"ಮುಸ್ಲಿಂ ಯುವಕರೇ ನಿಮ್ಮ ಸಹೋದರಿಯರನ್ನು ಕರೆತನ್ನಿ, ನಮ್ಮ ಹುಡುಗರು ರೆಡಿ": ಗರ್ಬಾದಲ್ಲಿ ನಾಲಿಗೆ ಹರಿಬಿಟ್ಟ BJP ಶಾಸಕ!

ಮುಸ್ಲಿಂ ಯುವಕರು ಗರ್ಬಾ ಕಾರ್ಯಕ್ರಮಕ್ಕೆ "ಒಂಟಿಯಾಗಿ ಬರಬಾರದು, ಬದಲಿಗೆ ತಮ್ಮ ಸಹೋದರಿಯರು ಮತ್ತು ಪುತ್ರಿಯರನ್ನೂ ಕರೆದುಕೊಂಡು ಬರಬೇಕು" ಎಂದು ಹೇಳಿದ್ದಾರೆ.
"Bring Your Sisters": BJP MLA Rameshwar Sharma's Remark On Muslims At Garba Triggers Row
ರಾಮೇಶ್ವರ್ ಶರ್ಮಾ
Updated on

ಭೋಪಾಲ್‌: ಮಧ್ಯಪ್ರದೇಶದ ಬಿಜೆಪಿ ಶಾಸಕರೊಬ್ಬರು ಗರ್ಬಾ ಕಾರ್ಯಕ್ರಮಗಳಿಗೆ ಮುಸ್ಲಿಮರ ಪ್ರವೇಶದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಎಐಎಂಐಎಂ(AIMIM), ನಿಮ್ಮ ಕೊಳಕು ಮನಸ್ಥಿತಿ ಬದಲಾಯಿಸಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿವೆ.

ರಾಜಧಾನಿ ಭೋಪಾಲ್‌ನ ಹುಜೂರ್ ಕ್ಷೇತ್ರದ ಬಿಜೆಪಿ ಶಾಸಕ ರಾಮೇಶ್ವರ್ ಶರ್ಮಾ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಮುಸ್ಲಿಂ ಯುವಕರು ಗರ್ಬಾ ಕಾರ್ಯಕ್ರಮಕ್ಕೆ "ಒಂಟಿಯಾಗಿ ಬರಬಾರದು, ಬದಲಿಗೆ ತಮ್ಮ ಸಹೋದರಿಯರು ಮತ್ತು ಪುತ್ರಿಯರನ್ನೂ ಕರೆದುಕೊಂಡು ಬರಬೇಕು" ಎಂದು ಹೇಳಿದ್ದಾರೆ.

"ಮುಸ್ಲಿಂ ಯುವಕರು ಗರ್ಬಾಕ್ಕೆ ಏಕೆ ಒಂಟಿಯಾಗಿ ಬರಲು ಬಯಸುತ್ತಾರೆ? ಅವರು ಒಂಟಿಯಾಗಿ ಬರಬಾರದು; ಬದಲಾಗಿ, ತಮ್ಮ ಸಹೋದರಿಯರು ಮತ್ತು ಪುತ್ರಿಯರನ್ನು ಜೊತೆಯಲ್ಲಿ ಕರೆತರಬೇಕು" ಎಂದು ಬಿಜೆಪಿ ಶಾಸಕ ಹೇಳಿದ್ದಾರೆ. ಅಲ್ಲದೆ ವ್ಯಂಗ್ಯವಾಗಿ ನಗುತ್ತಲೇ, "ನಮ್ಮ ಹುಡುಗರೂ ಕೂಡ ರೆಡಿ ಇದ್ದಾರೆ" ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

"Bring Your Sisters": BJP MLA Rameshwar Sharma's Remark On Muslims At Garba Triggers Row
Video: ಪತ್ನಿ, ಮಗಳೊಂದಿಗೆ ಲಾಲ್‌ಬಾಗ್ಚಾ ರಾಜನ ದರ್ಶನ ಪಡೆದ ಶಾರುಖ್ ಖಾನ್; ಗಣೇಶನಿಗೆ ಭಕ್ತಿಯಿಂದ ಕೈಮುಗಿದ ಕಿಂಗ್ ಖಾನ್!

ಮುಂದುವರಿದು ಮಾತನಾಡಿದ ಶಾಸಕರು, "ಒಂದು ವೇಳೆ ಮುಸ್ಲಿಮರು ಶಾಶ್ವತವಾಗಿ ನಮ್ಮೊಂದಿಗೆ ಸೇರಲು ಬಯಸಿದರೆ, ಅದಕ್ಕೂ ನಾವು ಸಿದ್ಧರಿದ್ದೇವೆ. ಬನ್ನಿ, 'ಜೈ ಶ್ರೀ ರಾಮ್' ಎಂದು ಘೋಷಿಸಿ ಮತ್ತು ಹಣೆಗೆ ತಿಲಕ ಹಚ್ಚಿಕೊಳ್ಳಿ. ಅದರಿಂದ ಯಾರಿಗೂ ಯಾವುದೇ ಸಮಸ್ಯೆಯಿಲ್ಲ" ಬಿಜೆಪಿ ಶಾಸಕ ಹೇಳಿದ್ದಾರೆ.

ಗರ್ಬಾ ಕಾರ್ಯಕ್ರಮಕ್ಕೆ ಬಂದು ಲವ್​ ಜಿಹಾದ್​ಗೆ ಯತ್ನಿಸಿದರೆ ನಮ್ಮ ಹುಡುಗರು ನಿಮ್ಮನ್ನು ಸುಮ್ಮನೇ ಬಿಡೋದಿಲ್ಲ. ಪ್ರತೀಕಾರ ತೀರಿಸಿಕೊಳ್ಳುತ್ತಾರೆ. ನಮ್ಮ ಯುವಕರು ಹೆತ್ತವರ ಸೇವೆ ಮಾಡಬೇಕು. ತಮ್ಮ ಸಹೋದರಿಯರನ್ನು ರಕ್ಷಿಸಿಕೊಳ್ಳಬೇಕು. . ಜಗದಂಬಾ ದೇವಿಯ ಆಶೀರ್ವಾದವನ್ನು ಪಡೆಯುವುದರ ಜೊತೆಗೆ ರಾಕ್ಷಸರ ನಿರ್ಮೂಲನೆಗೆ ಸಿದ್ಧರಾಗಿರಬೇಕು ಎಂದು ಶರ್ಮಾ ಕರೆ ನೀಡಿದ್ದಾರೆ.

ರಾಮೇಶ್ವರ್​ ಶರ್ಮಾ ಅವರ ಹೇಳಿಕೆ ನಿಜಕ್ಕೂ ನಾಚಿಕೆಗೇಡಿನ ವಿಚಾರ. ಇಂತಹ ಕೊಳಕು ಹೇಳಿಕೆ ನೀಡೋದನ್ನ ಮೊದಲು ನಿಲ್ಲಿಸಿ. ನಿಮ್ಮ ರೀತಿ-ನೀತಿ ಹಾಗೂ ನಿಯಮವನ್ನು ಬದಲಾಯಿಸಿಕೊಳ್ಳಿ. ಅಷ್ಟಕ್ಕೂ ಗರ್ಬಾ ಕಾರ್ಯಕ್ರಮಕ್ಕೆ ಮುಸ್ಲಿಮರು ಬರೋದಿಲ್ಲ ಎಂದು ಭೋಪಾಲ್ ಸೆಂಟ್ರಲ್‌ನ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಕೆಂಡಕಾರಿದರು.

ಇನ್ನು AIMIM ಮಧ್ಯಪ್ರದೇಶದ ಅಧ್ಯಕ್ಷ ಮೊಹ್ಸಿನ್ ಅಲಿ ಖಾನ್ ಮಾತನಾಡಿ, ಮೊದಲಿಗೆ ಶರ್ಮಾ ಅವರು ಸಂವಿಧಾನವನ್ನು ಓದಿಕೊಳ್ಳಬೇಕು. ಅವರ ಹೇಳಿಕೆಯೂ ದೇಶ ವಿಭಜಿಸಲು ಸಹಾಯ ಮಾಡಿದಂತಿದೆ. ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಶಹನವಾಜ್ ಹುಸೇನ್ ಅವರಂತಹ ಬಿಜೆಪಿ ನಾಯಕರೊಂದಿಗೆ ಸಮಾಲೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com