'ಒಬ್ಬ ಭಾರತೀಯನಾಗಿ ಇದಕ್ಕಿಂತ ಹೆಚ್ಚಿನ ಹೆಮ್ಮೆ ಹಿಂದೆಂದೂ ಆಗಿಲ್ಲ': ಪ್ರಧಾನಿ ಮೋದಿಯನ್ನು ಕೊಂಡಾಡಿದ ರವಿ ಶಾಸ್ತ್ರಿ!

ನವದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಅಂತಿಮ ದಿನದಂದು, ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಮತ್ತು ಪಾಲುದಾರರು ಮುಕ್ತ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.
Ravi Shastri
ರವಿ ಶಾಸ್ತ್ರಿ
Updated on

ಭಾರತದ ಮಾಜಿ ಕ್ರಿಕೆಟಿಗ ಮತ್ತು ಖ್ಯಾತ ವೀಕ್ಷಕ ವಿವರಣೆಗಾರ ರವಿ ಶಾಸ್ತ್ರಿ ಅವರು ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ. 'ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆ ನಿರ್ಮಾಣ' ಎಂಬ ವಿಷಯದೊಂದಿಗೆ, ಭಾರತದ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 12-13 ರಂದು 18ನೇ ಬ್ರಿಕ್ಸ್ ಶೃಂಗಸಭೆಯನ್ನು ನಡೆಸಲಾಗುತ್ತಿದೆ. ಶಾಸ್ತ್ರಿ ಅವರು 'ಎಕ್ಸ್' (X) ನಲ್ಲಿ ಫೋಟೊವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಎರಡು ದಿನಗಳ ಈ ಶೃಂಗಸಭೆ ನಡೆಯುತ್ತಿರುವ ಸ್ಥಳವಾದ 'ಭಾರತ ಮಂಟಪ'ದಲ್ಲಿ ಪ್ರಧಾನಿ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸಸಿ ನೆಡುತ್ತಿರುವುದನ್ನು ಕಾಣಬಹುದು.

'ಒಬ್ಬ ಭಾರತೀಯನಾಗಿ ಇದಕ್ಕಿಂತ ಹೆಚ್ಚಿನ ಹೆಮ್ಮೆ ಎಂದಿಗೂ ಅನಿಸಿಲ್ಲ. ಅಧ್ಯಕ್ಷ ಪುಟಿನ್, ಅಧ್ಯಕ್ಷ ಷಿ ಮತ್ತು ನಮ್ಮ ಅದ್ಭುತ ಪ್ರಧಾನಿ ನರೇಂದ್ರ ಮೋದಿ - ಇವರೆಲ್ಲರೂ ಒಟ್ಟಾಗಿ 'ಭಾರತಮಾತೆ'ಯ ಮಡಿಲಲ್ಲಿ. ಹಿಂದೆಂದೂ ಕಾಣದಂತಹ ಅಂತರರಾಷ್ಟ್ರೀಯ ರಾಜತಾಂತ್ರಿಕತೆ. ನಿಮಗೆ ಅಭಿನಂದನೆಗಳು, ಮೋದಿ ಜೀ' ಎಂದು ಬರೆದಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಅಂತಿಮ ದಿನದಂದು, ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಮತ್ತು ಪಾಲುದಾರರು ಮುಕ್ತ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ; ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಏಳು ದೇಶಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾ, ಕಜಕಿಸ್ತಾನ್, ಫಿಲಿಪ್ಪೀನ್ಸ್, ಈಜಿಪ್ಟ್, ಬುರುಂಡಿ, ಉಗಾಂಡಾ ಮತ್ತು ನೈಜೀರಿಯಾ ದೇಶಗಳ ನಾಯಕರನ್ನು ಭೇಟಿಯಾಗಲಿದ್ದಾರೆ.

ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರನ್ನು ಭೇಟಿಯಾಗಲಿದ್ದಾರೆ. ದಕ್ಷಿಣ ಆಫ್ರಿಕಾವು ಬ್ರಿಕ್ಸ್‌ನ ಪ್ರಮುಖ ಭಾಗವಾಗಿದೆ. ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಶನಿವಾರ 'ಅಂತರ್ಗತ ಜಾಗತಿಕ ಆಡಳಿತ ಮತ್ತು ಬಹುಪಕ್ಷೀಯತೆಯ ಬಲವರ್ಧನೆ' ಕುರಿತ ಬ್ರಿಕ್ಸ್ ಅಧಿವೇಶನದಲ್ಲಿ ಭಾಗವಹಿಸಿದ್ದರು ಮತ್ತು ನವದೆಹಲಿಯಲ್ಲಿ ನಡೆದ 'ಭಾರತ್ ಇನ್ನೋವೇಟ್ಸ್' (Bharat Innovates) ಪ್ರದರ್ಶನಕ್ಕೆ ಭೇಟಿ ನೀಡಿದ್ದರು.

Ravi Shastri
'ಗ್ಲೋಬಲ್ ಸೌತ್' ನಿಯಮ-ರೂಪಿಸುವ ಶಕ್ತಿಯಾಗಬೇಕು, ಅದರ ನೇತೃತ್ವ ವಹಿಸಲು ಭಾರತ ಸಿದ್ಧ": BRICS ಶೃಂಗಸಭೆಯಲ್ಲಿ ಪ್ರಧಾನಿ ಮೋದಿ; Video

ಇದಕ್ಕೂ ಮುನ್ನ ಶನಿವಾರ, ಬ್ರಿಕ್ಸ್ ನಾಯಕರು 'ನವದೆಹಲಿ ಘೋಷಣೆ 2026' ಅನ್ನು ಸರ್ವಾನುಮತದಿಂದ ಅಂಗೀಕರಿಸಿದರು. ಈ ಫಲಿತಾಂಶವು 'ವ್ಯಾಪಕ ವ್ಯಾಪ್ತಿ ಮತ್ತು ಬಲವಾದ ಉದ್ದೇಶ' ಹೊಂದಿರುವ ಬ್ರಿಕ್ಸ್‌ನ ಪ್ರತಿಬಿಂಬವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.

ಈ ಗುಂಪು ಸದ್ಯ 11 ಸದಸ್ಯ ರಾಷ್ಟ್ರಗಳನ್ನು (ಬ್ರೆಜಿಲ್, ಚೀನಾ, ಈಜಿಪ್ಟ್, ಇಥಿಯೋಪಿಯಾ, ಭಾರತ, ಇಂಡೋನೇಷ್ಯಾ, ಇರಾನ್, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ ಮತ್ತು ಯುಎಇ) ಹಾಗೂ 10 ಪಾಲುದಾರ ರಾಷ್ಟ್ರಗಳನ್ನು (ನೈಜೀರಿಯಾ, ಬೆಲಾರಸ್, ಬೊಲಿವಿಯಾ, ಕ್ಯೂಬಾ, ಕಜಕಿಸ್ತಾನ್, ಮಲೇಷ್ಯಾ, ಥೈಲ್ಯಾಂಡ್, ಉಗಾಂಡಾ, ಉಜ್ಬೇಕಿಸ್ತಾನ್ ಮತ್ತು ವಿಯೆಟ್ನಾಂ) ಒಳಗೊಂಡಿದೆ.

ತಮ್ಮ ಆಟದ ಅವಧಿಯಲ್ಲಿ 80 ಟೆಸ್ಟ್ ಮತ್ತು 150 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಶಾಸ್ತ್ರಿ, ವ್ಯಾಖ್ಯಾನಕಾರರಾಗಿ ಹಾಗೂ ಪುರುಷರ ರಾಷ್ಟ್ರೀಯ ತಂಡದ ಮಾಜಿ ಮುಖ್ಯ ಕೋಟ್ ಆಗಿ ಕಾರ್ಯನಿರ್ವಹಿಸುವ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ಪ್ರಮುಖ ಧ್ವನಿಯಾಗಿ ಮುಂದುವರಿದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com