

ದಹಾನು: ಮಹಾರಾಷ್ಟ್ರದ ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಹಾಲಿನ ಟ್ಯಾಂಕರ್ ಪಲ್ಟಿಯಾಗಿದ್ದು, ನೂರಾರು ಲೀಟರ್ ಹಾಲು ರಸ್ತೆ ಪಾಲಾಗಿದೆ.
ಲೀಟರ್‌ಗಟ್ಟಲೆ ಹಾಲು ಸಾಗಿಸುತ್ತಿದ್ದ ಟ್ಯಾಂಕರ್, ಇಂದು ದಹನು ತಾಲ್ಲೂಕಿನ ಟವಾ ಗ್ರಾಮದ ಬಳಿ ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ.
ಅಪಘಾತದ ಪರಿಣಾಮ ಟ್ಯಾಂಕರ್‌ನಿಂದ ಹಾಲು ಸೋರಿಕೆಯಾಗಿ ದೊಡ್ಡ ಪ್ರಮಾಣದ ಹಾಲು ರಸ್ತೆಗೆ ಹರಿದಿದೆ. ಹಾಲಿನ ಹೊಳೆಯನ್ನೇ ಕಂಡ ಸ್ಥಳೀಯರು ಹಾಗೂ ವಾಹನ ಸವಾರರು ಬಾಟಲಿ, ಕ್ಯಾನ್ ಹಿಡಿದು ಸ್ಥಳಕ್ಕೆ ಧಾವಿಸಿ ಹಾಲು ಸಂಗ್ರಹಿಸಿದ್ದಾರೆ. ಕೆಲವರು ರಸ್ತೆಯಲ್ಲಿ ಹರಿದ ಹಾಲನ್ನು ಸಂಗ್ರಹಿಸಿಕೊಂಡಿದ್ದಾರೆ.
ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾದ ಕಾರಣ ಮುಂಬೈ ಕಡೆಗಿನ ಹೆದ್ದಾರಿಯಲ್ಲಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ವಾಹನಗಳ ಓಡಾಟವೂ ನಿಧಾನಗೊಂಡಿತ್ತು. ಸದ್ಯ ಹೆದ್ದಾರಿ ಪೊಲೀಸರು ಪಲ್ಟಿಯಾದ ಟ್ಯಾಂಕರ್‌ನ್ನು ರಸ್ತೆಯಿಂದ ತೆರವುಗೊಳಿಸುವ ಕೆಲಸ ಮಾಡುತ್ತಿದ್ದಾರೆ.