲಿನ ಲಭ್ಯತೆ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯಿದೆ. ಹೀಗಾಗಿ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಖರೀದಿ ದರ ಹೆಚ್ಚಳಕ್ಕೆ ರೈತರ ಅಸಮಾಧಾನ

ಆದರೆ, ಗೋಕೂಲ್ ಒಕ್ಕೂಟದ ನಿರ್ಧಾರಕ್ಕೆ ಹಾಲು ಉತ್ಪಾದಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಶು ಆಹಾರ ಮತ್ತು ಮೇವಿನ ಬೆಲೆ ಹೆಚ್ಚಾಗಿರುವುದರಿಂದ ಒಕ್ಕೂಟ ನೀಡಿರುವ ಹೆಚ್ಚುವರಿ ಖರೀದಿ ದರ ಸಾಕಾಗುವುದಿಲ್ಲ ಎಂಬುದು ರೈತರ ವಾದವಾಗಿದೆ.

ಪ್ರಸ್ತುತ ಪಶು ಆಹಾರದ ಒಂದು ಚೀಲಕ್ಕೆ ₹2,100ರಿಂದ ₹2,200ರವರೆಗೆ ಬೆಲೆ ಇದೆ. ಒಂದು ಡೈರಿಗೆ ಪ್ರತಿದಿನ ಮೂರರಿಂದ ನಾಲ್ಕು ಚೀಲಗಳಷ್ಟು ಪಶು ಆಹಾರ ಬೇಕಾಗುತ್ತದೆ. ಐದು ಕಟ್ಟು ಮೇವಿಗೆ ₹20 ವೆಚ್ಚವಾಗುತ್ತದೆ ಎಂದು ರೈತರೊಬ್ಬರು ತಿಳಿಸಿದ್ದಾರೆ.

ರೈತರಿಗೆ ಪ್ರತಿ ಲೀಟರ್ ಹಾಲಿಗೆ ₹63 ನೀಡಲಾಗುತ್ತಿದ್ದು, ಅದೇ ಹಾಲನ್ನು ಗ್ರಾಹಕರಿಗೆ ₹78ಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ವ್ಯತ್ಯಾಸದ ಲಾಭ ರೈತರಿಗೆ ಏಕೆ ಸಿಗುತ್ತಿಲ್ಲ? ಹೆಚ್ಚುವರಿ ಹಣವನ್ನು ನೇರವಾಗಿ ರೈತರಿಗೆ ನೀಡಬೇಕಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.

ಮಳೆಯ ಕೊರತೆ ಮತ್ತು ಬರ ಪರಿಸ್ಥಿತಿಯಿಂದ ರೈತರ ಸಂಕಷ್ಟ ಹೆಚ್ಚಾಗಿದೆ. ಕೊಟ್ಟಿಗೆಗಳ ನಿರ್ವಹಣೆಯ ವೆಚ್ಚವೂ ಭರಿಸಲಾಗದ ಮಟ್ಟಕ್ಕೆ ಏರಿದೆ. ಹಾಲಿನ ದರ ಏರಿಕೆಯಿಂದ ಹೆಚ್ಚಿನ ಲಾಭ ಒಕ್ಕೂಟಕ್ಕೆ ಸಿಗುತ್ತಿದೆಯೇ ಹೊರತು ರೈತರಿಗೆ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Gokul hikes milk price
ಸೂಟ್ ಖರೀದಿಗೆ ಪತ್ನಿ 22 ಸಾವಿರ ಖರ್ಚು, ಪತ್ನಿ ಜೊತೆ ಕಿರಿಕ್; ಉಳಿತಾಯದ ಹಣವನ್ನೆಲ್ಲಾ ಸುಟ್ಟು ಹಾಕಿದ 'ಪತಿ ಮಹಾಶಯ'! Video

ಗೋಕೂಲ್ ಅಧ್ಯಕ್ಷರಾಗಿ ರಾಜೇಶ್ ಪಾಟೀಲ್ ಆಯ್ಕೆ

ಇತ್ತೀಚೆಗೆ ನಡೆದ ಗೋಕೂಲ್ ಹಾಲು ಒಕ್ಕೂಟದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಬೆಂಬಲಿತ ರಾಜೇಶ್ ಪಾಟೀಲ್ ಗೆಲುವು ಸಾಧಿಸಿದ್ದರು.

ತೀವ್ರ ಪೈಪೋಟಿಯಿಂದ ಕೂಡಿದ್ದ ಚುನಾವಣೆಯಲ್ಲಿ ಅವರು ಸಮ್ವಿಚಾರಿ ಆಘಾಡಿಯ ಶಶಿಕಾಂತ್ ಪಾಟೀಲ್-ಚುಯೇಕರ್ ಅವರನ್ನು 16-13 ಮತಗಳ ಅಂತರದಿಂದ ಸೋಲಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X