ಪ್ರಾಜೆಕ್ಟ್ ಚೀತಾ ಯೋಜನೆಗೆ ಅತಿ ದೊಡ್ಡ ಹಿನ್ನೆಡೆ! ಕುನೋದಲ್ಲಿ ಬೇಟೆಗಾರರ ಗುಂಡಿಗೆ ಬಲಿಯಾಯ್ತಾ ಚೀತಾ ಮರಿ?

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿದ್ದ ನಿರ್ವಾ ಎಂಬ ಹೆಣ್ಣು ಚೀತಾದ 19 ತಿಂಗಳ ಗಂಡು ಮರಿಯೊಂದು ಗುಂಡೇಟಿನ ಗಾಯಗಳಿಂದಾಗಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದೆ. ಭಾರತದ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಚೀತಾ ಯೋಜನೆ ಇತಿಹಾಸದಲ್ಲೇ ಇಂತಹದ್ದೊಂದು ಘಟನೆ ನಡೆದಿರುವುದು ಇದೇ ಮೊದಲು. ಆ ಕುರಿತ ವರದಿ ಇಲ್ಲಿದೆ:
Big Blow to Project Cheetah: 19-Month-Old Cub Dies After Being Shot in Madhya Pradesh
ಮರಿಗಳೊಂದಿಗೆ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ Online Desk
Updated on: 

ಶಿಯೋಪುರ್ (ಮಧ್ಯಪ್ರದೇಶ): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಪ್ರಾಜೆಕ್ಟ್ ಚೀತಾ'ಗೆ ದೊಡ್ಡ ಹಿನ್ನೆಡೆಯಾಗಿದೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಿರ್ವಾ ಹೆಸರಿನ ಆಫ್ರಿಕನ್ ಚೀತಾದ 19 ತಿಂಗಳ ಗಂಡು ಮರಿಯೊಂದು ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು, ಚಿಕಿತ್ಸೆ ಫಲಿಸದೆ ಮಂಗಳವಾರ ಸಾವನ್ನಪ್ಪಿದೆ. ಈ ಮೂಲಕ ಭಾರತದಲ್ಲಿ 2022ರಲ್ಲಿ ಆರಂಭವಾದ ಪ್ರಾಜೆಕ್ಟ್ ಚೀತಾ ಯೋಜನೆಯ ಇತಿಹಾಸದಲ್ಲೇ ಚೀತಾವೊಂದು ಬೇಟೆಗಾರರ ಗುಂಡಿಗೆ ಬಲಿಯಾಗಿರುವುದು ಇದೇ ಮೊದಲು ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಘಟನೆ ನಡೆದಿದ್ದು ಹೇಗೆ?

ಅಕ್ಟೋಬರ್ 25 ರಂದು ಕುನೋ ಉದ್ಯಾನವನದ ಸಂರಕ್ಷಿತ ಪ್ರದೇಶದಿಂದ ಹೊರಗಿರುವ ಮೊರೆನಾ-ಶಿಯೋಪುರ್ ಪ್ರಾದೇಶಿಕ ಅರಣ್ಯ ವ್ಯಾಪ್ತಿಯಲ್ಲಿ ಈ ಚೀತಾ ಮರಿ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅರಣ್ಯ ಸಿಬ್ಬಂದಿ ಇದನ್ನು ತಕ್ಷಣವೇ ರಕ್ಷಿಸಿ ಚಿಕಿತ್ಸೆಗಾಗಿ ಜಬಲ್‌ಪುರದ ಪಶುವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ರವಾನಿಸಿದ್ದರು. ಈ ವೇಳೆ, ಚೀತಾ ಮರಿಯನ್ನು ತಪಾಸಣೆ ಒಳಪಡಿಸಿದಾಗ ಎಕ್ಸ್-ರೇ ಮತ್ತು ಸಿಟಿ ಸ್ಕ್ಯಾನ್‌ನಲ್ಲಿ ಅದರ ಆಂತರಿಕ ಅಂಗಾಂಗಗಳು, ನರಮಂಡಲ ಮತ್ತು ಸ್ನಾಯುಗಳು ತೀವ್ರವಾಗಿ ಹಾನಿಗೊಳಗಾಗಿರುವುದು ಪತ್ತೆಯಾಗಿತ್ತು. ಅದರಂತೆ, ತುರ್ತು ಶಸ್ತ್ರಚಿಕಿತ್ಸೆಯ ವೇಳೆ ಚೀತಾದ ದೇಹದಿಂದ ಐದು ಬಂದೂಕಿನ ಸಣ್ಣ ಗುಂಡುಗಳನ್ನು ಹೊರತೆಗೆಯಲಾಯಿತಾದರೂ, ಅದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.

Big Blow to Project Cheetah: 19-Month-Old Cub Dies After Being Shot in Madhya Pradesh
ಗಾಢ ನಿದ್ರೆಯಲ್ಲಿದ್ದ ಕಾರ್ಮಿಕರತ್ತ ನುಗ್ಗಿದ ಚಿರತೆ; ಸಕಾಲದಲ್ಲಿ ಹಾರ್ನ್‌ ಬಾರಿಸಿ ಜೀವ ಉಳಿಸಿದ ಕಾರು ಚಾಲಕ! Video

ಮುಂದುವರೆದು, ಈ ಘಟನೆಯನ್ನು ಕೇಂದ್ರ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಭಾರತ ಸರ್ಕಾರದ ಪರಿಸರ ಹಾಗೂ ಅರಣ್ಯ ಸಚಿವಾಲಯವು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಜಂಟಿ ತನಿಖಾ ತಂಡವನ್ನು ಸ್ಥಳಕ್ಕೆ ನಿಯೋಜಿಸಿದೆ. ಅದರಲ್ಲೂ, ಇದು ಕಾನೂನುಬಾಹಿರ ಬೇಟೆಯ ಯತ್ನವೇ ಅಥವಾ ಮಾನವ-ಪ್ರಾಣಿ ಸಂಘರ್ಷದ ಹಿನ್ನೆಲೆಯಲ್ಲಿ ನಡೆದ ಘಟನೆಯೇ ಎಂಬುದನ್ನು ಪತ್ತೆಹಚ್ಚಲು ಮಧ್ಯಪ್ರದೇಶ ಸರ್ಕಾರವು ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳನ್ನೊಳಗೊಂಡ ವಿಶೇಷ ಕಾರ್ಯಪಡೆಯನ್ನು ರಚಿಸಿ ತನಿಖೆ ಆರಂಭಿಸಿದೆ.

ಒಟ್ಟಾರೆಯಾಗಿ, ಆಫ್ರಿಕಾದಿಂದ ತರಲಾದ ಚೀತಾಗಳು ತಮ್ಮ ನಿಯೋಜಿತ ವಲಯಗಳನ್ನು ಮೀರಿ ದೂರದ ಪ್ರಾದೇಶಿಕ ಕಾಡುಗಳಿಗೆ ಸಂಚರಿಸುತ್ತಿರುವುದರಿಂದ ಅವುಗಳ ಸುರಕ್ಷತೆ ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದರಂತೆ, ಈ ದುರಂತದ ನಂತರ ದೇಶದಲ್ಲಿರುವ ಒಟ್ಟು ಚೀತಾಗಳ ಸಂಖ್ಯೆ 58ಕ್ಕೆ ಇಳಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com