ಮಹಡಿ ಮೇಲಿಂದ ಗುಟ್ಕಾ ಉಗುಳುವಾಗ ವಿದ್ಯುತ್ ಅವಘಡ; 11 ಕೆವಿ ತಂತಿ ತಗುಲಿ 65 ವರ್ಷದ ವ್ಯಕ್ತಿ ಸಾವು

ಮೂರನೇ ಮಹಡಿಯ ಬಾಲ್ಕನಿಯಿಂದ ಗುಟ್ಕಾ ಉಗುಳುತ್ತಿದ್ದ 65 ವರ್ಷದ ವ್ಯಕ್ತಿಯೊಬ್ಬರು 11 ಸಾವಿರ ವೋಲ್ಟ್ ಸಾಮರ್ಥ್ಯದ ಹೈಟೆನ್ಷನ್ ವಿದ್ಯುತ್ ತಂತಿಯ ಸಂಪರ್ಕಕ್ಕೆ ಬಂದು ಮೃತಪಟ್ಟಿದ್ದಾರೆ.
Man spits gutkha from 3rd-floor balcony
ಗುಟ್ಕಾ ಉಗುಳುವಾಗ ವಿದ್ಯುತ್ ಅವಘಡ
Updated on: 

ಭೋಪಾಲ್‌: ಮಹಡಿ ಮೇಲಿಂದ ಗುಟ್ಕಾ ಉಗುಳುವಾಗ ಅವಘಡವೊಂದು ಸಂಭವಿಸಿದ್ದು, 11 ಸಾವಿರ ವೋಲ್ಟ್ ಸಾಮರ್ಥ್ಯದ ಹೈಟೆನ್ಷನ್ ವಿದ್ಯುತ್ ತಂತಿಯ ಸಂಪರ್ಕದಿಂದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಗಂಜ್‌ಬಸೋಡಾದಲ್ಲಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಮೂರನೇ ಮಹಡಿಯ ಬಾಲ್ಕನಿಯಿಂದ ಗುಟ್ಕಾ ಉಗುಳುತ್ತಿದ್ದ 65 ವರ್ಷದ ವ್ಯಕ್ತಿಯೊಬ್ಬರು 11 ಸಾವಿರ ವೋಲ್ಟ್ ಸಾಮರ್ಥ್ಯದ ಹೈಟೆನ್ಷನ್ ವಿದ್ಯುತ್ ತಂತಿಯ ಸಂಪರ್ಕಕ್ಕೆ ಬಂದು ಮೃತಪಟ್ಟಿದ್ದಾರೆ.

ಮೃತರನ್ನು ಛತ್ತರ್‌ಪುರ ಮೂಲದ ಕಾರ್ಮಿಕ ಪ್ರಭುಲಾಲ್ ಗುಪ್ತಾ ಎಂದು ಗುರುತಿಸಲಾಗಿದ್ದು, ಅವರು ಕಳೆದ 10 ವರ್ಷಗಳಿಂದ ಗಂಜ್‌ಬಸೋಡಾದ ಗಾಯತ್ರಿ ನಗರದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಸ್ಥಳೀಯರ ಪ್ರಕಾರ, ಅವರು ಉಗುಳಿದ ಜೊಲ್ಲು ಮೇಲಿನಿಂದ ಹಾದುಹೋಗಿದ್ದ ಹೈಟೆನ್ಷನ್ ವಿದ್ಯುತ್ ತಂತಿಯ ಸಂಪರ್ಕಕ್ಕೆ ಬಂದಿದ್ದು, ಪರಿಣಾಮ ತೀವ್ರವಾಗಿ ಸುಟ್ಟ ಗಾಯಗಳಾಗಿವೆ. ಬಳಿಕ ಅವರು ಮೃತಪಟ್ಟಿದ್ದಾರೆ.

Man spits gutkha from 3rd-floor balcony
100 ಅಡಿ ಆಳದ ಕಂದಕಕ್ಕೆ ಬಿದ್ದು ಮರಿ ಆನೆ ಸಾವು; ರಕ್ಷಿಸಲು ತಾಯಾನೆ ಪರದಾಟ, ಮನಮಿಡಿಯುವ Video ವೈರಲ್‌

ಜೊಲ್ಲಿನಿಂದಲೂ ವಿದ್ಯುತ್ ಹರಿಯುವ ಸಾಧ್ಯತೆ

ವಿದ್ಯುತ್ ತಜ್ಞರ ಪ್ರಕಾರ, ಜೊಲ್ಲಿನಲ್ಲಿ ತೇವಾಂಶ ಮತ್ತು ಕರಗಿದ ಲವಣಾಂಶಗಳಿರುವುದರಿಂದ ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಅದು ವಿದ್ಯುತ್ ಪ್ರವಹಿಸಲು ನೆರವಾಗಬಹುದು. ದ್ರವದ ನಿರಂತರ ಧಾರೆ ವಿದ್ಯುತ್ ಹರಿಯುತ್ತಿರುವ ತಂತಿಯನ್ನು ತಲುಪಿದರೆ ವಿದ್ಯುತ್ ಪ್ರವಹಿಸುವ ಮಾರ್ಗ ಸೃಷ್ಟಿಯಾಗುವ ಸಾಧ್ಯತೆಯಿದೆ.

ಅಲ್ಲದೆ, 11 ಕೆವಿ ಹೈಟೆನ್ಷನ್ ತಂತಿಯ ಸಮೀಪದಲ್ಲಿ ಸೂಕ್ತ ಪರಿಸ್ಥಿತಿಗಳು ನಿರ್ಮಾಣವಾದರೆ ವಿದ್ಯುತ್ ಚಾಪ (ಎಲೆಕ್ಟ್ರಿಕಲ್ ಆರ್ಕ್) ಉಂಟಾಗಿ ಗಾಳಿಯ ಮೂಲಕವೂ ವಿದ್ಯುತ್ ಹರಿಯಬಹುದು. ದೇಹದ ಮೂಲಕ ವಿದ್ಯುತ್ ಪ್ರವಹಿಸಿದರೆ ತೀವ್ರ ಸುಟ್ಟ ಗಾಯಗಳು ಅಥವಾ ಸಾವು ಸಂಭವಿಸಬಹುದು ಎಂದು ತಜ್ಞರು ವಿವರಿಸಿದ್ದಾರೆ.

Man spits gutkha from 3rd-floor balcony
100 ಕೋಟಿ ರೂ. ಖಾಸಗಿ ಶಾಲೆಗಳ ಹಗರಣ: ಮಾಜಿ ಶಿಕ್ಷಣ ಸಚಿವ, DMK ನಾಯಕನ ಬಂಧನ!

ವಿದ್ಯುತ್ ಕಂಪನಿ ವಿರುದ್ಧ ಸ್ಥಳೀಯರ ಆಕ್ರೋಶ

ಘಟನೆಯ ಬಳಿಕ ಸ್ಥಳೀಯ ನಿವಾಸಿಗಳು ವಿದ್ಯುತ್ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆಗಳಿಗೆ ಅಪಾಯಕಾರಿಯಾಗಿ ಹತ್ತಿರದಲ್ಲೇ ಹಾದುಹೋಗಿರುವ ಹೈಟೆನ್ಷನ್ ತಂತಿಗಳ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಪ್ರಭುಲಾಲ್ ವಾಸವಿದ್ದ ಮನೆಯ ಮಾಲೀಕರಲ್ಲಿ ಒಬ್ಬರಾದ ಪದ್ಮಾ ಚಿಧಾರ್, ಪ್ರದೇಶದಲ್ಲಿನ ವಿದ್ಯುತ್ ಕಂಬಗಳು, ತಂತಿಗಳು ಮತ್ತು ವಿತರಣಾ ಟ್ರಾನ್ಸ್‌ಫಾರ್ಮರ್‌ಗಳ ಸ್ಥಿತಿ ಸರಿಯಾಗಿಲ್ಲ ಎಂದು ಹೇಳಿದ್ದಾರೆ.

ಮನೆಗಳ ಸಮೀಪ ಹಾದುಹೋಗಿರುವ 11 ಕೆವಿ ವಿದ್ಯುತ್ ತಂತಿಯನ್ನು ಸ್ಥಳಾಂತರಿಸುವಂತೆ ತಾವು ಕೂಡ ಹಲವು ಬಾರಿ ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾಗಿ ಅವರು ತಿಳಿಸಿದ್ದಾರೆ. ತಂತಿಯನ್ನು ಸ್ಥಳಾಂತರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com