ಕಲೆಗೆ ಯಾವುದೇ ಗಡಿಗಳಿಲ್ಲ ಆದರೆ, 'ಸಾರೆ ಜಹಾಂ ಸೆ ಅಚ್ಛಾ ಹಿಂದೂಸ್ತಾನ್ ಹಮಾರಾ': 'Jo Bachay Hain Sang Samait Lo'ಪ್ರಸಾರಕ್ಕೆ ಖುಷ್ಬೂ ವಿರೋಧ!

ನೆಟ್‌ಫ್ಲಿಕ್ಸ್‌ನ ಮುಂಬರುವ ಪಾಕಿಸ್ತಾನಿ ಸರಣಿ 'ಜೋ ಬಚೇ ಹೈಂ ಸಂಗ ಸಮೈತ್ ಲೋ' (Jo Bachay Hain Sang Samait Lo) ಇದೀಗ ತೀವ್ರ ವಿವಾದಕ್ಕೆ ಸಿಲುಕಿದೆ. ಭಾರತದಲ್ಲಿ ಪಾಕಿಸ್ತಾನಿ ಸರಣಿಯನ್ನು ಪ್ರಸಾರ ಮಾಡುವ ಕುರಿತು ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
'ಕಲೆಗೆ ಯಾವುದೇ ಗಡಿಗಳಿಲ್ಲ' ಎಂದು ತಾವು ನಂಬಿದ್ದರೂ, ಈ ನಿರ್ದಿಷ್ಟ ಸರಣಿಯ ಪ್ರಸಾರವನ್ನು ತಾವು ಏಕೆ ವಿರೋಧಿಸುತ್ತೇನೆ ಎಂಬುದನ್ನು ಅವರು ವಿವರಿಸಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, "ಕಲೆಗೆ ಯಾವುದೇ ಗಡಿಗಳಿಲ್ಲ ಮತ್ತು ಅದು ನದಿಯಂತೆ ಹರಿಯಬೇಕು, ತನ್ನದೇ ಆದ ಹಾದಿಯನ್ನು ಕಂಡುಕೊಳ್ಳಬೇಕು ಹಾಗೂ ಅನುಸರಿಸಲು ಒಂದು ದಾರಿಯನ್ನು ಬಿಟ್ಟುಹೋಗಬೇಕು ಎಂದು ನಾನು ಬಲವಾಗಿ ನಂಬುತ್ತೇನೆ.
ಆದರೆ, ಭಾರತದಲ್ಲಿ ಪಾಕಿಸ್ತಾನಿ ಸರಣಿಯನ್ನು ಪ್ರಸಾರ ಮಾಡುವುದು, ಭಾರತದಲ್ಲಿಯೇ ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿದಂತೆಯೇ ಆಗಿದೆ. ರಾಷ್ಟ್ರದ ಹಿತದೃಷ್ಟಿಯಿಂದ, ಈ ಎರಡು ದೇಶಗಳ ನಡುವಿನ ಕ್ರಿಕೆಟ್ ಪಂದ್ಯಗಳಿಗೆ ಭಾರತದಲ್ಲಿ ಅವಕಾಶವಿಲ್ಲದಿದ್ದಾಗ, ಈ ಸರಣಿಯನ್ನು ಕೂಡ ಪ್ರಸಾರ ಮಾಡಬಾರದು ಎಂದಿದ್ದಾರೆ.
ನಿರ್ಮಾಪಕರು ಮತ್ತು ನಟರಿಗೆ ಗೌರವ ಸಲ್ಲಿಸುತ್ತಲೇ ಹೇಳುವುದಾದರೆ, ಕ್ಷಮಿಸಿ, ನಮ್ಮ ಭಾರತೀಯರಾದ ನಾವು ದೇಶಭಕ್ತಿಯನ್ನು ಅತ್ಯಂತ ಹೆಮ್ಮೆಯಿಂದ ಪ್ರದರ್ಶಿಸುತ್ತೇವೆ. ನಮ್ಮ ರಾಷ್ಟ್ರಕ್ಕಿಂತ ಅಥವಾ ನಾವು ಹೆಮ್ಮೆಯಿಂದ, ತಲೆ ಎತ್ತಿ ಹಾಡುವ 'ಹಮ್ ಹೈಂ ಹಿಂದೂಸ್ತಾನಿ' (ನಾವು ಭಾರತೀಯರು) ಎಂಬ ಭಾವನೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ನಮ್ಮ ಭಾರತದ ವಿಷಯ ಬಂದಾಗ, ಉಳಿದೆಲ್ಲವೂ ಎರಡನೇ ಸ್ಥಾನಕ್ಕೆ ಸರಿಯುತ್ತವೆ. 'ಸಾರೆ ಜಹಾಂ ಸೆ ಅಚ್ಛಾ ಹಿಂದೂಸ್ತಾನ್ ಹಮಾರಾ' (ಇಡೀ ಜಗತ್ತಿನಲ್ಲೇ ಅತ್ಯುತ್ತಮವಾದದ್ದು ನಮ್ಮ ಹಿಂದೂಸ್ತಾನ) ಎಂದಿದ್ದಾರೆ.
ನೆಟ್‌ಫ್ಲಿಕ್ಸ್‌ನ ಈ ಮುಂಬರುವ ಪಾಕಿಸ್ತಾನಿ ಸರಣಿಯ ಸುತ್ತಲಿನ ವಿವಾದವು ಈಗ ತೀವ್ರಗೊಂಡಿದೆ. ಒಂದು ವೇಳೆ ನೆಟ್‌ಫ್ಲಿಕ್ಸ್ ಈ ಸರಣಿಯನ್ನು ಬಿಡುಗಡೆ ಮಾಡಿದರೆ, ಭಾರತದಾದ್ಯಂತ ಆ ವೇದಿಕೆಯ ಎಲ್ಲಾ ನಿರ್ಮಾಣ ಕಾರ್ಯಗಳನ್ನು ತಡೆಹಿಡಿಯುವುದಾಗಿ 'ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸೈನ್ ಎಂಪ್ಲಾಯೀಸ್' (FWICE) ಎಚ್ಚರಿಕೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



