'ಉತ್ತರ ಪ್ರದೇಶ 4 ರಾಜ್ಯಗಳಾಗಿ ವಿಭಜನೆಯಾಗಲಿದೆ'; ಇದು ಪ್ರಧಾನಿ ಮೋದಿ ಭರವಸೆ ಎಂದ ಸಚಿವ!

ರಾಜ್‌ಭರ್‌ಗಳು ಅತ್ಯಂತ ಹಿಂದುಳಿದ ಜಾತಿಗಳ ಪೈಕಿ ಒಂದೆಂದು ಪರಿಗಣಿಸಲ್ಪಟ್ಟಿದ್ದು, ಪೂರ್ವ ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಗಮನಾರ್ಹ ಪ್ರಭಾವವನ್ನು ಹೊಂದಿದ್ದಾರೆ.
SBSP chief Om Prakash Rajbhar and his son Arvind with Prime Minister Narendra Modi
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಎಸ್‌ಬಿಎಸ್‌ಪಿ (SBSP) ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಮತ್ತು ಅವರ ಪುತ್ರ ಅರವಿಂದ್.Photo | ANI
Updated on

ಉತ್ತರ ಪ್ರದೇಶದ ವಿಭಜನೆಗೆ ಸಂಬಂಧಿಸಿದ ಸುಮಾರು ಎರಡು ದಶಕಗಳಷ್ಟು ಹಳೆಯ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿರುವ ರಾಜ್ಯ ಸಚಿವ ಹಾಗೂ ಎಸ್‌ಬಿಎಸ್‌ಪಿ (SBSP) ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್, ಜಾತಿ ಆಧಾರಿತ ಗಣತಿಯ ನಂತರ ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಈ ರಾಜ್ಯವನ್ನು ನಾಲ್ಕು ಭಾಗಗಳಾಗಿ ವಿಭಜಿಸಲಾಗುವುದು ಎಂದು ಹೇಳಿದ್ದಾರೆ.

ಭಾನುವಾರ ದಿಯೋರಿಯಾದಲ್ಲಿ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ) ಆಯೋಜಿಸಿದ್ದ 'ಸಾಮಾಜಿಕ ಸಮ್ರಸ್ತಾ ಮಹಾ ರ್ಯಾಲಿ'ಯಲ್ಲಿ ಮಾತನಾಡಿದ ರಾಜ್‌ಭರ್, ಜಾತಿ ಆಧಾರಿತ ಗಣತಿ ನಂತರ ರಾಜ್ಯದ ವಿಭಜನೆ ನಡೆಯಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ತಮಗೆ 'ಭರವಸೆ' ನೀಡಿದ್ದಾರೆ ಎಂದು ಪ್ರತಿಪಾದಿಸಿದರು.

'ಶೇ 27ರಷ್ಟು ಮೀಸಲಾತಿ ವಿಷಯದಲ್ಲಿ ನಾವು ನಿಮಗೆ ಭರವಸೆ ನೀಡಲು ಬಯಸುತ್ತೇವೆ. ಈ ಬಗ್ಗೆ ನಾನು ಪ್ರಧಾನ ಮಂತ್ರಿಯವರೊಂದಿಗೆ ಮಾತನಾಡಿದ್ದೇನೆ' ಎಂದು ಉತ್ತರ ಪ್ರದೇಶದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ರಾಜಕೀಯ ನಾಯಕ ರಾಜ್‌ಭರ್, ದಿಯೋರಿಯಾದಲ್ಲಿ ಮೋದಿ ಜೊತೆಗೆ ನಡೆದಿದೆ ಎಂದು ತಾವು ಹೇಳುವ ಸಂಭಾಷಣೆಯನ್ನು ವಿವರಿಸುತ್ತಾ ತಿಳಿಸಿದರು.

'ಅವರು (ಮೋದಿ) 'ಓಂ ಪ್ರಕಾಶ್ ಜೀ, ನಿಮ್ಮ ವಾದ ಸಮಂಜಸವಾಗಿದೆ, ಆದರೆ ಕೆಲವರು ಅದನ್ನು ವಿರೋಧಿಸುತ್ತಿದ್ದಾರೆ' ಎಂದು ಹೇಳಿದರು. ನಾವು ಹೇಗೆ ಮುಂದುವರಿಯಬಹುದು ಎಂದು ನಾನು ಅವರನ್ನು ಕೇಳಿದೆ, ಅದಕ್ಕೆ ಅವರು, 'ನಾನು ಜಾತಿ ಗಣತಿಯನ್ನು ನಡೆಸುತ್ತೇನೆ; ಜಾತಿಗಳ ಲೆಕ್ಕ ಸಿಕ್ಕಿದ ನಂತರ, ವಿಂಗಡಣೆ ಮಾಡುವುದರಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಜಾತಿ ಗಣತಿಯ ನಂತರವೇ ನಾವು ವಿಂಗಡಣೆಯನ್ನು ಮಾಡುತ್ತೇವೆ' ಎಂದು ಉತ್ತರಿಸಿದರು.

SBSP chief Om Prakash Rajbhar and his son Arvind with Prime Minister Narendra Modi
ಬಿಎಸ್ಪಿ ಅಧಿಕಾರಕ್ಕೆ ಬಂದ್ರೆ ಉತ್ತರ ಪ್ರದೇಶ 4 ರಾಜ್ಯಗಳಾಗಿ ವಿಭಜನೆ: ಮಾಯಾವತಿ

ಈಗ ನೀವೇ ಹೇಳಿ, ನಾವು ಪ್ರಧಾನ ಮಂತ್ರಿಯನ್ನು ನಂಬಬೇಕೇ ಅಥವಾ ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್‌ನವರನ್ನು ನಂಬಬೇಕೇ? ಎಂದು ರಾಜ್‌ಭರ್ ಪ್ರಶ್ನಿಸಿದರು ಹೇಳಿದರು.

'ಯುವಜನರು ಧೈರ್ಯ ಕಳೆದುಕೊಳ್ಳಬಾರದು. ರಾಜ್ಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗುವುದು. 'ಪೂರ್ವಾಂಚಲ' ರಾಜ್ಯ ರಚನೆಯಾದ ದಿನದಂದು, ಮುಖ್ಯಮಂತ್ರಿ ಹುದ್ದೆ ಯಾವುದೇ ಜಾತಿಯವರಿಗೆ ಮೀಸಲಾಗಿದ್ದರೂ, ಒಬ್ಬ ರಾಜ್‌ಭರ್‌ನ ಮಗನೇ ಮುಖ್ಯಮಂತ್ರಿಯಾಗಲಿದ್ದಾರೆ. ಕೆಲಸ ಮಾಡುವಾಗ ಇದನ್ನು ನೆನಪಿನಲ್ಲಿಡಿ. ಎಸ್‌ಪಿ, ಬಿಎಸ್‌ಪಿ ಅಥವಾ ಕಾಂಗ್ರೆಸ್ ಪಕ್ಷಗಳನ್ನು ಸೇರುವ ಮೂಲಕ ದಾರಿ ತಪ್ಪಬೇಡಿ' ಎಂದು ಹೇಳಿದರು.

ರಾಜ್‌ಭರ್‌ಗಳು ಅತ್ಯಂತ ಹಿಂದುಳಿದ ಜಾತಿಗಳ ಪೈಕಿ ಒಂದೆಂದು ಪರಿಗಣಿಸಲ್ಪಟ್ಟಿದ್ದು, ಪೂರ್ವ ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಗಮನಾರ್ಹ ಪ್ರಭಾವವನ್ನು ಹೊಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com