ಸನಾತನ ಧರ್ಮದ ಮೂಲತತ್ವವೇ ನಂಬಿಕೆ: AI- ನಂತರದ ಜಗತ್ತಿನಲ್ಲಿ ಧರ್ಮಕ್ಕೆ ಹೆಚ್ಚು ಮಹತ್ವ; ಶ್ರೀಧರ್ ವೆಂಬು ಭವಿಷ್ಯ

ಆಧುನಿಕತಾವಾದಿಗಳಾಗಿರುವುದು ಮತ್ತು ಧರ್ಮವನ್ನು ತ್ಯಜಿಸುವುದು 'ಜನಸಂಖ್ಯಾತ್ಮಕ ಆತ್ಮಹತ್ಯೆ'ಗೆ ಸಮಾನ ಎಂದು ಪ್ರತಿಪಾದಿಸಿದ್ದಾರೆ. ಹಿಂದಿನ ಪೀಳಿಗೆಯವರು ಕೇವಲ ಆಧ್ಯಾತ್ಮಿಕರಾಗಿರದೆ, ನಿಜವಾದ ನಂಬಿಕೆಯನ್ನು ಹೊಂದಿದ್ದರಿಂದಲೇ ಇಂದಿನ ಆಧುನಿಕ ಸಮಾಜ ಅಸ್ತಿತ್ವದಲ್ಲಿದೆ.
ಸನಾತನ ಧರ್ಮದ ಮೂಲತತ್ವವೇ ನಂಬಿಕೆ: AI- ನಂತರದ ಜಗತ್ತಿನಲ್ಲಿ ಧರ್ಮಕ್ಕೆ ಹೆಚ್ಚು ಮಹತ್ವ; ಶ್ರೀಧರ್ ವೆಂಬು ಭವಿಷ್ಯ
Updated on: 

ನವದೆಹಲಿ: ಕೃತಕ ಬುದ್ಧಿಮತ್ತೆ (AI) ಆಧುನಿಕ ಜಗತ್ತನ್ನು ಮರು ವ್ಯಾಖ್ಯಾನಿಸುತ್ತಿರುವ ಹೊತ್ತಿನಲ್ಲಿ, AI-ನಂತರದ ಯುಗದಲ್ಲಿ ಧರ್ಮವು ಇನ್ನಷ್ಟು ಹೆಚ್ಚಿನ ಮಹತ್ವವನ್ನು ಪಡೆಯಲಿದೆ ಎಂದು 'ಝೋಹೋ' (Zoho) ಸಹ-ಸ್ಥಾಪಕ ಶ್ರೀಧರ್ ವೆಂಬು ಭವಿಷ್ಯ ನುಡಿದಿದ್ದಾರೆ.

ಆಧುನಿಕತೆ, ಧರ್ಮ ಮತ್ತು AI ಕುರಿತ ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದಕ್ಕೆ ಪ್ರತಿಕ್ರಿಯಿಸುತ್ತಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಧುನಿಕತಾವಾದಿಗಳಾಗಿರುವುದು ಮತ್ತು ಧರ್ಮವನ್ನು ತ್ಯಜಿಸುವುದು 'ಜನಸಂಖ್ಯಾತ್ಮಕ ಆತ್ಮಹತ್ಯೆ'ಗೆ ಸಮಾನ ಎಂದು ಪ್ರತಿಪಾದಿಸಿದ್ದಾರೆ. ಹಿಂದಿನ ಪೀಳಿಗೆಯವರು ಕೇವಲ "ಆಧ್ಯಾತ್ಮಿಕ"ರಾಗಿರದೆ, "ನಿಜವಾದ ನಂಬಿಕೆ"ಯನ್ನು ಹೊಂದಿದ್ದರಿಂದಲೇ ಇಂದಿನ ಆಧುನಿಕ ಸಮಾಜ ಅಸ್ತಿತ್ವದಲ್ಲಿದೆ ಎಂದು ವೇಂಬು ಪ್ರತಿಪಾದಿಸಿದರು.

ಆಧುನಿಕತಾವಾದಿಗಳು ಧರ್ಮರಹಿತವಾಗಿರುವುದು ಜನಸಂಖ್ಯಾತ್ಮಕ ಆತ್ಮಹತ್ಯೆಗೆ ದಾರಿ ಮಾಡಿಕೊಡುತ್ತದೆ. ನಾವು ಇಂದು ಇಲ್ಲಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ಪೂರ್ವಜರಲ್ಲಿದ್ದ ನಂಬಿಕೆ; ಇದು 'ಆಧ್ಯಾತ್ಮಿಕ ಆದರೆ ಧಾರ್ಮಿಕವಲ್ಲ' ಎನ್ನುವ ರೀತಿಯ ನಂಬಿಕೆಯಲ್ಲ, ಬದಲಾಗಿ ನಿಜವಾದ ನಂಬಿಕೆ, ಎಂದು ವೇಂಬು ಹೇಳಿದರು.

AI-ನ ಬೆಳೆಯುತ್ತಿರುವ ಸಾಮರ್ಥ್ಯಗಳನ್ನು ಉಲ್ಲೇಖಿಸಿದ ವೇಂಬು, ತಂತ್ರಜ್ಞಾನವು ಮಾನವಕುಲದ ಬೌದ್ಧಿಕ ಶ್ರೇಷ್ಠತೆಯ ಭಾವನೆಗೆ ಸವಾಲೊಡ್ಡಬಹುದು ಎಂದು ಅಭಿಪ್ರಾಯಪಟ್ಟರು. ಇನ್ನು AI ವಿಷಯಕ್ಕೆ ಬಂದರೆ, ಇದು ನಮ್ಮ ಬೌದ್ಧಿಕ ಅಹಂಕಾರ ಅಥವಾ ಭ್ರಮೆಯನ್ನು ಕೊನೆಗೊಳಿಸುತ್ತದೆ. ಹಾಗಾದರೆ, ನಿಜವಾಗಿಯೂ ಮಾನವೀಯತೆಗೆ ಸಂಬಂಧಪಟ್ಟದ್ದು ಏನು ಉಳಿಯುತ್ತದೆ? ನನ್ನ ಪ್ರಕಾರ, ಪ್ರಕೃತಿ, ಪೋಷಣೆ ಸಂಸ್ಕೃತಿ ಮತ್ತು ಧರ್ಮಗ್ರಂಥಗಳು ಉಳಿಯುತ್ತವೆ; ಸನಾತನ ಧರ್ಮದ ಮೂಲತತ್ವವೇ ಇವೆಲ್ಲವೂ ಪರಸ್ಪರ ಸಂಪರ್ಕ ಹೊಂದಿವೆ ಎಂಬುದಾಗಿದೆ ಎಂದು ಅವರು ಹೇಳಿದರು.

ಸನಾತನ ಧರ್ಮದ ಮೂಲತತ್ವವೇ ನಂಬಿಕೆ: AI- ನಂತರದ ಜಗತ್ತಿನಲ್ಲಿ ಧರ್ಮಕ್ಕೆ ಹೆಚ್ಚು ಮಹತ್ವ; ಶ್ರೀಧರ್ ವೆಂಬು ಭವಿಷ್ಯ
ಕಾಕಿನಾಡ ಯುವಕನಿಗೆ ₹1 ಕೋಟಿ ಸಂಬಳದ AI ಉದ್ಯೋಗ: ವಿಶೇಷಚೇತನ ಟೇಲರ್ ಪುತ್ರನಿಗೆ ಬಂಪರ್ ಆಫರ್!

"ಏನೇ ಇರಲಿ, ನಾನೊಂದು ಭವಿಷ್ಯ ನುಡಿಯುತ್ತೇನೆ, AI-ನಂತರದ ಜಗತ್ತಿನಲ್ಲಿ ಧರ್ಮವು ಇನ್ನಷ್ಟು ಹೆಚ್ಚು ಮಹತ್ವಪೂರ್ಣವಾಗಲಿದೆ ಎಂಬ ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೆಲವರು ವೇಂಬು ಅವರ ವಿಶ್ಲೇಷಣೆಯನ್ನು ಒಪ್ಪಿಕೊಂಡರೆ, ಮತ್ತೆ ಕೆಲವರು ಧರ್ಮವು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬ ಅವರ ಕಲ್ಪನೆಯನ್ನು ತೀವ್ರವಾಗಿ ವಿರೋಧಿಸಿದರು.

"ನಮಸ್ತೆ ಶ್ರೀಧರ್ ಜಿ, ನೀವು ಹೇಳಿದ್ದನ್ನು ನಾನು ಸಂಪೂರ್ಣವಾಗಿ ವಿರೋಧಿಸುತ್ತೇನೆ. ನಂಬಿಕೆ ಅಥವಾ ಶ್ರದ್ಧೆ ಎಂಬುದು ನಮ್ಮ ಪೂರ್ವಜರಿಗೆ ಮಾತ್ರ ಸೀಮಿತವಾದದ್ದಲ್ಲ. ಎಲ್ಲಾ ಸಮಾಜಗಳಲ್ಲೂ ಅದು ಇತ್ತು. ಆದರೆ, ನಾವು ವಿಕಸನಗೊಂಡಂತೆ, ಅದರಲ್ಲಿರುವ 'ಅಸಮಂಜಸ' ಅಥವಾ 'ತರ್ಕಹೀನ' ಅಂಶಗಳನ್ನು ಕೈಬಿಡುತ್ತಾ ಬಂದಿದ್ದೇವೆ," ಎಂದು ಹೇಳಿದರು. ಇನ್ನೊಬ್ಬರು, "ಹೌದು, ಧರ್ಮವು ಮರಳಿ ಬರಬಹುದು, ಆದರೆ ಅದು ಕುರುಡು ನಂಬಿಕೆಯ ರೂಪದಲ್ಲಿರುವುದಿಲ್ಲ. ಬದಲಾಗಿ, ಅದು ಹಳೆಯ ಕಾಲದಂತೆ, ಬಹುಶಃ ಧರ್ಮದ ಆರಂಭಿಕ ದಿನಗಳಂತೆ ಇರಬಹುದು: ಅಂದರೆ ವಿಚಾರ ವಿನಿಮಯ, ಚಿಂತನೆ, ಅನ್ವೇಷಣೆ ಮತ್ತು ಎಲ್ಲವನ್ನೂ ಪ್ರಶ್ನಿಸುವ ಪ್ರಕ್ರಿಯೆಯಾಗಿರಬಹುದು," ಮತ್ತೊಬ್ಬ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

"ಒಪ್ಪಲಿ ಅಥವಾ ಬಿಡಲಿ, ಇದು ನಡೆಯಲೇಬೇಕಾದ ಸಂಗತಿ. ಆದರೆ, ಅವರು ಅತ್ಯಂತ ಯಶಸ್ವಿ ಕಂಪನಿಗಳಲ್ಲಿ ಒಂದರ ಸಂಸ್ಥಾಪಕರಾಗಿರುವುದರಿಂದ, ಅವರ ಭವಿಷ್ಯವಾಣಿಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com