ಜನವರಿ 25ರಿಂದ ಜನಗಣತಿ ಆರಂಭ; ಚುನಾವಣೆ ನಡೆಯಲಿರುವ ರಾಜ್ಯಗಳು, ಹಿಮಪಾತ ಪೀಡಿತ ಪ್ರದೇಶಗಳಿಗೆ ವಿನಾಯಿತಿ

ಮನೆ ಮನೆಗೆ ತೆರಳಿ ನಡೆಸುವ ಜನಗಣತಿ ಪ್ರಕ್ರಿಯೆಗೂ ಮುನ್ನ, ಅಂದರೆ 2027ರ ಜನವರಿ 10 ರಿಂದ ಜನವರಿ 24ರವರೆಗೆ, ಜನರು ಸ್ವತಃ ತಮ್ಮ ವಿವರಗಳನ್ನು ದಾಖಲಿಸಿಕೊಳ್ಳುವ (self-enumeration) ಅವಕಾಶವನ್ನೂ ಕಲ್ಪಿಸಲಾಗಿದೆ.
Population census to begin on January 25; poll-bound states, snow-hit areas excluded
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ಚುನಾವಣೆ ನಡೆಯಲಿರುವ ರಾಜ್ಯಗಳು ಮತ್ತು ಹಿಮಾವೃತ ಪ್ರದೇಶಗಳನ್ನು ಹೊರತುಪಡಿಸಿ, ಭಾರತದಾದ್ಯಂತ 2027ರ ಜನವರಿ 25 ರಿಂದ ಫೆಬ್ರವರಿ 28ರವರೆಗೆ ಜನಗಣತಿಯನ್ನು ನಡೆಸಲಾಗುವುದು ಎಂದು ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರು ಶುಕ್ರವಾರ ಪ್ರಕಟಿಸಿದ್ದಾರೆ.

ಅಧಿಕೃತ ಅಧಿಸೂಚನೆಯ ಪ್ರಕಾರ, ಜನಗಣತಿಗಾಗಿ ನಿರ್ದಿಷ್ಟಪಡಿಸಿದ ದಿನಾಂಕ(ರೆಫರೆನ್ಸ್ ಡೇಟ್) 2027ರ ಮಾರ್ಚ್ 1ರಂದು ಮಧ್ಯರಾತ್ರಿ 12:00 ಗಂಟೆ (00:00 ಗಂಟೆ) ಆಗಿರುತ್ತದೆ.

ಮಣಿಪುರ(ಮುಂದಿನ ಆದೇಶದವರೆಗೆ), ಗೋವಾ, ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ ಮತ್ತು ಲಡಾಖ್; ಹಾಗೂ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದ ಹಿಮಾವೃತ ಪ್ರದೇಶಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನವರಿ 25 ರಿಂದ ಫೆಬ್ರವರಿ 28ರ ನಡುವೆ ಜನಗಣತಿ ಕಾರ್ಯ ನಡೆಯಲಿದೆ.

Population census to begin on January 25; poll-bound states, snow-hit areas excluded
ಜಾತಿ ಗಣತಿ: ಮನೆ ಮನೆ ಸಮೀಕ್ಷೆ ಮುಕ್ತಾಯ; ರಾಜ್ಯದ ಒಟ್ಟು ಜನಸಂಖ್ಯೆ ಎಷ್ಟು ಗೊತ್ತಾ?

ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರಾದ ಮೃತ್ಯುಂಜಯ ಕುಮಾರ್ ನಾರಾಯಣ್ ಅವರು ಹೊರಡಿಸಿರುವ ಅಧಿಸೂಚನೆಯಲ್ಲಿ, 2027ರ ಮಾರ್ಚ್ 1 ರಿಂದ ಮಾರ್ಚ್ 5ರವರೆಗೆ ಜನಗಣತಿಯ ಪರಿಷ್ಕರಣಾ ಸುತ್ತು(revisional round) ನಡೆಯಲಿದೆ ಎಂದು ತಿಳಿಸಿದ್ದಾರೆ.

ಮನೆ ಮನೆಗೆ ತೆರಳಿ ನಡೆಸುವ ಜನಗಣತಿ ಪ್ರಕ್ರಿಯೆಗೂ ಮುನ್ನ, ಅಂದರೆ 2027ರ ಜನವರಿ 10 ರಿಂದ ಜನವರಿ 24ರವರೆಗೆ, ಜನರು ಸ್ವತಃ ತಮ್ಮ ವಿವರಗಳನ್ನು ದಾಖಲಿಸಿಕೊಳ್ಳುವ (self-enumeration) ಅವಕಾಶವನ್ನೂ ಕಲ್ಪಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X