'ತಳ್ಳಿದ' ಪ್ರಕರಣ: ರಾಹುಲ್ ಗಾಂಧಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಗರ್ಭಿಣಿ ಪತ್ರಕರ್ತೆ

ರಾಹುಲ್ ಗಾಂಧಿ ಅವರು ತಮ್ಮ ಕೈಯನ್ನು ಹಿಡಿದು ಬಲವಾಗಿ ಎಳೆದಿದ್ದರಿಂದ ತಾನು ಮೆಟ್ಟಿಲುಗಳ ಮೇಲೆ ಬಿದ್ದೆ. ಪರಿಣಾಮ ತನ್ನ ಹೊಟ್ಟೆ ನೆಲಕ್ಕೆ ಬಡಿದಿದೆ ಎಂದು ಪತ್ರಕರ್ತೆ ರಿಚಾ ಪರಾಶರ್ ಅವರು ಆರೋಪಿಸಿದ್ದಾರೆ.
Journalist Files Police Complaint Against Rahul Gandhi In 'Pushing' Case
ಪೊಲೀಸರಿಗೆ ದೂರು ನೀಡಿದ ಗರ್ಭಿಣಿ ಪತ್ರಕರ್ತೆ
Updated on: 

ನವದೆಹಲಿ: ಅಕ್ಟೋಬರ್ 12 ರಂದು ನಡೆದ ಸುಪ್ರೀಂಕೋರ್ಟ್ ಚಲೋ ವೇಳೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತಮ್ಮನ್ನು ತಳ್ಳಿದ್ದಾರೆ ಎಂದು ಆರೋಪಿಸಿದ್ದ ಗರ್ಭಿಣಿ ಪತ್ರಕರ್ತೆ, ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರತಿಭಟನಾ ಮೆರವಣಿಗೆಯ ವೇಳೆ, ರಾಹುಲ್ ಗಾಂಧಿ ಅವರು ತಮ್ಮ ಕೈಯನ್ನು ಹಿಡಿದು ಬಲವಾಗಿ ಎಳೆದಿದ್ದರಿಂದ ತಾನು ಮೆಟ್ಟಿಲುಗಳ ಮೇಲೆ ಬಿದ್ದೆ. ಪರಿಣಾಮ ತನ್ನ ಹೊಟ್ಟೆ ನೆಲಕ್ಕೆ ಬಡಿದಿದೆ ಎಂದು ಪತ್ರಕರ್ತೆ ರಿಚಾ ಪರಾಶರ್ ಅವರು ಆರೋಪಿಸಿದ್ದಾರೆ.

"ನಾನು ಸುಪ್ರೀಂ ಕೋರ್ಟ್ ಆವರಣದಲ್ಲಿ, ಒಂದು ಗೇಟ್‌ನ ಪಕ್ಕದಲ್ಲಿ ನಿಂತಿದ್ದೆ. ರಾಹುಲ್ ಗಾಂಧಿ ಅವರು ಹೊರಬಂದಾಗ ಅವರ ಪ್ರತಿಕ್ರಿಯೆಯನ್ನು(ಸೌಂಡ್‌ಬೈಟ್) ಪಡೆಯಲು ಕಾಯುತ್ತಿದ್ದೆ... ಅಲ್ಲಿ ಏನಾಗುತ್ತಿದೆ ಎಂದು ನನಗೆ ಸರಿಯಾಗಿ ಅರಿವಾಗುವಷ್ಟರಲ್ಲಿಯೇ, ರಾಹುಲ್ ಗಾಂಧಿ ಅವರು ತೀವ್ರ ಅಸಮಾಧಾನದ ಬಂದು, ಇದ್ದಕ್ಕಿದ್ದಂತೆ ನನ್ನ ಕೈಯನ್ನು ಹಿಡಿದು ಬಲವಾಗಿ ಮುಂದಕ್ಕೆ ಎಳೆದರು. ಅಲ್ಲದೆ ಅವರ ಅಂಗರಕ್ಷಕರು ನನ್ನನ್ನು ತಳ್ಳಿದರು. ಪರಿಣಾಮವಾಗಿ, ನಾನು ಸುಪ್ರೀಂ ಕೋರ್ಟ್ ಮೆಟ್ಟಿಲುಗಳ ಮೇಲೆ ಬಿದ್ದೆ," ಎಂದು 'ಒನ್‌ಇಂಡಿಯಾ' (Oneindia) ಸುದ್ದಿ ಜಾಲತಾಣದಲ್ಲಿ ಕೆಲಸ ಮಾಡುವ ಪರಾಶರ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಹೇಳಿದ್ದರು.

Journalist Files Police Complaint Against Rahul Gandhi In 'Pushing' Case
ಗರ್ಭಿಣಿ ಪತ್ರಕರ್ತೆಯನ್ನು ತಳ್ಳಿದ ಆರೋಪ: ರಾಹುಲ್ ಗಾಂಧಿ ವಿರುದ್ಧ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

ಪರಾಶರ್ ಅವರು ಈ ಸಂಬಂಧ ಶುಕ್ರವಾರ ನವದೆಹಲಿ ಜಿಲ್ಲೆಯ ಪೊಲೀಸ್ ಉಪ ಆಯುಕ್ತರಿಗೆ ದೂರು ನೀಡಿದ್ದು, ರಾಹುಲ್ ಗಾಂಧಿ ಮತ್ತು ಇತರರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ತಾನು ಮೂರು ತಿಂಗಳ ಗರ್ಭಿಣಿಯಾಗಿದ್ದು, ತನ್ನೊಂದಿಗೆ ದುರ್ವರ್ತನೆ ತೋರಲಾಗಿದೆ, ಬೆದರಿಕೆ ಹಾಕಲಾಗಿದೆ. ತಳ್ಳುವುದು ಅಥವಾ ಬಲಪ್ರಯೋಗದಂತಹ ಕೃತ್ಯಗಳನ್ನು ಎಸಗಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com