ಅಭಿಮಾನಿಯ ಕಾಲಿನ ಮೇಲೆ ಹತ್ತಿದ ಕಾರು: ತಾಳ್ಮೆ ಕಳೆದುಕೊಂಡು ಚಾಲಕನಿಗೆ ಹಿಗ್ಗಾಮುಗ್ಗಾ ಬೈದ ಸಲ್ಮಾನ್ ಖಾನ್! video

ನೂಕು ನುಗ್ಗಲಿನ ವೇಳೆ ಅವರ ಕಾರು ಅಭಿಮಾನಿಯೊಬ್ಬರ ಮೇಲೆ ಹರಿದಿದ್ದಕ್ಕೆ ತಾಳ್ಮೆ ಕಳೆದುಕೊಂಡ ಸಲ್ಮಾನ್ ಖಾನ್, ತನ್ನ ಕಾರು ಚಾಲಕನಿಗೆ ಹಿಗ್ಗಾಮುಗ್ಗಾ ಬೈದಿರುವ ಘಟನೆ ನಡೆದಿದೆ.
Salman Khan
ಸಲ್ಮಾನ್ ಖಾನ್
Updated on

ಮುಂಬೈ: ಕಳೆದ ಕೆಲವು ವರ್ಷಗಳಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಟನೆಯ ಹಲವು ಸಿನಿಮಾಗಳು ಪ್ರೇಕ್ಷಕರ ನಿರೀಕ್ಷೆ ತಲುಪಲು ವಿಫಲವಾಗಿವೆ. ಹಾಗಂತ ಅವರಿಗಿರುವ ಕ್ರೇಜ್ ಮತ್ತು ಬೇಡಿಕೆಯೇನು ಕಮ್ಮಿಯಾಗಿಲ್ಲ. ಮುಂಬೈ ಇದಕ್ಕೆ ಸಾಕ್ಷಿಯಾಯಿತು.

ನೂಕು ನುಗ್ಗಲಿನ ವೇಳೆ ಅವರ ಕಾರು ಅಭಿಮಾನಿಯೊಬ್ಬರ ಮೇಲೆ ಹರಿದಿದ್ದಕ್ಕೆ ತಾಳ್ಮೆ ಕಳೆದುಕೊಂಡ ಸಲ್ಮಾನ್ ಖಾನ್, ತನ್ನ ಕಾರು ಚಾಲಕನಿಗೆ ಹಿಗ್ಗಾಮುಗ್ಗಾ ಬೈದಿರುವ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಣೇಶೋತ್ಸವ ಅಂಗವಾಗಿ ರಾಜಕಾರಣಿ ಆಶಿಶ್ ಶೆಲಾರ್ ಅವರ ನಿವಾಸಕ್ಕೆ ಗಣಪತಿ ದರ್ಶನಕ್ಕಾಗಿ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.

ಗಣೇಶೋತ್ಸವದ ಕಾರ್ಯಕ್ರಮ ಮುಗಿಸಿ ಸಲ್ಮಾನ್ ಖಾನ್ ಹೊರಬರುತ್ತಿದ್ದಂತೆ, ಅವರನ್ನು ಹತ್ತಿರದಿಂದ ನೋಡಲು ಹಾಗೂ ಫೋಟೋ ಕ್ಲಿಕ್ಕಿಸಿಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.

ಆರಂಭದಲ್ಲಿ ಸಲ್ಮಾನ್ ಖಾನ್ ಕೈಮುಗಿದು ದಾರಿ ಬಿಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಪರಿಸ್ಥಿತಿ ಹದಗೆಟ್ಟಾಗ, ಭದ್ರತಾ ಸಿಬ್ಬಂದಿಯ ನೆರವಿನಿಂದ ಹೆಣಗಾಡುತ್ತಾ ಕಾರಿನೊಳಗೆ ಕುಳಿತಿದ್ದಾರೆ. ಈ ಗೊಂದಲದ ನಡುವೆ ಚಾಲಕ ಕಾರನ್ನು ಮುಂದೆ ಚಲಾಯಿಸಲು ಯತ್ನಿಸಿದಾಗ, ಅಭಿಮಾನಿಯೊಬ್ಬರ ಕಾಲು ಕಾರಿನ ಚಕ್ರದ ಅಡಿಗೆ ಸಿಲುಕಿದೆ.

ನೋವಿನಿಂದ ಆ ಅಭಿಮಾನಿ ಕಿರುಚಾಡಿದಾಗ ಹಾಗೂ ಅಲ್ಲಿದ್ದ ಫೋಟೋಗ್ರಾಫರ್‌ಗಳು ಕಾರನ್ನು ಸ್ವಲ್ಪ ಹಿಂದೆ ತೆಗೆಯುವಂತೆ ಕೂಗಿಕೊಂಡರು.ಇದನ್ನು ಕಂಡು ತೀವ್ರ ಆಕ್ರೋಶಗೊಂಡ ಸಲ್ಮಾನ್ ಖಾನ್ ಅವರು ಕಾರಿನಲ್ಲೇ ಕುಳಿತು ಚಾಲಕನ ಕೈಗೆ ಹೊಡೆದು, ಗದರಿದ್ದಾರೆ.

Salman Khan
ಮುಂಬೈ: ಸಲ್ಮಾನ್ ಖಾನ್ ಬಾಂದ್ರಾ ನಿವಾಸದ ಹೊರಗೆ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಕಾನ್ಸ್‌ಟೇಬಲ್ ಹಠಾತ್ ಸಾವು!

ತಕ್ಷಣವೇ ಕಾರನ್ನು ಜನರಿಂದ ದೂರ ಒಯ್ಯುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಸಲ್ಮಾನ್ ಖಾನ್ ತಮ್ಮ ಚಾಲಕನಿಗೆ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com