'ಶಿವ-ಶಕ್ತಿ' ತತ್ವದಲ್ಲಿ ನಂಬಿಕೆ: RSS ವಿರುದ್ಧ ಹೋರಾಟದಿಂದ ಅತೀವ ಸಂತಸ; ಪುರುಷರನ್ನೊಳಗೊಂಡ ಸಂವಿಧಾನ ವಿರೋಧಿ ಗುಂಪು!

ಆರ್‌ಎಸ್‌ಎಸ್-ಬಿಜೆಪಿ ಬೆಂಬಲಿಗರು ಮಹಿಳಾ ಪ್ರತಿಭಟನಾಕಾರರು ಮತ್ತು ಯುವಕರ ಮೇಲೆ ದಾಳಿ ನಡೆಸಲು ದೆಹಲಿ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಗಾಂಧಿ ಆರೋಪಿಸಿದ್ದರು.
Rahul Gandhi
ರಾಹುಲ್ ಗಾಂಧಿonline desk
Updated on: 

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕೇವಲ ಪುರುಷರನ್ನೇ ಒಳಗೊಂಡಿರುವ ಸಂವಿಧಾನ ವಿರೋಧಿ ಗುಂಪಾಗಿದೆ. ಅದು ಮಹಿಳೆಯರನ್ನು ಪುರುಷರ ಆಸ್ತಿ ಎಂದು ಭಾವಿಸುತ್ತದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಆರ್‌ಎಸ್‌ಎಸ್ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್‌, ‘ನಾನು 'ಶಿವ-ಶಕ್ತಿ' ತತ್ವದಲ್ಲಿ ನಂಬಿಕೆ ಇಟ್ಟಿರುವುದರಿಂದಲೇ ಆರ್‌ಎಸ್‌ಎಸ್ ವಿರುದ್ಧ ಹೋರಾಡುವುದು ಅತೀವ ಸಂತಸ ನೀಡುತ್ತದೆ’ ಎಂದು ಹೇಳಿದ್ದಾರೆ. ಇನ್ನೂ ವಿಶೇಷವೆಂದರೆ, ಅವರ ಕಡೆಯ ಅನೇಕ ಮಹಿಳೆಯರೂ ನನ್ನ ಪರವಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪನಾ ದಿನದಂದೇ ರಾಹುಲ್ ಗಾಂಧಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ಅಕ್ಟೋಬರ್ 10 ರಂದು, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದ ರಾಜಕೀಯ ಉದ್ವಿಗ್ನತೆಯ ನಡುವೆ, ಆರ್‌ಎಸ್‌ಎಸ್-ಬಿಜೆಪಿ ಬೆಂಬಲಿಗರು ಮಹಿಳಾ ಪ್ರತಿಭಟನಾಕಾರರು ಮತ್ತು ಯುವಕರ ಮೇಲೆ ದಾಳಿ ನಡೆಸಲು ದೆಹಲಿ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಗಾಂಧಿ ಆರೋಪಿಸಿದ್ದರು.

ಅಮಿತ್ ಶಾ ಅವರ ದೆಹಲಿ ಪೊಲೀಸರೇ ಈಗ ಗೂಂಡಾಗಿರಿಗೆ ಇಳಿದಿದ್ದಾರೆ. ಆರ್‌ಎಸ್‌ಎಸ್-ಬಿಜೆಪಿಯ ನಿಜವಾದ ಗೂಂಡಾಗಳಿಗೆ, ಮಹಿಳೆಯರು ಮತ್ತು ಯುವಕರ ಮೇಲೆ ಹಿಂಸಾಚಾರ ನಡೆಸಲು ಅವರು ಬಹಿರಂಗವಾಗಿಯೇ ಅನುಮತಿ ಮತ್ತು ಪ್ರೋತ್ಸಾಹ ನೀಡುತ್ತಿದ್ದಾರೆ," ಎಂದು ಅವರು 'ಎಕ್ಸ್'ನಲ್ಲಿ ಕಿಡಿಕಾರಿದ್ದರು.

Rahul Gandhi
ಸುಳ್ಳು ಸುದ್ದಿ ಹರಡಿ ಸಾಕಾಗಿ ವಿದೇಶಕ್ಕೆ ಹೋಗ್ತಿದ್ದಾರಾ?: ರಾಹುಲ್ ಗಾಂಧಿ ವಿಡಿಯೋ ಪೋಸ್ಟ್ ಮಾಡಿ ಕಾಲೆಳೆದ ಬಿಜೆಪಿ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com