ಬಲಪ್ರಯೋಗದ ಮೂಲಕ ಆಳುವ ಸರ್ಕಾರ ಗೆಲ್ಲಲು ಸಾಧ್ಯವಿಲ್ಲ: ಕೇಂದ್ರದ ವಿರುದ್ಧ ನಟ ಇಮ್ರಾನ್ ಖಾನ್ ಗರ್ಲ್​​​ಫ್ರೆಂಡ್ ಲೇಖಾ ಕಿಡಿ

"ಇಮ್ರಾನ್ ಖಾನ್ ಅವರ ಧ್ವನಿಯನ್ನು ಎಲ್ಲೆಡೆ ತಲುಪಿಸಲು ಸಹಾಯ ಮಾಡಿ. ಬಲಪ್ರಯೋಗದ ಮೂಲಕ ಆಳುವ, ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕುವ ಮತ್ತು ನಿರಪರಾಧಿಗಳನ್ನು ಶಿಕ್ಷಿಸುವ ಇಂತಹ ಸರ್ಕಾರವು ಅಂತಿಮವಾಗಿ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳೋಣ," ಎಂದು ಹೇಳಿದ್ದಾರೆ.
Governments that rule by force cannot win, says Lekha Washington
ಇಮ್ರಾನ್ ಖಾನ್ - ಲೇಖಾ
Updated on: 

ಮುಂಬೈ: ಬಾಲಿವುಡ್ ನಟ ಇಮ್ರಾನ್ ಖಾನ್ ಅವರ ಗರ್ಲ್​​​ಫ್ರೆಂಡ್ ಲೇಖಾ ವಾಷಿಂಗ್ಟನ್ ಅವರು, ಇನ್‌ಸ್ಟಾಗ್ರಾಮ್‌ನಲ್ಲಿ ಇಮ್ರಾನ್ ಜೊತೆಗಿರುವ ತಮ್ಮ ಫೋಟೋವನ್ನು ಹಂಚಿಕೊಂಡಿದ್ದು, ಅವರಿಗೆ ಬೆಂಬಲ ಸೂಚಿಸಿದ ಎಲ್ಲರಿಗೂ ಸಂದೇಶವೊಂದನ್ನು ರವಾನಿಸಿದ್ದಾರೆ.

"ನನ್ನ ಸ್ನೇಹಿತರಿಗೆ, ವಿಶೇಷವಾಗಿ ಪ್ರಸ್ತುತ ಭಾರತದಲ್ಲಿ ಅಕ್ರಮ ಮತ್ತು ಅನೈತಿಕ ಟಾರ್ಗೆಟ್‌ಗೆ ಒಳಗಾಗಿರುವ ನನ್ನ ಸ್ನೇಹಿತ ಇಮ್ರಾನ್ ಖಾನ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಲೇಖಾ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಮುಂದುವರೆದು, "ಇಮ್ರಾನ್ ಖಾನ್ ಅವರ ಧ್ವನಿಯನ್ನು ಎಲ್ಲೆಡೆ ತಲುಪಿಸಲು ಸಹಾಯ ಮಾಡಿ. ಬಲಪ್ರಯೋಗದ ಮೂಲಕ ಆಳುವ, ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕುವ ಮತ್ತು ನಿರಪರಾಧಿಗಳನ್ನು ಶಿಕ್ಷಿಸುವ ಇಂತಹ ಸರ್ಕಾರವು ಅಂತಿಮವಾಗಿ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳೋಣ," ಎಂದು ಹೇಳಿದ್ದಾರೆ.

Governments that rule by force cannot win, says Lekha Washington
CJP ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಇಮ್ರಾನ್ ಖಾನ್​ಗೆ ಬಿಗ್ ಶಾಕ್; ಗಡಿಪಾರು ಸಾಧ್ಯತೆ

ಅಮೆರಿಕದ ಪ್ರಜೆಯಾಗಿರುವ ಇಮ್ರಾನ್, 'ಎಸ್‌ಐಆರ್'(SIR - Special Intensive Revision) ಪ್ರಕ್ರಿಯೆಯ ಸಂದರ್ಭದಲ್ಲಿ 13 ಕೋಟಿ ಮತದಾರರ ಡಿಲೀಟ್ ವಿರೋಧಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಳೆದ ವಾರ ನಡೆದ ಆಗಸ್ಟ್ ಕ್ರಾಂತಿ ಮೈದಾನದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂಬಂಧ ಬಿಜೆಪಿ ನಾಯಕ ಕಿರಿಟ್ ಸೋಮಯ್ಯ ಅವರು, ಇಮ್ರಾನ್ ವಿರುದ್ಧ ದೂರು ದಾಖಲಿಸಿದ್ದರು. ಇದರ ಪರಿಣಾಮವಾಗಿ, ಅಮೆರಿಕದ ಪ್ರಜೆಯಾಗಿರುವ ಇಮ್ರಾನ್ ಖಾನ್, ಅಕ್ಟೋಬರ್ 28ರೊಳಗೆ ದೇಶ ತೊರೆಯಬೇಕೆಂದು ಆದೇಶ ಹೊರಡಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com