'ಹನುಮಾನ್ ಅಂಶ್' ಚಿತ್ರತಂಡ ಭೇಟಿ; ಚಿತ್ರದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ ಅಮಿತ್ ಶಾ!

'ಇಂದು ದೆಹಲಿಯಲ್ಲಿ ಬಾಬಾ ನೀಮ್ ಕರೋಲಿ ಜಿ ಅವರ ಜೀವನವನ್ನು ಆಧರಿಸಿದ 'ಹನುಮಾನ್ ಅಂಶ್' ಚಿತ್ರದ ಕಲಾವಿದರನ್ನು ಭೇಟಿಯಾದೆ' ಎಂದು ಶಾ ಅವರು 'ಎಕ್ಸ್'ನಲ್ಲಿ ತಿಳಿಸಿದ್ದಾರೆ.
Amit Shah meets 'Hanuman Ansh' cast
'ಹನುಮಾನ್ ಅಂಶ್' ಚಿತ್ರತಂಡ ಭೇಟಿಯಾದ ಗೃಹ ಸಚಿವ ಅಮಿತ್ ಶಾ
Updated on

ನವದೆಹಲಿ: ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದ 'ಹನುಮಾನ್ ಅಂಶ್' ಚಿತ್ರದ ಯಶಸ್ಸಿಗಾಗಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಚಿತ್ರತಂಡವನ್ನು ಭೇಟಿ ಮಾಡಿ ಅಭಿನಂದಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈದ್ಯ ಹಾಗೂ ಚಿತ್ರ ನಿರ್ದೇಶಕ ವಿಶಾಲ್ ಚತುರ್ವೇದಿ ಮತ್ತು ನಟ ಶೋಭಿನವ್ ಸತ್ಯಾ ಸೇರಿದಂತೆ ಚಿತ್ರತಂಡದ ಸದಸ್ಯರು ಇಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದರು.

'ಇಂದು ದೆಹಲಿಯಲ್ಲಿ ಬಾಬಾ ನೀಮ್ ಕರೋಲಿ ಜಿ ಅವರ ಜೀವನವನ್ನು ಆಧರಿಸಿದ 'ಹನುಮಾನ್ ಅಂಶ್' ಚಿತ್ರದ ಕಲಾವಿದರನ್ನು ಭೇಟಿಯಾದೆ' ಎಂದು ಶಾ ಅವರು 'ಎಕ್ಸ್'ನಲ್ಲಿ ತಿಳಿಸಿದ್ದಾರೆ.

'ಬಾಬಾ ನೀಮ್ ಕರೋಲಿ ಜಿ ಅವರ ಆಧ್ಯಾತ್ಮಿಕ ಪಯಣ ಮತ್ತು ಹನುಮಂತನ ಮೇಲಿನ ಅವರ ಅಪ್ರತಿಮ ಭಕ್ತಿಯನ್ನು ಚಿತ್ರದ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಈ ಶ್ಲಾಘನೀಯ ಪ್ರಯತ್ನಕ್ಕಾಗಿ ಇಡೀ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು' ಎಂದು ಅವರು ಹೇಳಿದರು.

'ಹನುಮಾನ್ ಅಂಶ್' ಆಗಸ್ಟ್ 7 ರಂದು ಬಿಡುಗಡೆಯಾದಾಗ ಬಾಕ್ಸ್ ಆಫೀಸ್‌ನಲ್ಲಿ ಕೇವಲ 10 ಲಕ್ಷ ರೂ.ಗಳ ಆರಂಭಿಕ ಗಳಿಕೆಯನ್ನು ಕಂಡಿತ್ತು. ಆದರೆ, ನಂತರ ಚಿತ್ರ ಉತ್ತಮ ಪ್ರದರ್ಶನ ನೀಡುತ್ತಾ ಸಾಗಿದೆ. ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಈ ಚಿತ್ರವು ಇದೀಗ ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ₹347.05 ಕೋಟಿ ಗಳಿಕೆ ಕಂಡಿದೆ.

Amit Shah meets 'Hanuman Ansh' cast
'ಹನುಮಾನ್ ಅಂಶ್' ಚಿತ್ರವನ್ನು 15 ಬಾರಿ ವೀಕ್ಷಿಸಿದ ನೀಮ್ ಕರೋಲಿ ಬಾಬಾ ಪುತ್ರಿ, ಪ್ರತಿ ಬಾರಿಯೂ ಕಣ್ಣೀರಾಕಿದರು': ನಿರ್ಮಾಪಕಿ ರಾಗಿಣಿ ಸೋನಾ

ನೀಮ್ ಕರೋಲಿ ಬಾಬಾ ಅವರ ಜೀವನಗಾಥೆಯನ್ನು ಆಧರಿಸಿದ ಈ ಚಿತ್ರವನ್ನು 2 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ಇದು ಬಾಕ್ಸ್ ಆಫೀಸ್‌ನಲ್ಲಿ ಅನಿರೀಕ್ಷಿತ ಯಶಸ್ಸನ್ನು ಸಾಧಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com