ಅತ್ತೆ ಸುಧಾ ಮೂರ್ತಿ ಜೊತೆ ದೆಹಲಿಯ ಬೆಂಗಾಲಿ ಸ್ವೀಟ್ ಹೌಸ್ ಗೆ ಭೇಟಿ ನೀಡಿ ಸಿಹಿ ಸವಿದ ರಿಷಿ ಸುನಕ್; Video

ದೆಹಲಿಗೆ ಭೇಟಿ ನೀಡಿದಾಗ ತಮ್ಮ ಅತ್ತೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಮತ್ತು ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರೊಂದಿಗೆ ಬೆಂಗಾಲಿ ಸ್ವೀಟ್ ಹೌಸ್‌ಗೆ ಭೇಟಿ ನೀಡಿದರು.
Rishi Sunak visit Bengali sweet house in Delhi
ಬೆಂಗಾಲಿ ಸ್ವೀಟ್ ಹೌಸ್‌ ನಲ್ಲಿ ಸುಧಾಮೂರ್ತಿ ಜೊತೆಗೆ ರಿಷಿ ಸುನಕ್
Updated on: 

ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಬ್ಲೂಮ್‌ಬರ್ಗ್ ನ್ಯೂ ಎಕಾನಮಿ ಫೋರಂನಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಸಾರ್ವಜನಿಕ ಸೇವೆಯಲ್ಲಿ 25 ವರ್ಷಗಳನ್ನು ಪೂರೈಸಿದ ಅವರಿಗೆ ಅಭಿನಂದನೆ ಸಲ್ಲಿಸಿದರು.

ದೆಹಲಿಗೆ ಭೇಟಿ ನೀಡಿದಾಗ ತಮ್ಮ ಅತ್ತೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಮತ್ತು ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರೊಂದಿಗೆ ಬೆಂಗಾಲಿ ಸ್ವೀಟ್ ಹೌಸ್‌ಗೆ ಭೇಟಿ ನೀಡಿದರು.

ಮಧ್ಯಾಹ್ನದ ಊಟದ ಬಳಿಕ ಅಲ್ಲಿಗೆ ಹೋಗಿ ಚಾಟ್, ಲಸ್ಸಿ ಮತ್ತು ಚಹಾವನ್ನು ಸವಿದರು. ಭಾರತೀಯ ಸಿಹಿತಿಂಡಿಗಳನ್ನು ಸವಿಯಲು ಬಯಸಿದ ರಿಷಿ ಸುನಕ್, ತಮಗೆ ಇಷ್ಟವಾದ ಸಿಹಿತಿಂಡಿಗಳಲ್ಲಿ ಒಂದಾದ ರಸಮಲಾಯಿಯನ್ನು ಸವಿದರು.

Rishi Sunak visit Bengali sweet house in Delhi
'ಗೊತ್ತಾಗಲ್ಲ ಅವ್ರಿಗೆ': ಕನ್ನಡದಲ್ಲಿ ರಿಷಿ ಸುನಕ್ ಕಾಲೆಳೆದ ಅಕ್ಷತಾ ಮೂರ್ತಿ; ನಿಖಿಲ್ ಕಾಮತ್- ಕಪಲ್ಸ್ ಪಾಡ್ ಕಾಸ್ಟ್

ಕಳೆದ ವರ್ಷ ದೀಪಾವಳಿಯ ಆಸುಪಾಸಿನಲ್ಲಿಯೂ ರಿಷಿ ಸುನಕ್ ಇದೇ ಸ್ಥಳಕ್ಕೆ ಭೇಟಿ ನೀಡಿದ್ದರು. ಆಗಿನ ಭೇಟಿಯನ್ನು ಸ್ಮರಿಸಿದ ಅವರು, ಬೆಂಗಾಲಿ ಸ್ವೀಟ್ ಹೌಸ್ ಆರ್‌ಸಿಯ ಪಾಲುದಾರ ವರ್ಜೇಶ್ ಅಗರ್‌ವಾಲ್ ಅವರೊಂದಿಗೆ ಮಾತನಾಡುತ್ತಾ, ಅಂದು ಮಾಡಿದ್ದ ಸುಂದರ ದೀಪಾವಳಿ ಅಲಂಕಾರಗಳನ್ನು ನೆನಪಿಸಿಕೊಂಡರು.

1937ರಲ್ಲಿ ದೆಹಲಿಯ ಬೆಂಗಾಲಿ ಮಾರ್ಕೆಟ್‌ನ ಹೃದಯಭಾಗದಲ್ಲಿ ಸ್ಥಾಪನೆಯಾದ ಬೆಂಗಾಲಿ ಸ್ವೀಟ್ ಹೌಸ್ ಆ್ಯಂಡ್ ಪೇಸ್ಟ್ರಿ ಶಾಪ್, ಸುಮಾರು ಒಂಬತ್ತು ದಶಕಗಳಿಂದ ಸಾಂಪ್ರದಾಯಿಕ ಸಿಹಿತಿಂಡಿಗಳು, ಖಾರದ ತಿಂಡಿಗಳು ಮತ್ತು ಬೇಕರಿ ಉತ್ಪನ್ನಗಳಿಗೆ ಪ್ರಸಿದ್ಧವಾಗಿದೆ.

ಲಾಲಾ ಭೀಮ್ ಸೇನ್, ಲಾಲಾ ರೋತಾಶ್ ಚಂದ್ ಮತ್ತು ಲಾಲಾ ಬನ್ವಾರಿ ಲಾಲ್ ಅವರು ಸ್ಥಾಪಿಸಿದ ಈ ಅಂಗಡಿ, ರಾಜಧಾನಿಯಲ್ಲಿ ಬೆಂಗಾಲಿ ಶೈಲಿಯ ಖಾದ್ಯಗಳನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂದು ಇದು ದೆಹಲಿಯ ಸಾಂಸ್ಕೃತಿಕ ಗುರುತುಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಹಲವು ರಾಜಕಾರಣಿಗಳು ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಈ ಪ್ರಸಿದ್ಧ ಅಂಗಡಿಗೆ ಭೇಟಿ ನೀಡಿ ತಿಂಡಿಗಳನ್ನು ಸವಿಯುತ್ತಾರೆ. ಇಲ್ಲಿನ ಜನಪ್ರಿಯ ಖಾದ್ಯಗಳಲ್ಲಿ ಛೋಲೆ ಭಟೂರೆ, ಈರುಳ್ಳಿ ಕಚೋರಿ, ಜಿಲೇಬಿ ಮತ್ತು ರಸಮಲಾಯಿಯಂತಹ ಸಾಂಪ್ರದಾಯಿಕ ಭಾರತೀಯ ಸಿಹಿತಿಂಡಿಗಳು ಸೇರಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com