ಜೈಪುರದಲ್ಲಿ ಘೋರ ಕೃತ್ಯ: ಪತ್ನಿ, ಮೂವರು ಹೆಣ್ಣು ಮಕ್ಕಳ ತಲೆಯನ್ನು ಬ್ರಿಕ್'ನಿಂದ ಜಜ್ಜಿ ಕೊಂದ ಕ್ರೂರಿ!

ಮೃತರನ್ನು ಆರೋಪಿಯ ಪತ್ನಿ, 40 ವರ್ಷದ ಗೀತಾ ಝಾ ಮತ್ತು ಅವರ ಮೂವರು ಪುತ್ರಿಯರಾದ ನಂದಿನಿ, ಗಿರೀಶಾ ಹಾಗೂ ರಾಧಿಕಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Jaipur: Man Smashes Wife, 3 Daughters' Heads With A Brick, Killing All 4
ಆರೋಪಿ ರಾಹುಲ್ - ಪತ್ನಿ ಗೀತಾ ಝಾ
Updated on

ಜೈಪುರ: ವ್ಯಕ್ತಿಯೊಬ್ಬ, ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳು ಮನೆಯಲ್ಲಿ ನಿದ್ರಿಸುತ್ತಿದ್ದಾಗ ರಹಸ್ಯವಾಗಿ ಬಂದು ಇಟ್ಟಿಗೆ(ಬ್ರಿಕ್)ಯಿಂದ ಅವರ ತಲೆಗೆ ಪದೇ ಪದೇ ಹೊಡೆದು ನಾಲ್ವರನ್ನೂ ಹತ್ಯೆ ಮಾಡಿದ್ದಾನೆ ಎಂದು ಜೈಪುರ ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಆರೋಪಿಯ ಪತ್ನಿ, 40 ವರ್ಷದ ಗೀತಾ ಝಾ ಮತ್ತು ಅವರ ಮೂವರು ಪುತ್ರಿಯರಾದ ನಂದಿನಿ, ಗಿರೀಶಾ ಹಾಗೂ ರಾಧಿಕಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪತ್ನಿ ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾಪಿ ಪತಿಯನ್ನು ರಾಹುಲ್ ಝಾ ಎಂದು ಗುರುತಿಸಲಾಗಿದ್ದು, ಮೃತ ಮೂವರು ಮಕ್ಕಳ ವಯಸ್ಸು 17 ರಿಂದ 23 ವರ್ಷಗಳ ನಡುವೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Jaipur: Man Smashes Wife, 3 Daughters' Heads With A Brick, Killing All 4
'ಶೀಘ್ರದಲ್ಲೇ ಶುಗರ್ ಡ್ಯಾಡಿಯನ್ನು ಕೊಲ್ಲುತ್ತೇನೆ': ಪತ್ನಿ ಕೊಂದು ತಲೆಯನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಪಾಪಿ, ಪೊಲೀಸರ ಮುಂದೆಯೇ ಬೆದರಿಕೆ!

ಘೋರ ಕೃತ್ಯದ ನಂತರ ರಾಹುಲ್ ಝಾ ಪರಾರಿಯಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಸರಣಿ ಹತ್ಯೆ ನಡೆದಂತೆ ತೋರುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಭೀಕರ ಹತ್ಯೆಗಳ ವಿಷಯ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾವುದೇ ಚಟುವಟಿಕೆ ಕಂಡುಬರದಿದ್ದಾಗ ನೆರೆಹೊರೆಯವರು ಮತ್ತು ಸಂಬಂಧಿಕರಿಗೆ ಅನುಮಾನ ಬಂದಿದೆ.

ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಗೋವಿಂದಪುರದಲ್ಲಿರುವ ಆ ಮನೆಯಲ್ಲಿ ಆರೋಪಿಯ 85 ವರ್ಷದ ತಂದೆ ಮಾತ್ರ ಇದ್ದರು.

ಪೊಲೀಸರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (FSL) ತಂಡವು ಮನೆಗೆ ತೆರಳಿ, ಘಟನಾ ಸ್ಥಳವನ್ನು ಪರಿಶೀಲಿಸಿದ್ದಾರೆ.

ಪತ್ನಿ ಮತ್ತು ಮಕ್ಕಳು ನಿದ್ರಿಸುತ್ತಿದ್ದಾಗ ಕಲ್ಲಿನಿಂದ ಅವರ ತಲೆಯನ್ನು ಜಜ್ಜಿ ಹತ್ಯೆ ಮಾಡಿದ್ದಾನೆ. ಕೊಲೆ ನಂತರ ಸ್ಥಳದಲ್ಲಿ ಹರಡಿದ್ದ ರಕ್ತವನ್ನು ಬಟ್ಟೆಯಿಂದ ಒರೆಸಿ ಆರೋಪಿ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com