MLC ಚುನಾವಣೆ: ಎಲ್ಲರ ಭವಿಷ್ಯ ಹೇಳುವ ಖ್ಯಾತ ಜ್ಯೋತಿಷಿ ಪತ್ನಿಗೆ 300 ಮತವೂ ಸಿಗಲಿಲ್ಲ!

ಉತ್ತರ ಪ್ರದೇಶ ವಿಧಾನ ಪರಿಷತ್ತಿನ ಲಖನೌ ವಿಭಾಗದ ಪದವೀಧರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಖ್ಯಾತ ಜ್ಯೋತಿಷಿ ಇಂದೂ ಪ್ರಕಾಶ್ ಮಿಶ್ರಾ ಅವರ ಪತ್ನಿ ಸ್ಮಿತಾ ಮಿಶ್ರಾ ಅವರು 300 ಮತಗಳನ್ನೂ ಪಡೆಯಲು..
Smita Mishra, wife of well-known astrologer Indu Prakash Mishra
ಜ್ಯೋತಿಷಿ ಪ್ರಕಾಶ್ ಮಿಶ್ರಾ ಮತ್ತು ಪತ್ನಿ ಸ್ಮಿತಾ ಮಿಶ್ರಾ
Updated on: 

ಲಖನೌ: ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನ ಪರಿಷತ್ತ್ ಚುನಾವಣೆಯಲ್ಲಿ ಕೆಲ ಅಚ್ಚರಿ ಬೆಳವಣಿಗೆಗಳು ವರದಿಯಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಖ್ಯಾತ ಜ್ಯೋತಿಷಿಯ ಪತ್ನಿ ಠೇವಣಿ ಕಳೆದುಕೊಂಡ ಕುರಿತು ವರದಿಯಾಗಿದೆ.

ಇತರರ ಭವಿಷ್ಯವನ್ನು ನುಡಿಯುವ ಖ್ಯಾತ ಜ್ಯೋತಿಷಿಯೊಬ್ಬರ ಪತ್ನಿಯೇ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದಾರೆ. ಉತ್ತರ ಪ್ರದೇಶ ವಿಧಾನ ಪರಿಷತ್ತಿನ ಲಖನೌ ವಿಭಾಗದ ಪದವೀಧರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಖ್ಯಾತ ಜ್ಯೋತಿಷಿ ಇಂದೂ ಪ್ರಕಾಶ್ ಮಿಶ್ರಾ ಅವರ ಪತ್ನಿ ಸ್ಮಿತಾ ಮಿಶ್ರಾ ಅವರು 300 ಮತಗಳನ್ನೂ ಪಡೆಯಲು ವಿಫಲರಾಗಿದ್ದಾರೆ. ಈ ಸೋಲು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಾಷ್ಟ್ರೀಯ ವಾಹಿನಿ ವರದಿಯ ಪ್ರಕಾರ, ಈ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಕಾಂತಿ ಸಿಂಗ್ ಅವರು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿಯನ್ನು ಸೋಲಿಸಿ ಅವರು ವಿಧಾನ ಪರಿಷತ್ ಕ್ಷೇತ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ.

Smita Mishra, wife of well-known astrologer Indu Prakash Mishra
ಕರ್ನಾಟಕದಲ್ಲಿ 'ಶೂನ್ಯ'; ಬ್ಯಾಲೆಟ್ ಪೇಪರ್‌ನಲ್ಲಿ ನಡೆದ 28 MLC ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದೆಷ್ಟು? ಪ್ರಧಾನಿ ಮೋದಿ ಲೇವಡಿ

ಕಾಂಗ್ರೆಸ್ ಟಿಕೆಟ್ ಸಿಗದಿದ್ದಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ

ಸ್ಮಿತಾ ಮಿಶ್ರಾ ಅವರು ಸೆಪ್ಟೆಂಬರ್ 28ರಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಲಖನೌ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಬಹುದು ಎಂಬ ನಿರೀಕ್ಷೆಯೂ ಇತ್ತು. ಆದರೆ, ಪಕ್ಷದಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದರು. ಆದರೆ, ಮತದಾರರಿಂದ ನಿರೀಕ್ಷಿತ ಬೆಂಬಲ ದೊರೆಯದೆ ಹೀನಾಯ ಸೋಲು ಅನುಭವಿಸಿದ್ದಾರೆ.

ಮತ ಎಣಿಕೆ ಪ್ರಕ್ರಿಯೆ ಬಗ್ಗೆ ಅನುಮಾನ

ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಸ್ಮಿತಾ ಮಿಶ್ರಾ ಅವರು ಮತ ಎಣಿಕೆ ಪ್ರಕ್ರಿಯೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಕೆಲವು ಮತಪೆಟ್ಟಿಗೆಗಳ ಮೇಲಿನ ಸಂಖ್ಯೆಗಳು ಮತ್ತು ಅವುಗಳೊಳಗೆ ಪತ್ತೆಯಾದ ಮತಪತ್ರಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಕೆಲವು ಪೆಟ್ಟಿಗೆಗಳಲ್ಲಿ ಇರಬೇಕಾದುದಕ್ಕಿಂತ ಹೆಚ್ಚಿನ ಮತಪತ್ರಗಳು ಪತ್ತೆಯಾಗಿವೆ ಎಂಬ ಆರೋಪವನ್ನೂ ಮಾಡಿದ್ದಾರೆ. ಆದರೆ, ಈ ಆರೋಪಗಳಿಗೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

Smita Mishra, wife of well-known astrologer Indu Prakash Mishra
ಪರಿಷತ್ ಚುನಾವಣೆ ಸೋಲಿನ ಪರಾಮರ್ಶೆ ಮಾಡುತ್ತೇವೆ; ಪೇಪರ್ ಬ್ಯಾಲೆಟ್ ಬೇಕು: ಸಿಎಂ ಡಿ.ಕೆ ಶಿವಕುಮಾರ್; Video

ಜ್ಯೋತಿಷಿಯ ಭವಿಷ್ಯವಾಣಿಯ ಬಗ್ಗೆಯೇ ನೆಟ್ಟಿಗರ ವ್ಯಂಗ್ಯ!

ಸ್ಮಿತಾ ಮಿಶ್ರಾ ಅವರ ಸೋಲು ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಎಲ್ಲರ ಭವಿಷ್ಯವನ್ನು ಹೇಳುವ ಜ್ಯೋತಿಷಿಯೊಬ್ಬರಿಗೆ ತಮ್ಮ ಪತ್ನಿಯ ಚುನಾವಣಾ ಸೋಲಿನ ಮುನ್ಸೂಚನೆಯೇ ಸಿಗಲಿಲ್ಲವೇ ಎಂದು ಹಲವರು ವ್ಯಂಗ್ಯವಾಡಿದ್ದಾರೆ. ಇತರರ ಭವಿಷ್ಯವನ್ನು ಅಂದಾಜಿಸುವ ವ್ಯಕ್ತಿಯ ಕುಟುಂಬದಲ್ಲೇ ಇಂತಹ ರಾಜಕೀಯ ಹಿನ್ನಡೆ ಎದುರಾಗಿರುವುದು ಚರ್ಚೆಯ ವಿಷಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X