ದೀದಿಗೆ ಬಿಗ್ ಶಾಕ್! ₹804 ಕೋಟಿಯಿದ್ದ ಬ್ಯಾಂಕ್ ಖಾತೆಗಳ ಬಳಕೆಗೆ ಕೋರಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ

ತೃಣಮೂಲ ಕಾಂಗ್ರೆಸ್ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಗೆ ಸಂಬಂಧಿಸಿದಂತೆ ಪಕ್ಷದ 2 ಬಣಗಳ ನಡುವೆ ವಿವಾದ ಏರ್ಪಟ್ಟಿರುವ ನಡುವೆಯೇ, ಸುಮಾರು ₹804 ಕೋಟಿ ಹಣವಿರುವ 4 ಪ್ರಮುಖ ಬ್ಯಾಂಕ್ ಖಾತೆಗಳ ನಿರ್ವಹಣೆ ವಿಚಾರದಲ್ಲೂ ಮಮತಾ ಬ್ಯಾನರ್ಜಿಗೆ ಅತಿ ದೊಡ್ಡ ಹಿನ್ನಡೆಯಾಗಿದೆ. ಆ ಕುರಿತ ವರದಿ ಇಲ್ಲಿದೆ:
Supreme Court Blow to Mamata Banerjee: Plea to Operate Frozen TMC Bank Accounts Worth Rs 804 Crore Dismissed
ದೀದಿಗೆ ಸುಪ್ರೀಂ ಶಾಕ್!Online Desk
Updated on: 

ನವದೆಹಲಿ: ತೃಣಮೂಲ ಕಾಂಗ್ರೆಸ್ ಪಕ್ಷದ ಹೆಸರು ಮತ್ತು ಅದರ ಅಧಿಕೃತ ಹುಲ್ಲು ಮತ್ತು ಹೂವು ಚುನಾವಣಾ ಚಿಹ್ನೆಗೆ ಸಂಬಂಧಿಸಿದಂತೆ ಪಕ್ಷದ ಒಳಗಿನ ಎರಡು ಬಣಗಳ ನಡುವೆ ವಿವಾದ ಏರ್ಪಟ್ಟಿರುವ ನಡುವೆಯೇ, ಸುಮಾರು ₹804 ಕೋಟಿ ಹಣವಿರುವ ನಾಲ್ಕು ಪ್ರಮುಖ ಬ್ಯಾಂಕ್ ಖಾತೆಗಳ ನಿರ್ವಹಣೆ ವಿಚಾರದಲ್ಲೂ ಮಮತಾ ಬ್ಯಾನರ್ಜಿಗೆ ಅತಿ ದೊಡ್ಡ ಹಿನ್ನಡೆಯಾಗಿದೆ. ಹೌದು, ತೃಣಮೂಲ ಕಾಂಗ್ರೆಸ್ ಪಕ್ಷದ ಸ್ಥಗಿತಗೊಂಡಿರುವ ನಾಲ್ಕು ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲು ಅನುಮತಿ ಕೋರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ವಿವಾದ?

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಸೋಲಿನ ನಂತರ ಒಡೆದು ಎರಡು ಹೊಳಾಗಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಜೋಡಾ ಘಾಸ್ ಫೂಲ್' (ಹುಲ್ಲು ಮತ್ತು ಎರಡು ಹೂವುಗಳು) ಚಿಹ್ನೆಯನ್ನು ಕೇಂದ್ರ ಚುನಾವಣಾ ಆಯೋಗವು ತಾತ್ಕಾಲಿಕವಾಗಿ ಫ್ರೀಜ್ ಮಾಡಿದೆ. ಇದರ ಬೆನಲ್ಲೇ, ಶಾಸಕ ಬಿಸ್ವನಾಥ್ ದಾಸ್ ಅವರು ನೀಡಿದ ದೂರಿನ ಮೇರೆಗೆ ಪಶ್ಚಿಮ ಬಂಗಾಳ ಪೊಲೀಸರು ಕ್ರಿಮಿನಲ್ ತನಿಖೆ ಆರಂಭಿಸಿದ್ದರು. ಈ ತನಿಖೆಯ ಭಾಗವಾಗಿ ಇಂಡಿಯನ್ ಬ್ಯಾಂಕ್‌ನಲ್ಲಿರುವ ಟಿಎಂಸಿಯ ನಾಲ್ಕು ಖಾತೆಗಳನ್ನು 'ಡೆಬಿಟ್-ಫ್ರೀಜ್' ಮಾಡಲಾಗಿತ್ತು. ಆದರೆ, ಎಫ್‌ಐಆರ್‌ನಲ್ಲಿ ಲೋಪದೋಷಗಳಿವೆ ಎಂದು ವಾದಿಸಿದ್ದ ಮಮತಾ ಬಣ, ಖಾತೆಗಳನ್ನು ಬಳಸಲು ಅನುಮತಿ ಕೋರಿ ಕಲ್ಕತ್ತಾ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಕಲ್ಕತ್ತಾ ಹೈಕೋರ್ಟ್ ಆಗಸ್ಟ್ 27 ರಂದು ನೀಡಿದ ತೀರ್ಪಿನಲ್ಲಿ, ಸುಮಾರು ₹804 ಕೋಟಿ ಹಣ ಹೊಂದಿರುವ ನಾಲ್ಕು ಪ್ರಮುಖ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಣಕ್ಕೆ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತು. ಜೊತೆಗೆ, ಈಗಾಗಲೇ ಜುಲೈ 9 ರಂದು ನೀಡಿದ್ದ ಆದೇಶದ ಪ್ರಕಾರ, ಪಕ್ಷದ ದೈನಂದಿನ ಮತ್ತು ಮಾಸಿಕ ವೆಚ್ಚಗಳನ್ನು ಭರಿಸಲು ನ್ಯಾಯಾಲಯ ನೇಮಿಸಿರುವ ವಿಶೇಷ ಅಧಿಕಾರಿಯ ಉಸ್ತುವಾರಿಯಲ್ಲಿ ಬೇರೆ ಮೂರು ಖಾತೆಗಳನ್ನು ಬಳಸಲು ಅವಕಾಶ ನೀಡಲಾಗಿದೆ. ಹೀಗಿರುವಾಗ, ಈಗ ಮತ್ತೆ ಈ 4 ದೊಡ್ಡ ಖಾತೆಗಳನ್ನು ಬಳಸಲು ಅನುಮತಿ ನೀಡಿದರೆ ಹಳೆಯ ಆದೇಶದ ಉದ್ದೇಶವೇ ಹಳಿ ತಪ್ಪುತ್ತದೆ ಎಂದು ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರು ಅಭಿಪ್ರಾಯಪಟ್ಟರು.

Supreme Court Blow to Mamata Banerjee: Plea to Operate Frozen TMC Bank Accounts Worth Rs 804 Crore Dismissed
ದೀದಿ ಬಣಕ್ಕೆ 'ಫುಟ್‌ಬಾಲ್', ಬಂಡಾಯಗಾರರಿಗೆ 'ಲಕೋಟೆ': TMC ಚಿಹ್ನೆ ಫ್ರೀಜ್ ಬೆನ್ನಲ್ಲೇ ಚುನಾವಣಾ ಆಯೋಗ ಮಹತ್ವದ ಆದೇಶ!

ಮುಂದುವರೆದು, ಕಲ್ಕತ್ತಾ ಹೈಕೋರ್ಟ್ ನಿರ್ಧಾರದ ವಿರುದ್ದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದೀದಿ ಬಣವು, ಮುಂಬರುವ ಪಕ್ಷದ ದೈನಂದಿನ ಚಟುವಟಿಕೆಗಳು, ನೌಕರರ ವೇತನ ಹಾಗೂ ಕಾನೂನು ವೆಚ್ಚಗಳನ್ನು ಭರಿಸಲು ತಮಗೆ ಈ ₹804 ಕೋಟಿ ಇರುವ 4 ಖಾತೆಗಳನ್ನು ಬಳಸಲು ಅನುಮತಿ ನೀಡಬೇಕು ಎಂದು ಮಮತಾ ಬಣ ಕೋರಿತ್ತು. ಆದರೆ, ಮಮತಾ ಬಣದ ಅರ್ಜಿಗೆ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದ್ದ ಕಲ್ಕತ್ತಾ ಹೈಕೋರ್ಟ್‌ನ ಆಗಸ್ಟ್ 27 ರ ಆದೇಶದಲ್ಲಿ ತಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಜೊತೆಗೆ, ಪ್ರಕರಣದ ವಿಚಾರಣೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಕಲ್ಕತ್ತಾ ಹೈಕೋರ್ಟ್‌ಗೆ ವಿನಂತಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com