ಪಾಕಿಸ್ತಾನವನ್ನು ಹಿಂದಿಕ್ಕಿದ ಭಾರತದ ನ್ಯೂಕ್ಲಿಯರ್ ಬಲ: ಇಂಡಿಯಾದ ಬತ್ತಳಿಕೆಯಲ್ಲಿ 190 ಅಣ್ವಸ್ತ್ರಗಳು; ಯಾವ ದೇಶದಲ್ಲಿ ಎಷ್ಟು ಅಣ್ವಸ್ತ್ರ?

ಜಾಗತಿಕ ಮಟ್ಟದಲ್ಲಿ ಶಸ್ತ್ರಾಸ್ತ್ರಗಳ ಮೇಲೆ ನಿಗಾ ಇಡುವ ಸ್ವೀಡನ್ ಮೂಲದ ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಮತ್ತು ಅಮೆರಿಕದ ಫೆಡರೇಶನ್ ಆಫ್ ಅಮೆರಿಕನ್ ಸೈಂಟಿಸ್ಟ್ಸ್ ಬಿಡುಗಡೆ ಮಾಡಿರುವ ಹೊಸ ವರದಿಯಲ್ಲಿ ಈ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಆ ಕುರಿತ ವರದಿ ಇಲ್ಲಿದೆ:
India nuclear warheads
ಪಾಕಿಸ್ತಾನವನ್ನು ಹಿಂದಿಕ್ಕಿದ ಭಾರತದ ನ್ಯೂಕ್ಲಿಯರ್ ಬಲ!Online Desk
Updated on

ನವದೆಹಲಿ: ಶಾಂತಿ ಪ್ರಿಯ ದೇಶವಾದ ಭಾರತ, ವಿಶ್ವದಲ್ಲೇ ಭೀಕರ ಅಸ್ತ್ರವಾದ ಅಣ್ವಸ್ತ್ರದ (ಪರಮಾಣು ಸಿಡಿತಲೆ) ದಾಸ್ತಾನುವನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಳ ಮಾಡಿಕೊಳ್ಳುತಿದೆ. ಎಷ್ಟರ ಮಟ್ಟಿಗೆ ಅಂದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ಸಾಂಪ್ರದಾಯಿಕ ವೈರಿ ಪಾಕಿಸ್ತಾನಕ್ಕಿಂತಲೂ ಹಚ್ಚಿನ ಅಣ್ವಸ್ತ್ರದ ದಾಸ್ತಾನುವನ್ನು ಇಟ್ಟುಕೊಂಡಿದೆ. ಜಾಗತಿಕ ಮಟ್ಟದಲ್ಲಿ ಶಸ್ತ್ರಾಸ್ತ್ರಗಳ ಮೇಲೆ ನಿಗಾ ಇಡುವ ಸ್ವೀಡನ್ ಮೂಲದ ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಮತ್ತು ಅಮೆರಿಕದ ಫೆಡರೇಶನ್ ಆಫ್ ಅಮೆರಿಕನ್ ಸೈಂಟಿಸ್ಟ್ಸ್ ಬಿಡುಗಡೆ ಮಾಡಿರುವ ಹೊಸ ವರದಿಯಲ್ಲಿ ಈ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಹಾಗಾದ್ರೆ, ಭಾರತದ ಬಳಿ ಎಷ್ಟಿದೆ ಅಣ್ವಸ್ತ್ರ?

ವರದಿಯ ಪ್ರಕಾರ, ಭಾರತವು ಪ್ರಸ್ತುತ 190 ಪರಮಾಣು ಸಿಡಿತಲೆಗಳನ್ನು (Nuclear Warheads) ಹೊಂದಿದೆ. ಇತ್ತ, ಪಾಕಿಸ್ತಾನದ ಬಳಿ 170 ಅಣ್ವಸ್ತ್ರಗಳಿವೆ. ಈ ಮೂಲಕ ಭಾರತವು ಪಾಕಿಸ್ತಾನಕ್ಕಿಂತ 20 ಅಣ್ವಸ್ತ್ರಗಳನ್ನು ಹೆಚ್ಚು ಹೊಂದುವ ಮೂಲಕ ಮುನ್ನಡೆ ಸಾಧಿಸಿದೆ. ಅದರಲ್ಲೂ,  ಭಾರತದ ಅಣ್ವಸ್ತ್ರಗಳ ಸಂಖ್ಯೆ ಹೆಚ್ಚುತ್ತಿರುವ ಪರಿಯನ್ನು ನೋಡಿದರೆ, ಜಾಗತಿಕವಾಗಿ 225 ಅಣ್ವಸ್ತ್ರಗಳನ್ನು ಹೊಂದಿರುವ ಯುನೈಟೆಡ್ ಕಿಂಗ್‌ಡಮ್ ದೇಶದ ದಾಸ್ತಾನನ್ನು ಭಾರತ ಶೀಘ್ರದಲ್ಲೇ ಹಿಂದಿಕ್ಕುವ ಸಾಧ್ಯತೆ ಇದೆ. ಇನ್ನು, ಭಾರತದ ಬಳಿ ಸದ್ಯ 160ಕ್ಕೂ ಹೆಚ್ಚು ಸಕ್ರಿಯ ಲಾಂಚರ್‌ಗಳಿದ್ದು, ಉತ್ಪಾದನಾ ಹಂತದಲ್ಲಿರುವ ಹೊಸ ಕ್ಷಿಪಣಿಗಳಿಗಾಗಿ ಹೆಚ್ಚುವರಿ 30 ಸಿಡಿತಲೆಗಳನ್ನು ಸಿದ್ಧಪಡಿಸಲಾಗಿದೆ.

ಬದಲಾದ ಕಾರ್ಯತಂತ್ರ:

ಭಾರತ ತನ್ನ ಅಣ್ವಸ್ತ್ರದ ದಾಸ್ತಾನುವನ್ನು ಹೆಚ್ಚಿಸಿಕೊಳ್ಳೋಕೆ ಬಹು ದೊಡ್ಡ ಕಾರಣ ಚೀನಾ! ಹೌದು, ಸಾಮಾನ್ಯವಾಗಿ, ಭಾರತವು ಇಷ್ಟು ದಿನ ಪಾಕಿಸ್ತಾನವನ್ನು ಗಮನದಲ್ಲಿಟ್ಟುಕೊಂಡು ತನ್ನ ರಕ್ಷಣಾ ವ್ಯವಸ್ಥೆ ರೂಪಿಸುತ್ತಿತ್ತು. ಆದರೆ, ಈಗ ಚೀನಾದ ಬೆದರಿಕೆಯನ್ನು ಎದುರಿಸಲು ಚೀನಾದ ಯಾವುದೇ ಮೂಲೆಯನ್ನು ತಲುಪಬಲ್ಲ, ಜಲ, ನೆಲ ಮತ್ತು ಆಕಾಶ ಮೂರೂ ಮಾರ್ಗಗಳಿಂದ ದಾಳಿ ನಡೆಸಬಲ್ಲ ಪರಮಾಣು ತ್ರಿಕೋನ ಸಾಮರ್ಥ್ಯದ ಆಧುನೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಜೊತೆಗೆ, ಈಗಾಗಲೇ,  ಭಾರತವು ಮೊದಲಿನಿಂದಲೂ ‘ನೋ ಫಸ್ಟ್ ಯೂಸ್’ (No First Use - ಅಣ್ವಸ್ತ್ರವನ್ನು ಮೊದಲು ಬಳಸುವುದಿಲ್ಲ) ಎಂಬ ಜವಾಬ್ದಾರಿಯುತ ರಕ್ಷಣಾ ನೀತಿಯನ್ನು ಪಾಲಿಸಿಕೊಂಡು ಬರುತ್ತಿದೆ.

India nuclear warheads
'Bahrain ಅಮೆರಿಕಾ ಸೇನಾನೆಲೆ ಸಂಪೂರ್ಣ ಧ್ವಂಸ': ಇರಾನ್ ದಾಳಿ ಭೀಕರತೆ ಒಪ್ಪಿಕೊಂಡ ವಾಷಿಂಗ್ಟನ್..!

ಹಾಗಾದ್ರೆ, ಯಾವ ದೇಶದ ಬಳಿ ಎಷ್ಟಿವೆ ಅಣ್ವಸ್ತ್ರಗಳು?

ರಷ್ಯಾ: 5,420, ಅಮೆರಿಕ: 5,042, ಚೀನಾ: 620, ಫ್ರಾನ್ಸ್: 370,ಬ್ರಿಟನ್: 225, ಭಾರತ: 190, ಪಾಕಿಸ್ತಾನ: 170, ಇಸ್ರೇಲ್: 90, ಉತ್ತರ ಕೊರಿಯಾ: 50 - 60. ಈ ಮೂಲಕ ವಿಶ್ವದ ಒಟ್ಟು ಅಣ್ವಸ್ತ್ರಗಳಲ್ಲಿ ಶೇ. 85 ಕ್ಕಿಂತ ಹೆಚ್ಚು ಪಾಲು ರಷ್ಯಾ ಮತ್ತು ಅಮೆರಿಕ ದೇಶಗಳ ಬಳಿಯೇ ಇವೆ. ಆದರೆ, ಈ ಪೈಕಿ, ಇಸ್ರೇಲ್ ತನ್ನ ಬಳಿ ಅಣ್ವಸ್ತ್ರ ಇರುವುದನ್ನು ಅಧಿಕೃತವಾಗಿ ಒಪ್ಪಿಕೊಳ್ಳುವುದೂ ಇಲ್ಲ, ನಿರಾಕರಿಸುವುದೂ ಇಲ್ಲ. ಆದರೆ ಜಾಗತಿಕ ರಕ್ಷಣಾ ಸಂಸ್ಥೆಗಳು ಆ ದೇಶದ ಬಳಿ ಕನಿಷ್ಠ 90 ಅಣ್ವಸ್ತ್ರ ಇರುವುದನ್ನು ಖಚಿತಪಡಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com