ಪಾರ್ಕ್‌ಗೆ ಭೇಟಿ ನೀಡಿದ್ದ ಜೋಡಿಗೆ ಥಳಿಸಿದ ಮುಸ್ಲಿಂ ಅಪ್ರಾಪ್ತರು; ಸ್ಥಳೀಯರ ಮುಂದೆ ಆರೋಪಿಗಳ ಪರೇಡ್, Video!

ಮುಂಬೈನ ಕುರ್ಲಾ ಪ್ರದೇಶದ ಪ್ರಮೋದ್ ಮಹಾಜನ್ ಗಾರ್ಡನ್‌ನಲ್ಲಿ ಯುವಕ ಮತ್ತು ಯುವತಿಯ ಮೇಲೆ ಮುಸ್ಲಿಂ ಅಪ್ರಾಪ್ತ ಯುವಕರು ಹಲ್ಲೆ ನಡೆಸಿದ್ದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವೀಡಿಯೊದಲ್ಲಿ ಕೆಲವು ಹುಡುಗರು ಜೋಡಿಗೆ ಸುತ್ತುವರೆದು ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದರು.
Mumbai Police
ಮುಂಬೈ ಪೊಲೀಸರು
Updated on: 

ಮುಂಬೈನ ಕುರ್ಲಾ ಪ್ರದೇಶದ ಪ್ರಮೋದ್ ಮಹಾಜನ್ ಗಾರ್ಡನ್‌ನಲ್ಲಿ ಯುವಕ ಮತ್ತು ಯುವತಿಯ ಮೇಲೆ ಮುಸ್ಲಿಂ ಅಪ್ರಾಪ್ತ ಯುವಕರು ಹಲ್ಲೆ ನಡೆಸಿದ್ದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವೀಡಿಯೊದಲ್ಲಿ ಕೆಲವು ಹುಡುಗರು ಜೋಡಿಗೆ ಸುತ್ತುವರೆದು ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದರು. ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಮುಂಬೈ ಪೊಲೀಸರು ಈ ಸಂಬಂಧ 8 ಅಪ್ರಾಪ್ತ ಹುಡುಗರನ್ನು ಬಂಧಿಸಲಾಗಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನವೆಂಬರ್ 19ರಂದು ಯುವಕ ಮತ್ತು ಯುವತಿ ಅಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದರು. ಏತನ್ಮಧ್ಯೆ, ಅಲ್ಲಿದ್ದ ಎಂಟರಿಂದ ಹತ್ತು ಮುಸ್ಲಿಂ ಹುಡುಗರು ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅಲ್ಲದೆ ಜೋಡಿಗೆ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದರು.

Mumbai Police
ಪಾರ್ಕ್‌ನಲ್ಲಿ ದಂಪತಿಗಳ ಮೇಲೆ ಹಲ್ಲೆ ನಡೆಸಿದ ಅಪ್ರಾಪ್ತ ಬಾಲಕರು; ಕ್ಯಾಮೆರಾ ಮುಂದೆಯೇ ಕೋಲಿನಿಂದ ಥಳಿತ!

ವಿಡಿಯೋ ವೈರಲ್ ಆದ ನಂತರ ಪೊಲೀಸರು ಈ ಸಂಬಂಧ ತನಿಖೆ ಕೈಗೊಂಡಿದ್ದು ಸಂತ್ರಸ್ತರನ್ನು ಸಂಪರ್ಕಿಸಿ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಎಂಟು ಅಪ್ರಾಪ್ತ ವಯಸ್ಕರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಗಣೇಶ್ ಶಿಂಧೆ ಹೇಳಿದ್ದಾರೆ. ಆರೋಪಿಗಳನ್ನು ಬಾಲ ನ್ಯಾಯ ಮಂಡಳಿಗೆ ಕಳುಹಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ ಕಾನೂನುಬಾಹಿರ ಸಭೆ, ನೋವುಂಟುಮಾಡುವುದು, ಉದ್ದೇಶಪೂರ್ವಕ ಅವಮಾನ ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ ಸೆಕ್ಷನ್‌ಗಳು ಸೇರಿವೆ. ದಾಳಿಯ ಹಿಂದೆ ಯಾವುದೇ ಹಿಂದಿನ ದ್ವೇಷವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X