ನಟ ಇಮ್ರಾನ್ ಖಾನ್‌ಗೆ ಬಿಗ್ ರಿಲೀಫ್: ಭಾರತ ಬಿಟ್ಟು ಹೋಗುವಂತೆ ನೀಡಿದ್ದ ನೋಟಿಸ್‌ಗೆ ಬಾಂಬೆ ಹೈಕೋರ್ಟ್‌ ತಡೆ!

ಬಾಲಿವುಡ್ ನಟ ಇಮ್ರಾನ್ ಖಾನ್ ಅವರಿಗೆ ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿ ನೀಡಿದ್ದ ಭಾರತ ತೊರೆಯುವಂತೆ ನೋಟಿಸ್‌ಗೆ ಬಾಂಬೆ ಹೈಕೋರ್ಟ್ ನವೆಂಬರ್ 2, 2026 ರವರೆಗೆ ತಡೆ ನೀಡಿದ್ದು, ನಟನಿಗೆ ಬಿಗ್ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ. ಆ ಕುರಿತ ವರದಿ ಇಲ್ಲಿದೆ:
Actor Imran Khan
ನಟ ಇಮ್ರಾನ್ ಖಾನ್‌Online Desk
Updated on: 

ಮುಂಬೈ (ಮಹಾರಾಷ್ಟ್ರ): ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಮುಂಬೈನಲ್ಲಿ ನಡೆದಿದ್ದ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಇಮ್ರಾನ್ ಖಾನ್‌ ಅವರಿಗೆ ಅಕ್ಟೋಬರ್ 28ರೊಳಗೆ ಭಾರತ ತೊರೆಯುವಂತೆ ಮುಂಬೈ ಪೊಲೀಸರು ನೋಟಿಸ್ ನೀಡಿದ್ದರು. ಆದರೆ, ಬಾಂಬೆ ಹೈಕೋರ್ಟ್ ಈ ನೋಟಿಸ್‌ಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಈ ಮೂಲಕ  ಬಾಲಿವುಡ್ ನಟ ಇಮ್ರಾನ್ ಖಾನ್ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

ಅಕ್ಟೋಬರ್ 10ರಂದು ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ರಾಜಕೀಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಇಮ್ರಾನ್ ಖಾನ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದರು. ಇನ್ನು, ನಟ ಇಮ್ರಾನ್ ಖಾನ್ ಅವರು ಭಾರತೀಯ ಮೂಲದವರಾಗಿದ್ದರೂ ಅಮೆರಿಕದ ಪೌರತ್ವ ಹೊಂದಿದ್ದಾರೆ ಮತ್ತು ಭಾರತದಲ್ಲಿ ಒಸಿಐ (ಭಾರತದ ಸಾಗರೋತ್ತರ ನಾಗರಿಕ) ಕಾರ್ಡ್ ಮೂಲಕ ವಾಸಿಸುತ್ತಿದ್ದಾರೆ. ಆದರೆ, ವಲಸೆ ಕಾಯ್ದೆಯ ಪ್ರಕಾರ ವಿದೇಶಿ ಪೌರತ್ವ ಹೊಂದಿರುವವರು ಭಾರತದಲ್ಲಿ ಯಾವುದೇ ರಾಜಕೀಯ ಪ್ರತಿಭಟನೆಗಳಲ್ಲಿ ಭಾಗವಹಿಸುವಂತಿಲ್ಲ. ಇದೇ ಕಾರಣಕ್ಕೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಅಕ್ಟೋಬರ್ 14ರಂದು ಅವರಿಗೆ ಭಾರತ ತೊರೆಯುವಂತೆ ಆದೇಶಿಸಿತ್ತು.

Actor Imran Khan
ಬಲಪ್ರಯೋಗದ ಮೂಲಕ ಆಳುವ ಸರ್ಕಾರ ಗೆಲ್ಲಲು ಸಾಧ್ಯವಿಲ್ಲ: ಕೇಂದ್ರದ ವಿರುದ್ಧ ನಟ ಇಮ್ರಾನ್ ಖಾನ್ ಗರ್ಲ್​​​ಫ್ರೆಂಡ್ ಲೇಖಾ ಕಿಡಿ

ಈ ನೋಟಿಸ್ ಅನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಇಮ್ರಾನ್ ಖಾನ್, "ನಾನು ಕೇವಲ 2 ವರ್ಷದ ಮಗುವಾಗಿದ್ದಾಗಿನಿಂದಲೂ ಭಾರತದಲ್ಲೇ ವಾಸಿಸುತ್ತಿದ್ದೇನೆ. ನಾನು ಆ ಪ್ರತಿಭಟನೆಯ ಸಂಘಟಕನೂ ಅಲ್ಲ, ಅದರಲ್ಲಿ ಭಾಗವಹಿಸಿಯೂ ಇಲ್ಲ. ಕೇವಲ ಅಲ್ಲಿ ನೆರೆದಿದ್ದ ಗುಂಪನ್ನು ನೋಡಲು ಹೋಗಿದ್ದೆ ಅಷ್ಟೇ. ಅಲ್ಲದೆ, ನನಗೆ ನನ್ನ ವಾದ ಮಂಡಿಸಲು ಯಾವುದೇ ಶೋಕಾಸ್ ನೋಟಿಸ್ ನೀಡದೆ ಏಕಪಕ್ಷೀಯವಾಗಿ ದೇಶ ಬಿಡಲು ಆದೇಶಿಸಿರುವುದು ಸಂವಿಧಾನಬಾಹಿರ" ಎಂದು ವಾದಿಸಿದ್ದಾರೆ.

ಮುಂದುವರೆದು, ಕೇಂದ್ರ ಸರ್ಕಾರದ ಪರ ವಕೀಲರು ಪ್ರಕರಣದ ವಾದ ಮಂಡಿಸಲು ಹೆಚ್ಚಿನ ಸಮಯಾವಕಾಶ ಕೋರಿದ ಹಿನ್ನೆಲೆಯಲ್ಲಿ, ಮುಖ್ಯ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಮತ್ತು ನ್ಯಾಯಮೂರ್ತಿ ಅದ್ವೈತ್ ಸೇತ್ನಾ ಅವರಿದ್ದ ಪೀಠವು ವಿಚಾರಣೆಯನ್ನು ನವೆಂಬರ್ 2, 2026 ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಇಮ್ರಾನ್ ಖಾನ್ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಬಾರದು ಎಂದು ಕೋರ್ಟ್ ಮೌಖಿಕ ಭರವಸೆ ದಾಖಲಿಸಿಕೊಂಡು ನೋಟಿಸ್ ಅನ್ನು ಅಮಾನತ್ತಿನಲ್ಲಿಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com