'ಸರ್ಕಾರವೇ ತನ್ನ ಮತದಾರರ ಆಯ್ಕೆ ಮಾಡುತ್ತಿದೆ, ಜ್ಞಾನೇಶ್ ಕುಮಾರ್ ಕೆಳಗಿಳಿಯಬೇಕು': ಕಾಂಗ್ರೆಸ್ ನೇತೃತ್ವದ INDIA ಬಣದ ರ‍್ಯಾಲಿಗೆ CJP ಬೆಂಬಲ

SIR ಪ್ರಕ್ರಿಯೆಯಿಂದ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯುವ ಅಪಾಯವಿದೆ ಎಂದು ಆರೋಪಿಸಿರುವ CJP, ಮತದಾರರು ತಮ್ಮ ಸರ್ಕಾರವನ್ನು ಆಯ್ಕೆ ಮಾಡಬೇಕೇ ಹೊರತು, ಸರ್ಕಾರವೇ ತನ್ನ ಮತದಾರರನ್ನು ಆಯ್ಕೆ..
CJP backs INDIA bloc November 1 rally against CEC
ಕಾಂಗ್ರೆಸ್ ರ್ಯಾಲಿಗೆ CJP ಬೆಂಬಲ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರವಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನವೆಂಬರ್ 1ರಂದು INDIA ಬಣ ಆಯೋಜಿಸಿರುವ ರ‍್ಯಾಲಿಗೆ ಕಾಕ್ರೋಚ್ ಜನತಾ ಪಾರ್ಟಿ (CJP) ಬುಧವಾರ ಬೆಂಬಲ ಘೋಷಿಸಿದೆ.

SIR ಪ್ರಕ್ರಿಯೆಯಿಂದ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯುವ ಅಪಾಯವಿದೆ ಎಂದು ಆರೋಪಿಸಿರುವ CJP, ಮತದಾರರು ತಮ್ಮ ಸರ್ಕಾರವನ್ನು ಆಯ್ಕೆ ಮಾಡಬೇಕೇ ಹೊರತು, ಸರ್ಕಾರವೇ ತನ್ನ ಮತದಾರರನ್ನು ಆಯ್ಕೆ ಮಾಡುವಂತಾಗಬಾರದು ಎಂದು ಟೀಕಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪಕ್ಷ, “SIR ಮೂಲಕ ಈ ಮೂಲ ತತ್ವಕ್ಕೆ ಧಕ್ಕೆ ಉಂಟುಮಾಡುವ ಮೂಲಕ ಜ್ಞಾನೇಶ್ ಕುಮಾರ್ ಅವರು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಮೇಲ್ವಿಚಾರಣೆ ಮಾಡುವ ಅಗತ್ಯ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ಸ್ವತಂತ್ರತೆಯನ್ನು ಮರುಸ್ಥಾಪಿಸಲು ಅವರ ರಾಜೀನಾಮೆ ಅಗತ್ಯ” ಎಂದು ತಿಳಿಸಿದೆ.

CJP backs INDIA bloc November 1 rally against CEC
ಕರ್ನಾಟಕದಲ್ಲಿ 'ಶೂನ್ಯ'; ಬ್ಯಾಲೆಟ್ ಪೇಪರ್‌ನಲ್ಲಿ ನಡೆದ 28 MLC ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದೆಷ್ಟು? ಪ್ರಧಾನಿ ಮೋದಿ ಲೇವಡಿ

ಪ್ರಜಾಪ್ರಭುತ್ವದಿಂದ ಜನರನ್ನು ಹೊರಗಿಡಬಾರದು

ಸಂವಿಧಾನ ರಚನಾ ಸಭೆಯ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕಿನ ಬದ್ಧತೆಯನ್ನು ಉಲ್ಲೇಖಿಸಿರುವ CJP, ಬಿ.ಆರ್. ಅಂಬೇಡ್ಕರ್, ಜವಾಹರಲಾಲ್ ನೆಹರು ಸೇರಿದಂತೆ ಸಂವಿಧಾನ ರಚನಾಕಾರರು, ಲಕ್ಷಾಂತರ ಭಾರತೀಯರು ಈ ಹಿಂದೆ ಯಾವುದೇ ಚುನಾವಣೆಯಲ್ಲಿ ಭಾಗವಹಿಸದಿದ್ದರೂ ಮತದಾರರ ಮೇಲೆ ವಿಶ್ವಾಸವಿಟ್ಟಿದ್ದರು ಎಂದು ಹೇಳಿದೆ.

“ಪ್ರಜಾಪ್ರಭುತ್ವಕ್ಕೆ ಹೆಚ್ಚು ಹೆಚ್ಚು ನಾಗರಿಕರನ್ನು ಸೇರಿಸಿಕೊಳ್ಳಬೇಕು ಎಂಬುದು ಇದರ ಸರಳ ಉದ್ದೇಶವಾಗಿತ್ತು. ಅವರನ್ನು ಪ್ರಜಾಪ್ರಭುತ್ವದಿಂದ ಹೊರಗಿಡುವುದಲ್ಲ” ಎಂದು ಪಕ್ಷ ಹೇಳಿದೆ.

ಅಭಿಜೀತ್ ದೀಪ್ಕೆ ಪೋಸ್ಟ್

CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಕೂಡ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ INDIA ಬಣದ ರ‍್ಯಾಲಿಗೆ ಬೆಂಬಲ ಘೋಷಿಸಿದ್ದಾರೆ. “ಜ್ಞಾನೇಶ್ ಕುಮಾರ್ ಕೆಳಗಿಳಿಯಬೇಕು! ಕಾಕ್ರೋಚ್ ಜನತಾ ಪಾರ್ಟಿ ನವೆಂಬರ್ 1ರಂದು ನಡೆಯಲಿರುವ INDIA ಬಣದ ರ‍್ಯಾಲಿಗೆ ಬೆಂಬಲ ನೀಡುತ್ತದೆ. ದೇಶವೇ ಮೊದಲು!” ಎಂದು ಅವರು ಬರೆದುಕೊಂಡಿದ್ದಾರೆ.

ಅರ್ಹ ಮತದಾರರ ಹಕ್ಕು ರಕ್ಷಿಸುವುದು ಆಯೋಗದ ಕರ್ತವ್ಯ

ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸುವ ಜವಾಬ್ದಾರಿ ಚುನಾವಣಾ ಆಯೋಗದ್ದಾಗಿದೆ. ಆ ಹಕ್ಕನ್ನು ಚಲಾಯಿಸಲು ಅಡ್ಡಿ ಉಂಟುಮಾಡುವ ಬದಲು, ಅದನ್ನು ಖಚಿತಪಡಿಸಬೇಕು ಎಂದು CJP ಆಗ್ರಹಿಸಿದೆ.

“ನಮ್ಮ ಸಂವಿಧಾನವು ಪ್ರತಿಯೊಬ್ಬ ವಯಸ್ಕ ನಾಗರಿಕನಿಗೂ ಮತದಾನದ ಹಕ್ಕು ನೀಡಿದೆ. ಯಾವುದೇ ಅರ್ಹ ನಾಗರಿಕ ಈ ಹಕ್ಕಿನಿಂದ ವಂಚಿತನಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ” ಎಂದು ಪಕ್ಷದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳಿಗಾಗಿ ಹೋರಾಡುವ ಸಂಘಟನೆಗಳಿಗೆ ಬೆಂಬಲ ನೀಡುವುದಾಗಿಯೂ CJP ಹೇಳಿದೆ. ಪಕ್ಷದ ಹೇಳಿಕೆಯ ಕೊನೆಯಲ್ಲಿ ‘ಜೈ ಭೀಮ್’ ಮತ್ತು ‘ಜೈ ಹಿಂದ್’ ಘೋಷಣೆಗಳನ್ನು ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com