Raptadu School Attack: 'ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲೇ ದಾಳಿ ನಡೆದು ಹೋಗಿತ್ತು'; ಭಯಾನಕ ಘಟನೆ ನೆನೆದು ಬಿಕ್ಕಿ ಬಿಕ್ಕಿ ಅತ್ತ ಶಿಕ್ಷಕಿ! Video

ಗಾಯಾಳುಗಳನ್ನು ಗೀತಿಕಾ ಮತ್ತು ಲಕ್ಷ್ಮಿ ಎಂದು ಗುರುತಿಸಲಾಗಿದೆ. ಈ ಪೈಕಿ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದು ಮತ್ತೋರ್ವ ವಿದ್ಯಾರ್ಥಿನಿಗೆ ಚಿಕಿತ್ಸೆ ಮುಂದುವರೆದಿದೆ ಎನ್ನಲಾಗಿದೆ.
Raptadu School Teacher Recounts Andhra Chainsaw Shocker
ರಾಪ್ತಾಡು ಶಾಲೆ ದಾಳಿ ಘಟನೆ ನೆನೆದ ಶಿಕ್ಷಕಿ
Updated on: 

ಅನಂತಪುರ: ಆಂಧ್ರಪ್ರದೇಶದ ಸರ್ಕಾರಿ ಶಾಲೆಯಲ್ಲಿ 21 ವರ್ಷದ ಯುವಕನೊಬ್ಬ ಮರಕತ್ತರಿಸುವ ಯಂತ್ರ ಹಿಡಿದು ನಡೆಸಿದ ಹುಚ್ಚಾಟಕ್ಕೆ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿ, ಮತ್ತೋರ್ವ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡ ಭೀಕರ ಘಟನೆಯನ್ನು ನೆನೆದು ಶಿಕ್ಷಕಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಶನಿವಾರ ಬೆಳಗ್ಗೆ ಸುಮಾರು 10.30ರ ವೇಳೆಗೆ ಅನಂತಪುರ ಜಿಲ್ಲೆಯ ರಾಪ್ತಾಡು ಗ್ರಾಮದ ಜಿಲ್ಲಾ ಪಂಚಾಯಿತಿ ಪ್ರೌಢಶಾಲೆಯಲ್ಲಿ ತರಗತಿ ನಡೆಯುತ್ತಿದ್ದಾಗಲೇ ತರಗತಿಯೊಳಗೆ ನುಗ್ಗಿದ 21 ವರ್ಷದ ಹೇಮಂತ್ ಅಲಿಯಾಸ್ ದುಮ್ಮು ಎಂಬ ದುಷ್ಕರ್ಮಿ ಚೈನ್ಸಾ (ಮರ ಕತ್ತರಿಸುವ ಯಂತ್ರ) ಬಳಸಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ದಾಳಿ ನಡೆಸಿದ್ದ.

ಗಾಯಾಳುಗಳನ್ನು ಗೀತಿಕಾ ಮತ್ತು ಲಕ್ಷ್ಮಿ ಎಂದು ಗುರುತಿಸಲಾಗಿದೆ. ಈ ಪೈಕಿ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದು ಮತ್ತೋರ್ವ ವಿದ್ಯಾರ್ಥಿನಿಗೆ ಚಿಕಿತ್ಸೆ ಮುಂದುವರೆದಿದೆ ಎನ್ನಲಾಗಿದೆ.

Raptadu School Teacher Recounts Andhra Chainsaw Shocker
Raptadu: ಮರಕತ್ತರಿಸುವ ಚೈನ್ ಸಾ ಹಿಡಿದು ಶಾಲೆಗೆ ನುಗ್ಗಿ ಭೀಕರ ದಾಳಿ; ಓರ್ವ ವಿದ್ಯಾರ್ಥಿನಿ ಸಾವು, ಮತ್ತೊಬ್ಬಳಿಗೆ ಗಾಯ! Video

ಆರೋಪಿ ಬಂಧನ

ಆರೋಪಿ ಹೇಮಂತ್ ದಾಳಿ ನಡೆಸಿ ಪರಾರಿಯಾಗಿದ್ದ. ಪ್ರಾಥಮಿಕ ಪೊಲೀಸ್ ಮಾಹಿತಿಯ ಪ್ರಕಾರ, ಪೊಲೀಸರು ಕಾರ್ಯಾಚರಣೆ ನಡೆಸಿ ಧರ್ಮಾವರಂ ರೈಲು ನಿಲ್ದಾಣದಲ್ಲಿ ಆತನನ್ನು ಬಂಧಿಸಿದ್ದಾರೆ. ಆರೋಪಿ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ ಮಂಡಲದ ನಾಗಲೂರು ಗ್ರಾಮದ ನಿವಾಸಿ ಎನ್ನಲಾಗಿದೆ. ಗಾಯಗೊಂಡ ವಿದ್ಯಾರ್ಥಿನಿಯೊಬ್ಬಳಿಗೆ ದೂರದ ಸಂಬಂಧಿಯಾಗಿದ್ದಾನೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಭಯಾನಕ ಘಟನೆ ನೆನೆದು ಬಿಕ್ಕಿ ಬಿಕ್ಕಿ ಅತ್ತ ಶಿಕ್ಷಕಿ!

ಇನ್ನು ಈ ಘಟನೆ ಕುರಿತು ಶಾಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಕ್ಷಕಿ ರಾಜೇಶ್ವರಿ, 'ಈ ಘಟನೆ ನಡೆಯುವ ಸಂದರ್ಭದಲ್ಲಿ ತರಗತಿಗಳು ನಡೆಯುತ್ತಿದ್ದವು. ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದರು. ಈ ವೇಳೆ ಚಾಲನೆಯಲ್ಲಿದ್ದ ಚೈನ್ಸಾ ಹಿಡಿದು ಯುವಕನೊಬ್ಬ ತರಗತಿಗೆ ನುಗ್ಗಿದ್ದಾನೆ ಎಂದು ಹೇಳಿದರು.

"ತರಗತಿಗಳು ನಡೆಯುತ್ತಿದ್ದವು. ಮೊದಲ ಅವಧಿ ಮುಗಿದಿತ್ತು, ಮುಂದಿನ ಪಾಠವೂ ನಡೆಯುತ್ತಿತ್ತು. ಮಕ್ಕಳೆಲ್ಲರೂ ಓದುತ್ತಿದ್ದರು. ಸಾಮಾನ್ಯವಾಗಿ ತರಗತಿಯ ಬಾಗಿಲು ತೆರೆದಿರುತ್ತದೆ. ಆ ಬಾಗಿಲಿನ ಮೂಲಕ ಯಾರೋ ಒಳಗೆ ಬಂದರು. ಏನಾಗುತ್ತಿದೆ ಎಂದು ನಾವು ಅರಿತುಕೊಳ್ಳುವಷ್ಟರಲ್ಲಿ ಆ ಘಟನೆ ನಡೆದುಹೋಗಿತ್ತು. ಆರೋಪಿ ಒಬ್ಬನೇ ಬಂದಿದ್ದ. ಹೊರಗಡೆಯಿಂದಲೇ ಯಂತ್ರದ ಮೋಟಾರ್ ಆನ್ ಮಾಡಿಕೊಂಡು ಒಳಗೆ ಬಂದ. ಅದು ಯಾವ ರೀತಿಯ ಯಂತ್ರ ಎಂಬುದೇ ನಮಗೆ ಮೊದಲು ಅರ್ಥವಾಗಲಿಲ್ಲ" ಎಂದು ಶಿಕ್ಷಕಿ ರಾಜೇಶ್ವರಿ ವಿವರಿಸಿದ್ದಾರೆ.

ಶಾಲಾ ಆವರಣದಲ್ಲಿ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ, ಯಂತ್ರದ ಶಬ್ದ ಕೇಳಿದಾಗ ಕಾರ್ಮಿಕರು ಕೆಲಸಕ್ಕೆ ಬಂದಿರಬಹುದು ಎಂದುಕೊಂಡಿದ್ದೆವು. ಆದರೆ ಆತ ಏಕಾಏಕಿ ಮಕ್ಕಳ ಮಧ್ಯೆ ನುಗ್ಗಿದ. ಏನಾಗುತ್ತಿದೆ ಎಂದು ಮಕ್ಕಳು ಅರಿತುಕೊಳ್ಳುವಷ್ಟರಲ್ಲಿ, ಅಲ್ಲಿಂದ ಎದ್ದು ಹೊರಗೆ ಓಡುವಷ್ಟರಲ್ಲಿ ದಾಳಿ ನಡೆದಿತ್ತು. ಹೊರಗಿನಿಂದ ಶಬ್ದಗಳು ಕೇಳಿಬರಲಾರಂಭಿಸಿದವು. ಆತ ವಿದ್ಯಾರ್ಥಿನಿಯರ ಕಡೆಗೆ ಬಂದ. ಏನಾಗುತ್ತಿದೆ ಎಂದು ನಾವು ತಿಳಿದುಕೊಳ್ಳುವಷ್ಟರಲ್ಲಿ ಎಲ್ಲವೂ ನಡೆದುಹೋಗಿತ್ತು" ಎಂದು ರಾಜೇಶ್ವರಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

Raptadu School Teacher Recounts Andhra Chainsaw Shocker
LKG ವಿದ್ಯಾರ್ಥಿನಿ ಮೇಲೆ 3ನೇ ತರಗತಿ ಬಾಲಕನಿಂದ ಮಾರಣಾಂತಿಕ ಹಲ್ಲೆ; ಕಲ್ಲು, ಹೂ ಕುಂಡ ಎತ್ತಿಹಾಕಿ ರಾಕ್ಷಸೀಕೃತ್ಯ; Video

ಸಿಬ್ಬಂದಿಗೆ ಅವಕಾಶವೇ ಸಿಗಲಿಲ್ಲ

ದಾಳಿ ನಡೆದಾಗ ಗಾಯಗೊಂಡ ವಿದ್ಯಾರ್ಥಿನಿಯರಲ್ಲಿ ಒಬ್ಬಳು ಮುಂಭಾಗದ ಸಾಲಿನಲ್ಲಿ ಕುಳಿತಿದ್ದಳು. ದಾಳಿ ಅಷ್ಟು ವೇಗವಾಗಿ ನಡೆದಿದ್ದರಿಂದ ಮಧ್ಯಪ್ರವೇಶಿಸಲು ಸಿಬ್ಬಂದಿಗೆ ಹೆಚ್ಚಿನ ಅವಕಾಶವೇ ಸಿಗಲಿಲ್ಲ ಎಂದು ಶಿಕ್ಷಕಿ ಹೇಳಿದ್ದಾರೆ.

ಘಟನೆಯಿಂದ ಮಕ್ಕಳು ಭಯಭೀತರಾಗಿ ತರಗತಿಯೊಳಗೆ ದಿಕ್ಕಾಪಾಲಾಗಿ ಓಡತೊಡಗಿದರು. ಏನು ನಡೆಯಿತು ಎಂಬುದನ್ನು ತಕ್ಷಣವೇ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಮಕ್ಕಳು ಪಾಪ, ಎಲ್ಲೆಂದರಲ್ಲಿ ಓಡತೊಡಗಿದರು.

ಆತ ಎಷ್ಟು ಮಂದಿಯ ಮೇಲೆ ದಾಳಿ ಮಾಡಿದ ಎಂಬುದನ್ನೂ ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ನಾನೇ ಆಘಾತದಿಂದ ಹೊರಬಂದಿಲ್ಲ. ನಿಜವಾಗಿ ಏನಾಯಿತು ಎಂಬುದು ಇನ್ನೂ ಮನಸ್ಸಿಗೆ ಸರಿಯಾಗಿ ನಾಟಿಲ್ಲ" ಎಂದು ಶಿಕ್ಷಕಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X