ಪಾರ್ಟ್‌ನರ್ ಗೆಳತಿಯರೇ ಟಾರ್ಗೆಟ್! ಇನ್‌ಸ್ಟಾ ರೀಲ್ಸ್‌, ಐಷಾರಾಮಿ ಕಾರು ತೋರಿಸಿ 20 ಮಹಿಳಾ ಕಾನ್‌ಸ್ಟೇಬಲ್‌ಗಳಿಗೆ ವಂಚನೆ: ಖತರ್ನಾಕ್ ಖದೀಮ ಅರೆಸ್ಟ್

ದೆಹಲಿಯಲ್ಲಿ ತಾನು ದೊಡ್ಡ ಉದ್ಯಮಿ ಎಂದು ಸುಳ್ಳು ಹೇಳಿಕೊಂಡು, ಇನ್‌ಸ್ಟಾಗ್ರಾಮ್‌ನಲ್ಲಿ ಐಷಾರಾಮಿ ಜೀವನಶೈಲಿಯ ವಿಡಿಯೋಗಳನ್ನು ಪೋಸ್ಟ್ ಮಾಡಿ ಸುಮಾರು 20ಕ್ಕೂ ಹೆಚ್ಚು ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್‌ಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ:
Delhi: 23-Year-Old Fake Businessman Arrested For Duping Over 20 Women Police Constables Via Instagram
ಬಂಧಿತ ವಿಕ್ರಾಂತ್ ತೋಮರ್Online Desk
Updated on: 

ದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ತಾನು ದೊಡ್ಡ ಉದ್ಯಮಿ ಎಂದು ಸುಳ್ಳು ಹೇಳಿಕೊಂಡು, ಇನ್‌ಸ್ಟಾಗ್ರಾಮ್‌ನಲ್ಲಿ ಐಷಾರಾಮಿ ಜೀವನಶೈಲಿಯ ವಿಡಿಯೋಗಳನ್ನು ಪೋಸ್ಟ್ ಮಾಡಿ ಸುಮಾರು 20ಕ್ಕೂ ಹೆಚ್ಚು ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್‌ಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 23 ವರ್ಷದ ವಿಕ್ರಾಂತ್ ತೋಮರ್ ಎಂಬ ಆರೋಪಿಯನ್ನು ಬುರಾರಿ ಪ್ರದೇಶದಲ್ಲಿ ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ವಂಚನೆಯ ಜಾಲ ಬಯಲಿಗೆ ಬಂದಿದ್ದು ಹೇಗೆ?

ದೆಹಲಿಯ ಕರೋಲ್ ಬಾಗ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಾನಿ ಎಂಬ ಮಹಿಳಾ ಕಾನ್ಸ್‌ಟೇಬಲ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಶಿವಾನಿ ಅವರಿಗೆ ಈತ ಬರೋಬ್ಬರಿ 24 ಲಕ್ಷ ರೂಪಾಯಿ ವಂಚಿಸಿದ್ದಾನೆ. ಅದರಲ್ಲೂ, ಆರೋಪಿ ವಿಕ್ರಾಂತ್ ಇನ್‌ಸ್ಟಾಗ್ರಾಮ್‌ನಲ್ಲಿ ತಾನು ದೊಡ್ಡ ಉದ್ಯಮಿ ಮತ್ತು ಕ್ರಿಕೆಟ್ ವಲಯದಲ್ಲಿ ಪ್ರಭಾವಿ ವ್ಯಕ್ತಿ ಎಂದು ಬಿಂಬಿಸಿಕೊಂಡಿದ್ದನು. ಅದರಂತೆ, ಮಹಿಳಾ ಕಾನ್‌ಸ್ಟೇಬಲ್‌ಗಳನ್ನು ನಂಬಿಸಲು ಆರೋಪಿ ಅತ್ಯಂತ ಚಾಣಾಕ್ಷ ತಂತ್ರದ ಅನುಸಾರ ತಲಾ 8 ಗಂಟೆಗಳ ಅವಧಿಗೆ ಬಾಡಿಗೆಗೆ ದುಬಾರಿ ಐಷಾರಾಮಿ ಕಾರುಗಳನ್ನು ಪಡೆದು, ಅವುಗಳ ಜೊತೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದನು.

ಇದರ ಜೊತೆಗೆ, ಒಂದೇ ಕಾರಿನಲ್ಲಿ ಬೇರೆ ಬೇರೆ ದಿನ ಬೇರೆ ಬೇರೆ ಮಹಿಳಾ ಕಾನ್ಸ್‌ಟೇಬಲ್‌ಗಳನ್ನು ದುಬಾರಿ ಹೋಟೆಲ್ ಹಾಗೂ ಕಾಫಿ ಔಟಿಂಗ್‌ಗಳಿಗೆ ಡೇಟಿಂಗ್‌ಗೆಂದು ಕರೆದೊಯ್ಯುತ್ತಿದ್ದ ಈತ, ತಾನು ಶ್ರೀಮಂತನೆಂದು ನಂಬಿಸಿ ಮದುವೆಯಾಗುವುದಾಗಿ ನಂಬಿಸುತ್ತಿದ್ದನು. ಬಳಿಕ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳು ಹಾಗೂ ಉದ್ಯಮದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿ ಹಣ ಪೀಕುತ್ತಿದ್ದನು. ದೂರುದಾರೆ ಶಿವಾನಿ ಅವರು ತಮ್ಮ ಉಳಿತಾಯದ ಹಣದ ಜೊತೆಗೆ 12 ಲಕ್ಷ ರೂ. ಪರ್ಸನಲ್ ಲೋನ್ ಪಡೆದು ಒಟ್ಟು ಬರೋಬ್ಬರಿ ₹24 ಲಕ್ಷ ಹಣವನ್ನು ಈತನಿಗೆ ಹಣ ನೀಡಿದ್ದರು. ಅದರಂತೆ, ವಂಚಿಸಿದ ಹಣದಲ್ಲಿ ಸುಮಾರು 8 ಲಕ್ಷ ರೂಪಾಯಿಗಳನ್ನು ಆರೋಪಿಯು ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಆದ 1x.com ಖಾತೆಗಳಿಗೆ ವರ್ಗಾಯಿಸಿದ್ದಾನೆ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ.

Delhi: 23-Year-Old Fake Businessman Arrested For Duping Over 20 Women Police Constables Via Instagram
ಪಾರ್ಟ್‌ನರ್ ಗೆಳತಿಯರೆ ಟಾರ್ಗೆಟ್AI Image
Delhi: 23-Year-Old Fake Businessman Arrested For Duping Over 20 Women Police Constables Via Instagram
ಪೂಜಾ ಪೆಂಡಾಲ್‌ನಲ್ಲಿ ಡ್ಯಾನ್ಸರ್ ಕಪಾಳಕ್ಕೆ ಬಾರಿಸಿ ಜನರಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ ಇನ್ಸ್‌ಪೆಕ್ಟರ್, Video!

ಲಿವ್-ಇನ್ ಪಾರ್ಟ್‌ನರ್ ಕೊಟ್ಟ ಸುಳಿವು!

ಈ ಪ್ರಕರಣದಲ್ಲಿ ಪೊಲೀಸರಿಗೆ ದೊಡ್ಡ ಟ್ವಿಸ್ಟ್ ಸಿಕ್ಕಿದ್ದೆಂದರೆ, ಆರೋಪಿ ವಿಕ್ರಾಂತ್ ಜೊತೆ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವತಿ ಕೂಡ ದೆಹಲಿ ಪೊಲೀಸ್ ಇಲಾಖೆಯಲ್ಲೇ ಮಹಿಳಾ ಕಾನ್ಸ್‌ಟೇಬಲ್ ಆಗಿದ್ದಾಳೆ! ಅದರಲ್ಲೂ, ಆಕೆಯ ಬ್ಯಾಚ್‌ಮೇಟ್‌ಗಳ ವಿವರಗಳನ್ನು ಬಳಸಿಕೊಂಡೇ ಈತ ಒಂದೇ ಬ್ಯಾಚ್‌ನ ಸುಮಾರು 20 ಮಹಿಳಾ ಕಾನ್ಸ್‌ಟೇಬಲ್‌ಗಳನ್ನು ಟಾರ್ಗೆಟ್ ಮಾಡಿ ಬಲೆಗೆ ಬೀಳಿಸಿಕೊಂಡಿದ್ದನು ಎನ್ನಲಾಗಿದೆ. ಸದ್ಯ ದೂರು ದಾಖಲಿಸಿಕೊಂಡಿರುವ ಸೈಬರ್ ಪೊಲೀಸ್ ಘಟಕವು ಆರೋಪಿಯನ್ನು ಕಸ್ಟಡಿಗೆ ಪಡೆದು ತನಿಖೆಯನ್ನು ತೀವ್ರಗೊಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com